23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ನಾಳ: ದ್ವಿಚಕ್ರ ವಾಹನ ಅಪಘಾತ: ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ದ್ವಿಚಕ್ರ ವಾಹನ ಅಪಘಾತದಿಂದ ಮೂವರು ಗಾಯಗೊಂಡಿರುವ ಕುರಿತು ನಾಳ ಸಮೀಪದ ನ್ಯಾಯತರ್ಪು ನಿವಾಸಿ ಅನುಷ ಬಿ. (27ವ) ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.20 ರಂದು ರಾತ್ರಿ, ಅಶ್ವಥ್ ರವರು ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ಸವಾರನಾಗಿ ಅಶ್ವಥ್ ರವರು ಹಾಗೂ ಸಹಸವಾರಳಾಗಿ ಅನುಷ ಹಾಗೂ ಅನುಷ ರವರ ಮಗ ರಿದ್ವಿನ್ ರವರನ್ನು ಕುಳ್ಳಿರಿಸಿಕೊಂಡು ಗೇರುಕಟ್ಟೆ ಕಡೆಯಿಂದ ಗೋವಿಂದೂರು ಕಡೆ ತೆರಳುತ್ತಾ ಕಳಿಯ ಗ್ರಾಮದ ತಾರಿದಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ, ಅಶ್ವಥ್ ರವರು ಸದ್ರಿ ದ್ವಿಚಕ್ರ ವಾಹನವನ್ನು ದುಡುಕುತನದಿಂದ ಸವಾರಿ ಮಾಡಿದ ಪರಿಣಾಮ, ಅನುಷ ಹಾಗೂ ರಿದ್ವಿನ್ ಹಾಗೂ ಅಶ್ವಥ್ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಗಾಯಾಳುಗಳು ಚಿಕತ್ಸೆಗಾಗಿ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 87/2024 ಕಲಂ: 281, 125(A), BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್‌ಗಾರ್ಟನ್ ವಿಭಾಗದಲ್ಲಿ “ಜಂಗಲ್ ಜಂಬೂರಿ” ಕಾರ್ಯಕ್ರಮ

Suddi Udaya

ಮುಂಡೂರು ಸ. ಕಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳಗಿರಿ ಕ್ಷೇತ್ರದ ವತಿಯಿಂದ ಉಚಿತ ಪುಸ್ತಕ ವಿತರಣೆ

Suddi Udaya

ಮಂಗಳೂರಿನ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಇವರ ನೇತೃತ್ವದಲ್ಲಿ ನಡೆಯುವ ಗಣೇಶೋತ್ಸವಕ್ಕೆ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದಿಂದ ಹೊರಕಾಣಿಕೆ ಸಮರ್ಪಣೆ

Suddi Udaya

ಇಂದಬೆಟ್ಟು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಇಬ್ರಾಹಿಂ ರವರ ಮನೆ ಕುಸಿತ

Suddi Udaya

ಬೆಳ್ತಂಗಡಿ ಶ್ರೀ ರಾಘವೇಂದ್ರ ಮಠದಲ್ಲಿ ಶಿರೂರು ಮಠದ ಪೀಠಾಧಿಪತಿಗಳಿಂದ ವಿಶೇಷ ಪ್ರವಚನ

Suddi Udaya

ಕಣಿಯೂರು ವಲಯದ ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

Suddi Udaya
error: Content is protected !!