31.8 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ಹಾಗೂ ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವತಿಯಿಂದ ಹರೀಶ್ ಮೂಲ್ಯ ರವರಿಗೆ ಆರ್ಥಿಕ ಧನಸಹಾಯ

ನಾವರ ಗ್ರಾಮದ ದೇವರಗುಡ್ಡೆ ನಿವಾಸಿ ಹರೀಶ್ ಮೂಲ್ಯ ರವರು ಮರದ ಕಟ್ಟಿಂಗ್ ನ ಕೆಲಸ ಮಾಡುತ್ತಿರುವಾಗ ಮೆಷೀನ್ ಜಾರಿ ಅವರ ಕಾಲಿನ ಮೇಲೆ ಬಿದ್ದು ಸುಮಾರು 12 ಹೊಲಿಗೆಗಳನ್ನು ಹಾಕಿರುತ್ತಾರೆ. ಅವರ ಮಗನು ಶ್ರೀರಾಮ ಶಾಲೆ ಸುಳ್ಕೇರಿಯ ವಿದ್ಯಾರ್ಥಿಯಾಗಿದ್ದು ಅವನ ಕಾಲಿನ ಮೇಲೆ ಡೆಸ್ಕ್ ಬಿದ್ದು ಅವನು ಕೂಡ ಶಾಲೆಗೆ ಹೋಗಲಾರದೇ ಮನೆಯಲ್ಲಿಯೇ ಇದ್ದಾನೆ.. ತುಂಬಾ ಬಡತನದಲ್ಲಿರುವ ಅವರ ಕುಟುಂಬಕ್ಕೆ ಲಯನ್ಸ್ ಕ್ಲಬ್ ಬೆಳ್ತಂಗಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಾವರ ಇವರ ವತಿಯಿಂದ 25 ಸಾವಿರ ರೂಪಾಯಿ ಯನ್ನು ಅವರ ಮನೆಗೆ ಹೋಗಿ ನೀಡಲಾಯಿತು.


ಈ ಸಂದರ್ಭ ಲಯನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ಲಯನ್ ದೇವದಾಸ್ ಶೆಟ್ಟಿ ಹಿಮರೋಡಿ, ನಾವರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದಂತಹ ಲಯನ್ ಪ್ರಕಾಶ್ ಶೆಟ್ಟಿ ನೊಚ್ಚ, ನಾವರ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಾಧ್ಯಕ್ಷ ಲಯನ್ ನಿತ್ಯಾನಂದ ನಾವರ, ಆಡಳಿತ ಸಮಿತಿಯ ಸದಸ್ಯ ಲಯನ್ ರವಿ ಪೂಜಾರಿ ಹಾರಡ್ಡೆ, ಲಯನ್ ಪ್ರಶಾಂತ್ ಪೂಜಾರಿ ಹಿಮರಡ್ಡ ಉಪಸ್ಥಿತರಿದ್ದರು.

Related posts

ಪೆರೋಡಿತ್ತಾಯಕಟ್ಟೆ ಸ.ಉ.ಪ್ರಾ. ಶಾಲಾ ಕಾಮಗಾರಿಗಳ ಹಸ್ತಾಂತರ, ನಿವೃತ್ತ ಶಿಕ್ಷಕರ ಸನ್ಮಾನ ಮತ್ತು ಶಾಲಾ ಪ್ರತಿಭಾ ಪುರಸ್ಕಾರ

Suddi Udaya

ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾಗಿ ಎರಡನೇ ಭಾರಿಗೆ ಬಿ.ಕೆ.ವಸಂತ್ ಬೆಳ್ತಂಗಡಿ ಆಯ್ಕೆ

Suddi Udaya

ಕಳೆಂಜ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಉಜಿರೆಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ

Suddi Udaya

ಕುವೆಟ್ಟು ಗ್ರಾ.ಪಂ. ನಿಂದ ಸಹಾಯಧನ ಹಸ್ತಾಂತರ

Suddi Udaya

ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya
error: Content is protected !!