March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಾಣಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಪ.ಪೂ. ಕಾಲೇಜುಗಳ ಯೋಗಾಸನ ಸ್ಪರ್ಧೆ

ಬೆಳ್ತಂಗಡಿ : ಚಿತ್ತ ಪ್ರಸನ್ನತೆಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಯೋಗದಿಂದ ಸಾಧ್ಯವಿದೆ ಎಂದು ಮಂಗಳೂರು ಆವಿಷ್ಕಾರ್ ಯೋಗ ತರಬೇತಿ ಕೇಂದ್ರದ ಸ್ಥಾಪಕ ಕುಶಾಲಪ್ಪ ಗೌಡ ನೆಕ್ಕರಾಜೆ ಹೇಳಿದರು.


ಅವರು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ವಾಣಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ ಇದರ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಯೋಗಾಸನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಯೋಗ ಕಾಲ, ದೇಶ, ಜಾತಿ ಧರ್ಮವನ್ನು ಮೀರಿ ಬೆಳೆದಿದ್ದು ವಿಶ್ವ ಮಾನ್ಯತೆಯನ್ನು ಪಡೆದಿದೆ. ಮನುಷ್ಯನ ಮಾನಸಿಕ ಅಸ್ಥಿರತೆಯನ್ನು ಹೋಗಲಾಡಿಸಿ ಸ್ಥಿರತೆಯನ್ನು ಕಾಪಾಡುವ ಯೋಗ ಎಲ್ಲಾ ವಿದ್ಯೆಗಳಂತೆ ಮಹತ್ವವನ್ನು ಪಡೆದಿದೆ. ಇವತ್ತಿನ ಕಾಲದಲ್ಲಿ ಸಂಕಲ್ಪ ಬದ್ಧರಾಗಿ ನಿರಂತರ ಅಭ್ಯಾಸದಿಂದ ಯೋಗವನ್ನು ಅನುಷ್ಠಾನ ಮಾಡಿಕೊಳ್ಳುವುದರಿಂದ ಉನ್ನತ ಆರೋಗ್ಯದೊಂದಿಗೆ ಉತ್ತಮ ಉದ್ಯೋಗವನ್ನು ಗಳಿಸಬಹುದು ಎಂದರು.


ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕರಾದ ಶಶಿಧರ್ ಮಾಣಿ, ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಪ್ರಸಾದ್ ಕುಮಾರ್ ಉಪಸಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಸ್ವಾಗತಿಸಿದರು. ಕ್ರೀಡಾ ಸಯೋಜಕರಾದ ವಿನೀಶ್ ವಂದಿಸಿದರು. ಉಪನ್ಯಾಸಕ ಸುದೀರ್ ಕೆ ಎನ್ ಕಾರ್ಯಕ್ರಮ ನಿರೂಪಿಸಿದರು.

Related posts

ನಾಳ: ದ್ವಿತೀಯ ವರ್ಷದ ಶ್ರೀ ದುರ್ಗಾ ಕಪ್ ಹಿರಿಯರ ಕ್ರಿಕೆಟ್ ಪಂದ್ಯಾಟ

Suddi Udaya

ರಮ್ಯ 1 ಗ್ರಾಂ ಗೋಲ್ಡ್ & ಫ್ಯಾನ್ಸಿಯಲ್ಲಿ ಲ್ಯಾಕ್ಮಿ ಶೋಕೇಸ್ ಅಳವಡಿಕೆ

Suddi Udaya

ಮರೋಡಿ: ಕೂಕ್ರಬೆಟ್ಟು ಶಾಲೆಗೆ “ಸರಕಾರಿ ಶಾಲೆ ಉಳಿಸಿ ಬೆಳೆಸಿ” ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಭೇಟಿ

Suddi Udaya

ಸರಕಾರಿ ಪದವಿಪೂರ್ವ ಕಾಲೇಜು, ಕೊಯ್ಯೂರು :ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭ

Suddi Udaya

ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ: ವಾಣಿ ಆಂ. ಮಾ. ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಮಾಲಾಡಿ: ಕೊಲ್ಪೆದಬೈಲುನಲ್ಲಿ ಹಾಡಹಾಗಲೇ ಮನೆಗೆ ನುಗ್ಗಿದ್ದ ಕಳ್ಳರು: ಚಿನ್ನಾಭರಣ ಸೇರಿ ನಗದು ಕಳವು

Suddi Udaya
error: Content is protected !!