September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ರಸ್ತೆ ಬದಿ ಹಣ್ಣಿನ ಗಿಡ ನಾಟಿ, ನೆಟ್ಟ ಗಿಡಗಳ ಪುನಶ್ಚೇತನ ಮತ್ತು ಇಂಗು ಗುಂಡಿ ರಚನಾ ಕಾರ್ಯಕ್ರಮ

ಹೊಸಂಗಡಿ : ಫ್ರೆಂಡ್ಸ್ ಕ್ಲಬ್( ರಿ ) ಹೊಸಂಗಡಿ ಇವರ ಆಶ್ರಯದಲ್ಲಿ, ಗ್ರಾಮ ಪಂಚಾಯತ್ ಹೊಸಂಗಡಿ, ವಿಜಯ ಗ್ರಾಮಾಭಿವೃದ್ಧಿ ಪ್ರತಿಷ್ಟಾನ(ರಿ ) ಮಂಗಳೂರು ಮತ್ತು ರೋಟರಿ ಕ್ಲಬ್, ಸಿದ್ದಕಟ್ಟೆ ಫಲ್ಗುಣಿ ಇವರ ಸಹಕಾರದೊಂದಿಗೆ, ನೆಲ – ಜಲ ಸಂರಕ್ಷಣಾ ಅಭಿಯಾನ -2024 ಕಾರ್ಯಕ್ರಮದಡಿ, ನನ್ನ -ನೆಲ ನನ್ನ – ಜಲ ಯೋಜನೆಯಡಿ, ಆ. 18ರಂದು ಹೊಸಂಗಡಿ – ದೇರಾರು – ನೀಲಗಿರಿ ರಸ್ತೆ ಬದಿ ಹಣ್ಣಿನ ಗಿಡ ನೆಡುವುದು, ನೆಟ್ಟ ಗಿಡಗಳ ಪುನಶ್ಚೇತನ ಮತ್ತು ಇಂಗು ಗುಂಡಿ ರಚನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ ಹೆಗ್ಡೆ ಇವರು ವಹಿಸಿದ್ದರು. ಕಾರ್ಯಕ್ರಮದ ಚಾಲನೆಯನ್ನು ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಇದರ ಅಧ್ಯಕ್ಷ ಶಿವಯ್ಯ. ಬಿ. ನೀಡಿ ಪರಿಸರ ಮತ್ತು ಜಲ ಸಂರಕ್ಷಣೆ ಉಳಿವಿನ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿ. ಪಂ.ಮಾಜಿ ಉಪಾಧ್ಯಕ್ಷ ಪಿ. ಧರಣೇಂದ್ರ ಕುಮಾರ್ ಇವರು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಕ್ಲಬ್ ಹೊಸಂಗಡಿ ಇದರ ಅಧ್ಯಕ್ಷ ಶ್ರೀಪತಿ ಉಪಧ್ಯಾಯ, ಕಾರ್ಯದರ್ಶಿ ಸುಜಿತ್ ಕುಮಾರ್ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶಾಂತ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪದ್ಮರಾಜಪೇರಿ, ಆನಂದ ಬಂಗೇರ ಕೊಡಿಂಗೇರಿ ಹಾಗೂ ಫ್ರೆಂಡ್ಸ್ ಕ್ಲಬ್ ನ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಹೊಸಂಗಡಿ ಇದರ ಅಧ್ಯಕ್ಷ ಹರಿಪ್ರಸಾದ್. ಪಿ ಇವರು ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆ ನೀಡಿ ಸ್ವಾಗತಿಸಿದರು.


ಹೊಸಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.
ಕಾರ್ಯಕ್ರಮದಲ್ಲಿ ಸುಮಾರು 47 ಗಿಡಗಳನ್ನು ಯುವಕರು ತಲಾ ಒಂದರಂತೆ ನೆಟ್ಟು, ಇಂಗುಗುಂಡಿ ರಚಿಸಿ ಅದರ ಸಂರಕ್ಷಣೆ ಗೊಳಿಸುವ ಪ್ರತಿಜ್ಞೆ ಕೈಗೊಂಡರು. ಕಳೆದ ವರ್ಷ ನೆಟ್ಟು ಬೆಳೆಸಿದ 57 ಸಾಲು ಗಿಡಗಳ ಪುನಃ ಶ್ಚೇತನ ಗೊಳಿಸಿದರು.

Related posts

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಬೆಳ್ತಂಗಡಿ ಕೇಂದ್ರಕ್ಕೆ “ಎಕ್ಸಲೆನ್ಸ್ ಇಂಪ್ಯಾಕ್ಟ್ ಅವಾರ್ಡ್ 2026” ಗೌರವ

Suddi Udaya

ಜು.13: ಗುರುವಾಯನಕೆರೆ ವಿದ್ಯುತ್ ನಿಲುಗಡೆ

Suddi Udaya

ಕನ್ಯಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿ ರಚನೆ

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯ 2023-24 ನೇ ಸಾಲಿನ ವಾರ್ಷಿಕ ವರದಿ ಬಿಡುಗಡೆ

Suddi Udaya

ಉಜಿರೆ ಮೈಸೂರು ಗಾರ್ಮೆಂಟ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಪ್ರತಿ ರೂ 1 ಸಾವಿರ ಖರೀದಿಯೊಂದಿಗೆ ಆಕರ್ಷಕ ಗಿಪ್ಟ್

Suddi Udaya

ಪಾತಾಳ ವೆಂಕಟರಮಣ ಭಟ್ಟರಿಗೆ ಕುರಿಯ ಪ್ರಶಸ್ತಿ

Suddi Udaya
error: Content is protected !!