24.5 C
ಪುತ್ತೂರು, ಬೆಳ್ತಂಗಡಿ
April 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ದ.ಕ. ಜಿಲ್ಲೆಯ ಸಿ.ಬಿ.ಎಸ್.ಇ ಅಂತರ ಶಾಲೆಗಳ ಐಕ್ಸ್ (AICS) ಸಾಂಸ್ಕೃತಿಕ ಸ್ಪರ್ಧೆ

ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಿ.ಬಿ.ಎಸ್.ಇ ಅಂತರ ಶಾಲೆಗಳ ಐಕ್ಸ್ (AICS) ಸಾಂಸ್ಕೃತಿಕ ಸ್ಪರ್ಧೆ “ಆನ್ವೀಕ್ಷ್ಯಂ-2024” ಎಂಬ ಶೀರ್ಷಿಕೆಯಡಿಯಲ್ಲಿ ಆ.21 ರಂದು ನಡೆಯಿತು.

ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ.ಎಸ್ ಕಾರ್ಯಕ್ರಮ ಉದ್ಘಾಟಿಸಿ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದ ಸ್ಪರ್ಧಾರ್ಥಿಗಳಿಗೆ ಶುಭಹಾರೈಸಿದರು.

ಶಾಲೆಯ ಹಿರಿಯ ವಿದ್ಯಾರ್ಥಿನಿ ಡಾ.ಅಖಿಲ ಭಂಡಾರ್ಕರ್.ಪಿ (ಎಮ್.ಬಿ.ಬಿ.ಎಸ್, ಎಮ್.ಡಿ ಜೆನೆರಲ್ ಮೆಡಿಸಿನ್, ಡಿ.ಎಮ್ ಎಂಡೋಕ್ರಿನೋಲಜಿ) ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ, ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಧನ್ಯಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಶಾಲಾ ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.

ಸ್ಪರ್ಧೆಯಲ್ಲಿ ಜಿಲ್ಲೆಯ ಒಟ್ಟು 33 ಸಿ.ಬಿ.ಎಸ್.ಇ ಶಾಲಾ ತಂಡಗಳು ಭಾಗವಹಿಸಿದ್ದವು.

Related posts

ಉಜಿರೆ: ಶ್ರೀ ಧ. ಮಂ. ಆಂ. ಮಾ. ಶಾಲೆಯಲ್ಲಿ ಯೋಗ ಉದ್ಘಾಟನಾ ಕಾರ್ಯಕ್ರಮ

Suddi Udaya

ಚಂದ್ರನ ಮೇಲೆ ಸ್ಪರ್ಶ, ಎಕ್ಸೆಲ್ ನಲ್ಲಿ ಹರ್ಷ

Suddi Udaya

ಕಿಲ್ಲೂರಿನಲ್ಲಿ ಗ್ರಾಮೀಣ ಆಟಗಳ ಸಂಗಮ

Suddi Udaya

ಅಂತಾರಾಷ್ಟ್ರೀಯ ಸೀನಿಯರ್ ಛೇಂಬರ್‍ ನ ರಾಷ್ಟ್ರೀಯ ಸಹ ನಿರ್ದೇಶಕರಾಗಿ ಪ್ರಮೋದ್ ಆರ್ ನಾಯಕ್ ಆಯ್ಕೆ

Suddi Udaya

ಪಿಯುಸಿ ಫಲಿತಾಂಶ: ರಾಜ್ಯಮಟ್ಟದಲ್ಲಿ ಅತ್ಯುತ್ತಮ ಸಾಧನೆಗೈದ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು, ಶೇ.100 ಫಲಿತಾಂಶ

Suddi Udaya

ಕಡಿರುದ್ಯಾವರ ಆನೆ ಸಂತ್ರಸ್ತರ ಹೋರಾಟ ಸಮಿತಿಯಿಂದ ಕಾಡಂಚಿನಲ್ಲಿ ಆನೆಕಂದಕ ಮತ್ತು ಸೋಲಾರ್ ವಿದ್ಯುತ್ ಬೇಲಿ ರಚನೆಯ ಬೇಡಿಕೆಗೆ ಮನವಿ

Suddi Udaya
error: Content is protected !!