24.6 C
ಪುತ್ತೂರು, ಬೆಳ್ತಂಗಡಿ
May 18, 2025
ಕ್ರೀಡಾ ಸುದ್ದಿ

ಸ್ವಾಗತ್ ಫ್ರೆಂಡ್ಸ್ ಪೆರಿಂಜೆ ಆಶ್ರಯದಲ್ಲಿ ಗಣೇಶ್ ಚತುರ್ಥಿಯ ಪ್ರಯುಕ್ತ 11ನೇ ವರ್ಷದ ಕ್ರೀಡಾಕೂಟ

ಪೆರಿಂಜೆ : ಸ್ವಾಗತ್ ಫ್ರೆಂಡ್ಸ್ ಪೆರಿಂಜೆ ಇದರ ಆಶ್ರಯದಲ್ಲಿ ಗಣೇಶ್ ಚತುರ್ಥಿಯ ಪ್ರಯುಕ್ತ 11ನೇ ವರ್ಷದ ಕ್ರೀಡಾಕೂಟವು ಪೆರಿಂಜೆ ಪಜಂಬಾಡಿ ಕ್ರೀಡಾoಗಣದಲ್ಲಿ ಜರಗಿತು.ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗದೀಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಹರಿಪ್ರಸಾದ್ ವಹಿಸಿದರು. ಮುಖ್ಯ ಅತಿಥಿಯಾಗಿ ಹೊಕ್ಕಾಡಿಗೋಳಿ ಕಂಬಳ ಸಮಿತಿ ಅಧ್ಯಕ್ಷರಾದ ರಶ್ಮಿತ್ ಶೆಟ್ಟಿ ನೋಣಾಲುಗುತ್ತು, ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಶಾಂತ,
ಹಿರಿಯರಾದ ಬೂಬ ಬಡಕೋಡಿ,ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ,ಸಂಗಮ್ ಪೇರಿ, ಬಿಜೆಪಿ ಎಸ್. ಸಿ. ಮೋರ್ಚಾ ಬೆಳ್ತಂಗಡಿ ಮಂಡಲದ ಉಪಾಧ್ಯಕ್ಷ ಸುರೇಶ್ ಆರಂಬೋಡಿ, ಸ್ವಾಗತ್ ಫ್ರೆಂಡ್ಸ್ ನ ಅಧ್ಯಕ್ಷರು ರಘುನಾಥ್ ಪಜಂಬಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪೆರಿಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ವಿಠಲ ಸಿ ಪೂಜಾರಿ, ಆನಂದ ಪೂಜಾರಿ, ಕೋಡಿoಗೇರಿ, ಮಾಜಿ ತಾ.ಪಂ. ಸದಸ್ಯ ಓಬಯ್ಯ್ ಆರಂಬೋಡಿ, ಪೆರಿಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಸುಧಾಕರ ಪೂಜಾರಿ,ಹೊಸಂಗಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಅಕ್ಕು ಪಟ್ಟಾಡಿ,ಅವಿನಾಶ್ ಕುರ್ಲೊಟ್ಟು, ಗುರುಪ್ರಸಾದ್ ಮಲಿಯಾಲಪಲ್ಕೆ,ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು. ಪ್ರವೀಣ್ ಸೂರ್ಯ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿ,ದಿನೇಶ್ ಪಟ್ಟಾಡಿ ಸ್ವಾಗತಿಸಿ, ಅನಿಲ್ ಕುಮಾರ್ ಪಜಂಬಾಡಿ ಧನ್ಯವಾದ ನೀಡಿದರು

Related posts

44ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -2025ಶಿಕ್ಷಕಿ ಸೌಮ್ಯಾ ಕೆ. ಬಂಗಾಡಿ ಅವರಿಗೆ ಹಲವು ಬಹುಮಾನಗಳು

Suddi Udaya

ತ್ರೋಬಾಲ್ ಪಂದ್ಯಾಟ: ಪದ್ಮುಂಜ ಸ.ಪ.ಪೂ. ಕಾಲೇಜಿಗೆ ದ್ವಿತೀಯ ಸ್ಥಾನ

Suddi Udaya

ಭಾರತ -ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್: ಭಾರತದ ಗೆಲುವಿಗಾಗಿ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಜಿಲ್ಲಾ ಮಟ್ಟದ ಅಂತರ್ ಐಟಿಐ ತ್ರೋಬಾಲ್ ಪಂದ್ಯಾಟ: ಎಸ್ ಡಿ ಎಂ ಮಹಿಳಾ ಐಟಿಐ ಪ್ರಥಮ

Suddi Udaya

ಜೆಸಿಐ ಬೆಳ್ತಂಗಡಿಯಿಂದ ಜೆಜೆಸಿ ತ್ರಿಷಾರವರಿಗೆ ಗೌರವರ್ಪಣೆ

Suddi Udaya

ಬಳಂಜ: ಶಾರದೋತ್ಸವ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ, ಬಿಸಿಲು-ಮಳೆ ಲೆಕ್ಕಿಸದೆ ಆಟವಾಡಿದ ಯುವಕರು

Suddi Udaya
error: Content is protected !!