ಚಾರ್ಮಾಡಿ: ಕುಡಿಯುವ ನೀರಿಗಾಗಿ ಪಂಚಾಯತ್ ಎದುರು ಜನರ ಪ್ರತಿಭಟನೆ: ತಕ್ಷಣ ಗ್ರಾ.ಪಂ. ನಿಂದ ಸ್ಪಂದನೆ

Suddi Udaya

ಚಾರ್ಮಾಡಿ:ಕಳೆದ ಎಂಟು ದಿನಗಳಿಂದ ಚಾರ್ಮಾಡಿ ಗ್ರಾಮ‌ ಪಂಚಾಯತ್ ವ್ಯಾಪ್ತಿಯ ಬೀಟಿಗೆ ಪರಿಸರದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು ಅಸಮರ್ಪಕ ನೀರು ಪೂರೈಕೆಯ ವಿರುದ್ದ ನಾಗರಿಕರು ಪಂಚಾಯತ್ ಎದುರು ನೀರಿಗಾಗಿ ಪ್ರತಿಭಟನೆ ನಡೆಸಿದರು.

ಕುಡಿಯಲು ನೀರಿಲ್ಲದೆ ಮಳೆ ನೀರನ್ನು ಕುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಪಂಚಾಯತ್ ನ ಬೋರು ಕೆಟ್ಟು ಹೋದರು ಇನ್ನೂ ರಿಪೇರಿ ಮಾಡಿಲ್ಲ. ಆದ್ದರಿಂದ ನಮಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದು ಅಬ್ದುಲ್ ನಜೀರ್ ತಿಳಿಸಿದರು.

ಈ ವೇಳೆ ಚಾರ್ಮಾಡಿ ಗ್ರಾಮ ಪಂಚಾಯತ್ ನವರು ತಕ್ಷಣ ಸ್ಪಂದಿಸಿ ಕೆಟ್ಟು ಹೋದ ಬೋರ್ ಗಳನ್ನು ತಕ್ಷಣ ಸರಿಪಡಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿದರು.

Leave a Comment

error: Content is protected !!