ಗುರುವಾಯನಕೆರೆ: ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ ಇವರ ಆಶ್ರಯದಲ್ಲಿ 32 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವವು ಅತ್ಯಂತ ಅದ್ದೂರಿಯಾಗಿ ಆ 26ರಂದು ಜರುಗಿತು.
ನಾಗೇಶ್ ಪೂಜಾರಿ, ಆದೇಲು ಇವರ ಅಧ್ಯಕ್ಷತೆಯಲ್ಲಿ
ಕುಣಿತ ಭಜನೆ, ಹಲವಾರು ಸಾಂಸ್ಕೃತಿಕ ಮತ್ತು
ಕ್ರೀಡಾ ಸ್ಪರ್ಧೆಗಳಲ್ಲಿ ನೂರಾರು ಭಕ್ತರು,ಕಲಾಭಿಮಾನಿಗಳು, ಕ್ರೀಡಾಸಕ್ತರು, ಸಾರ್ವಜನಿಕರು
ಭಾಗವಹಿಸಿದ್ದರು. ಒಟ್ಟು 150ಕ್ಕಿಂತಲೂ ಹೆಚ್ಚು ಸ್ಪರ್ಧಾ
ವಿಜೇತರು ಬಹುಮಾನ ಸ್ವೀಕರಿಸಿ ಪ್ರಶಸ್ತಿ ಪತ್ರಗಳನ್ನು
ಪಡೆದುಕೊಂಡರು. ಸ್ಪರ್ಧೆಗಳಲ್ಲಿ ಮಲ್ಲ ಕಂಬ ಸ್ಪರ್ಧೆ,
ಭಗವದದ್ಗೀತಾ ಶ್ಲೋಕ ಪಠಣ, ಶ್ರೀ ಕೃಷ್ಣಾ ಲೀಲಾ ಕಥೆ
ಶ್ರೀ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಗಳು ಬಾಲಕೃಷ್ಣ
ವೇಷ, ಯಶೋಧೆ ಮತ್ತು ಕೃಷ್ಣ ವಿಶೇಷವಾಗಿ
ಆಯೋಜಿಸಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ
ಪ್ರಾಚಾರ್ಯರಾದ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ
ಶ್ರೀ ಕೃಷ್ಣನ ಕಥೆಯನ್ನು ಅರ್ಥಪೂರ್ಣವಾಗಿ ಹೇಳಿದರು.
ಅಧ್ಯಕ್ಷತೆಯನ್ನು ಶ್ರೀ ಸ್ಟಾರ್ ಯುವಕ ಮಂಡಲ ಪಣೆಜಾಲು ಅಧ್ಯಕ್ಷರಾದ ನಾಗೇಶ್ ಪೂಜಾರಿ ಆದೇಲು ವಹಿಸಿದರು. ಅತಿಥಿಗಳಾಗಿ. ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಭಾರತಿ ಎಸ್ ಶೆಟ್ಟಿ. ಸಿನಿಮಾ ನಿರ್ದೇಶಕರಾದ ಸ್ವೀತೇಶ್ ಬಾರ್ಯ. ಬೆಳ್ತಂಗಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕರಾದ ಶಾಂತಪ್ಪ. ಶ್ರೀ ಸ್ಟಾರ್ ಮಹಿಳಾ ಮಂಡಲ ಅಧ್ಯಕ್ಷರಾದ ಪ್ರಮೀಳಾ. ಉಪಸ್ಥಿದ್ದರು.
ಸನ್ಮಾನಿತರು
ಉಜಿರೆಯ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ಮುಖ್ಯಸ್ಥರು ಮತ್ತು ಮನಶಾಸ್ತ್ರಜ್ಞ ಶ್ರೀಮತಿ ಮಲ್ಲಿಕಾ ಎಸ್. ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ಯತ ಅಂಕ ಪಡೆದ ಸ್ಥಳೀಯ ಪ್ರತಿಭೆ ಆಶ್ಲೇಷ್ ಜೆ. ಎಸ್. ಅಖಿಲ ಭಾರತ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಅಂಕಗಳೊಂದಿಗೆ ಉತ್ತೀರ್ಣಗೊಂಡ ಸಾಧಕ್ಕಿ ಕುಮಾರಿ ಸುಕನ್ಯಾ ವಿ ಕಾಮತ್ ಸನ್ಮಾನಿಸಲಾಯಿತು.
ರಾತ್ರಿ ಸಾಂಸ್ಕೃತಿ ಕಾರ್ಯಕ್ರಮ ಮತ್ತು ಆಲ್ ಎನ್ನ್ ಲ್ ಎಂಬ ತುಳು ಸಾಮಾಜಿಕ ಹಾಸ್ಯಮಯ ನಾಟಕ ನಡೆಯಿತು