24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಾರ್ಯಲಯ ಉದ್ಘಾಟನೆ

ಬೆಳ್ತಂಗಡಿ: ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಹಾಗೂ ಸಮಿತಿಗಳನ್ನು ರಚಿಸಿ ಆದೇಶಿಸಿದಂತೆ ಬೆಳ್ತಂಗಡಿ ತಾಲೂಕು ಆಡಳಿತ ಕಚೇರಿಯಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕಚೇರಿಯನ್ನು ಜಿಲ್ಲಾ ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅಧಿಕಾರಕ್ಕೆ ಬಂದು ಆರು ತಿಂಗಳೊಳಗೆ ಕರ್ನಾಟಕದ ಜನತೆಗೆ ತಲುಪಿಸುವ ಕೆಲಸ ಮಾಡಿದ್ದಾರೆ ಎಂದರು.

ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ ಮಾತನಾಡಿ ಶರವೇಗದಲ್ಲಿ ಪಂಚ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವಲ್ಲಿ ಕಾಂಗ್ರೇಸ್ ಸರಕಾರ ಯಶಸ್ವಿಯಾಗಿದೆ.ಈ ಯೋಜನೆಯಿಂದ ಕೊಟ್ಯಂತರ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದರು.

ಬೆಳ್ತಂಗಡಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಮಾತನಾಡಿ ಕೆಲವೊಂದು ಕಾರಣಗಳಿಂದ ಪಂಚ ಯೋಜನೆಗಳು ತಲುಪದ ಮನೆಗಳಿಗೆ ನಮ್ಮ ತಂಡಗಳನ್ನು ಕಳಿಸಿ ವಿವರಗಳನ್ನು ಪಡೆಯುವ ಮೂಲಕ ಅವರಿಗೆ ಯೋಜನೆಯನ್ನು ತಲುಪಿಸುವ ಪ್ರಯತ್ನ ಮಾಡುತ್ತೇವೆ. ಕಳೆದ 25 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದು ಸರಕಾರ ನನ್ನನ್ನು ಗುರುತಿಸಿ ಒಳ್ಳೆಯ ಸ್ಥಾನಮಾನ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಉಭಯ ಬ್ಲಾಕ್ ಕಾಂಗ್ರೇಸ್ ಘಟಕದ ಅಧ್ಯಕ್ಷರಾದ ಸತೀಶ್ ಕಾಶಿಪಟ್ನ, ನಾಗೇಶ್ ಕುಮಾರ್ ಗೌಡ,ಜಿ.ಪಂ ಮಾಜಿ ಸದಸ್ಯರಾದ ಸಾಹುಲ್ ಹಮೀದ್,ನಮಿತಾ ಕೆ ಪೂಜಾರಿ,ಶೇಖರ್ ಕುಕ್ಕೇಡಿ,ಧರಣೇಂದ್ರ ಕುಮಾರ್, ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡೀಸೋಜಾ,ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್,ಅಪರ ಸರಕಾರಿ ವಕೀಲರಾದ ಮನೋಹರ್ ಕುಮಾರ್,ಮಾಜಿ ತಾ.ಪಂ ಸದಸ್ಯರಾದ ಈಶ್ವರ ಭಟ್, ವಿನ್ಸೆಂಟ್ ಡಿಸೋಜಾ,ಪ್ರವೀಣ್ ಫೆರ್ನಾಂಡೀಸ್ ಉಜಿರೆ,ಗೋಪಿನಾಥ ನಾಯಕ್, ಜಯವಿಕ್ರಮ್, ಜಗದೀಶ್ ಡಿ,ಎಸ್.ಸಿ ಘಟಕದ ಅಧ್ಯಕ್ಷರಾದ ಓಬಯ್ಯ ಆರಂಬೋಡಿ, ಅಕ್ರಮ‌ ಸಕ್ರಮ ಸಮಿತಿ ಸದಸ್ಯರಾದ ವಿನುತಾ ರಜತ್ ಗೌಡ, ಪ್ರಮುಖರಾದ ಸಂಜೀವ ಪೂಜಾರಿ ಕೊಡಂಗೆ, ಬಾಲಕೃಷ್ಣ ಶೆಟ್ಟಿ, ಚಿದಾನಂದ ಪೂಜಾರಿ ಎಲ್ದಕ್ಕ,ಮಹಮ್ಮದ್ ಶಾಫಿ ಕಾಶಿಪಟ್ನ, ಯಶೋಧ ಕುತ್ಲೂರು,ನಾರಾಯಣ ಗೌಡ ದೇವಸ್ಯ,ಪುನಿತ್ ಮಡಂತ್ಯಾರ್,ಸೆಲೆಸ್ಟಿನ್ ಡಿಸೋಜಾ, ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸದಸ್ಯರಾದ ವಂದನಾ ಕುಮಾರಿ, ಕೆ.ನೇಮಿರಾಜ ಕಿಲ್ಲೂರು,ಹಕೀಂ ಕೊಕ್ಕಡ,ಸೌಮ್ಯ ಲಾಯಿಲ,ವೀರಪ್ಪ ಮೊಯ್ಲಿ,ವಾಸುದೇವ ರಾವ್,ವಿಜಯ ಗೌಡ ಬೆಳಾಲು, ಸತೀಶ್ ಹೆಗ್ಡೆ,ಅಬ್ದುಲ್ ಸಲಾಂ, ಮರಿಟಾ ಪಿಂಟೋ, ಶ್ರೀಪತಿ ಉಪಾಧ್ಯಾಯ,ಕೇಶವ ನಾಯ್ಕ್,ಯತೀಶ್, ಶರೀಫ್ ಶಬರಬೈಲು ಹಾಗೂ ಕಾಂಗ್ರೇಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಸ್ವಾಗತಿಸಿದರು.ತಾ.ಪಂ ಮ್ಯಾನೇಜರ್ ಪ್ರಶಾಂತ್ ಡಿ.ಬಳಂಜ,ಸಹಾಯಕ ಲೆಕ್ಕಧಿಕಾರಿ ಗಣೇಶ್ ಪೂಜಾರಿ ಉಪಸ್ಥಿತರಿದ್ದರು

Related posts

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ: ಅರುವ ಕೊರಗಪ್ಪ ಶೆಟ್ಟಿ ಅವರಿಗೆ “ಜಾನಪದ ಶ್ರೀ” ಪ್ರಶಸ್ತಿ

Suddi Udaya

ಮೇ.31ಕ್ಕೆ ನಿವೃತ್ತರಾಗುತ್ತಿರುವ ಟೀಚರ್ಸ್ ಕೋಪರೇಟಿವ್ ಬ್ಯಾಂಕ್ ಮೆನೇಜರ್ ಲ| ರವೀಂದ್ರ ಶೆಟ್ಟಿ ಬಳಂಜ

Suddi Udaya

ಇಳ0ತಿಲ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾಗಿ ಸುರೇಶ್ ಗೌಡ ಆಯ್ಕೆ

Suddi Udaya

ಶ್ರೀ ದೇವಿ ಭಗವತಿ ಅಮ್ಮನವರ ಬ್ರಹ್ಮಕಲಶೋತ್ಸವ, ದೇವರ ವಿಗ್ರಹದ ಮೆರವಣಿಗೆ : ಹೊರಕಾಣಿಕೆ ಸಮರ್ಪಣೆ

Suddi Udaya

ಆದಿವಾಸಿ ಸಮುದಾಯಗಳಿಗೆ ರಸ್ತೆ , ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ರಕ್ಷಿತ್ ಶಿವರಾಂ ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ

Suddi Udaya
error: Content is protected !!