April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಿಶಿಲ ಸೃಷ್ಟಿ ಸಂಜೀವಿನಿ ಒಕ್ಕೂಟದ ವತಿಯಿಂದ ಆಟಿಡೊಂಜಿ ದಿನ

ಶಿಶಿಲ : ಸೃಷ್ಟಿ ಸಂಜೀವಿನಿ ಒಕ್ಕೂಟದ ವತಿಯಿಂದ ಶಿಶಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಗಿರಿಜಾ. ಯಸ್ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ರೇಣುಕಾ ಸುಧೀರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಳ್ತಂಗಡಿ ವಲಯ ಮೇಲ್ವಿಚಾರಕರಾದ ಜಯಾನಂದ್ ರವರು ಕಾರ್ಯಕ್ರಮ ದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಲೂಕು ವ್ಯವಸ್ಥಾಪಕರಾದ ನಿತೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಮಹತ್ವ ಹಾಗೂ ಎನ್.ಆರ್.ಎಲ್.ಎಮ್ ಯೋಜನೆಯ ಬಗ್ಗೆ ಸಾವಿಸ್ತಾರವಾದ ಮಾಹಿತಿ ನೀಡಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ರೇಣುಕಾ ರವರು ಆಟಿ ತಿಂಗಳಲ್ಲಿ ಮಾಡಬಹುದಾದ ಕಾರ್ಯಗಳ ಬಗ್ಗೆ ಮತ್ತು ಪರಿಸರದಲ್ಲಿ ಸಿಗುವ ವಿವಿಧ ರೀತಿಯ ಪೌಷ್ಟಿಕಾಂಶ ಸೊಪ್ಪುಗಳನ್ನು ಬಳಸಿ ಖಾದ್ಯ ಗಳನ್ನು ತಯಾರಿಸಿ ತಿನ್ನುವುದರಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಸುದೀರ್ಘವಾಗಿ ವಿವರಿಸಿದರು. ಗ್ರಾಮದ ಸಿಹೆಚ್.ಒ ಪವಿತ್ರಾ ರವರು ಮಹಿಳೆಯರ ಆರೋಗ್ಯದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯೆಯರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಜೊತೆಗೆ ಸದಸ್ಯೆಯರು ಸುಮಾರು 72ಕ್ಕೂ ಹೆಚ್ಚಿನ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಿ ತಂದಿದ್ದರು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಸದಸ್ಯೆಯರು ಸಂಧಿ ಪಾದ್ದನ ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಕೊಕ್ಕಡ ವಲಯ ಮೇಲ್ವಿಚಾರಕಿ ವೀಣಾಶ್ರೀ , ಹತ್ಯಡ್ಕ ಬ್ಯಾಂಕ್ ನ ನಿರ್ದೇಶಕರು ತಾರಾ, ಪಂಚಾಯತ್ ಸದಸ್ಯೆ ಲಲಿತ, ಸುಗುಣ ಕುಮಾರಿ, ಗ್ರಾಮ ಆಡಳಿತಾಧಿಕಾರಿ ತೇಜಸ್ವಿನಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆಯರು ಆಶಾಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಕೃಷಿ ಸಖಿ ವಸಂತಿ ಯವರು ಪ್ರಾರ್ಥನೆಯನ್ನು ಹಾಡಿದರು. ಎಮ್.ಬಿ.ಕೆ ಶಾರದಾ ಸ್ವಾಗತಿಸಿದರು. ಪಶು ಸಖಿ ಎಲ್.ಸಿಆರ್.ಪಿ ಗಳು ಒಕ್ಕೂಟದ ಪದಾಧಿಕಾರಿಗಳು, ಸಂಜೀವಿನಿ ಒಕ್ಕೂಟದ 100ಕ್ಕೂ ಹೆಚ್ಚು ಸದಸ್ಯೆ ಯರು ಭಾಗವಹಿಸಿದ್ದರು.

Related posts

ಸಾವ್ಯ: ಮರದಿಂದ ಬಿದ್ದ ವ್ಯಕ್ತಿ; ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಬೆಳ್ತಂಗಡಿ ಪಿಎಂ ಶ್ರೀ ಮಾದರಿ ಶಾಲಾ ವಾರ್ಷಿಕೋತ್ಸವ

Suddi Udaya

ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಬೃಹತ್ ರಕ್ತದಾನ ಶಿಬಿರ

Suddi Udaya

ಕೊಕ್ಕಡ: ಹೊಸೊಕ್ಲುವಿನಲ್ಲಿ ಬೃಹತ್ ಗಾತ್ರದ ಶಂಖಪಾಲ ಹಾವು ಪತ್ತೆ

Suddi Udaya

ಇಂದಬೆಟ್ಟು: ಕಲ್ಲಾಜೆ ನಿವಾಸಿ ವಸಂತ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಕೃಷಿ ಇಲಾಖೆಯಲ್ಲಿ ಜಲಾನಯನ ಪ್ರದೇಶದ ರೈತರಿಗೆ ಕೈಗಾಡಿ, ಪವರ್ ವಿಹಾರ್ ಯಂತ್ರೋಪಕರಣ ವಿತರಣೆ

Suddi Udaya
error: Content is protected !!