ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಅಂಡಿಂಜೆ: ಯುವಕ ಮಂಡಲದಿಂದ ಮೊಸರು ಕುಡಿಕೆ ಉತ್ಸವ, ವಿವಿಧ ಆಟೋಟ ಸ್ಪರ್ಧೆಗಳು

ಅಂಡಿಂಜೆ: ಯುವಕ ಮಂಡಲದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 2 ನೇ ವರ್ಷದ ಮೊಸರು ಕುಡಿಕೆ ಉತ್ಸವವು ಶ್ರೀ ವಿನಾಯಕ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸುಧೀಶ್ಚಂದ್ರ ಹೆಗ್ಡೆ ಕೊಕ್ರಾಡಿ ನೇರವೇರಿಸಿ ಶುಭ ಕೋರಿದರು. ಅಧ್ಯಕ್ಷತೆ ಅಂಡಿಂಜೆ ಯುವಕ‌ ಮಂಡಲದ ಅಧ್ಯಕ್ಷ ಪ್ರಾಣೇಶ್ ಮುಂಡೇವು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಸಂತ ಸಾಲ್ಯಾನ್ ಹಿಂಪ್ಲೊಟ್ಟು, ನಿತಿನ್ ಮುಂಡೇವು ಅಧ್ಯಕ್ಷರು ಗ್ರಾಮ ಪಂಚಾಯತ್ ಅಂಡಿಂಜೆ,
ಗಿರೀಶ್ ಮೂಡುಕೋಡಿ ನ್ಯೂ ಹಲೆಕ್ಕಿ, ರಾಜಶೇಖರ್ ಅಂಡಿಂಜೆ, ಮಹಾಬಲ ನೆಲ್ಲಿಂಗೇರಿ, ಯೋಗೀಶ್ ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಿಳೆಯರಿಗೆ, ಮಕ್ಕಳಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ದೆಗಳು ನಡೆಯಿತು. ಹಲವಾರು ಮಕ್ಕಳು ಕೃಷ್ಣವೇಷ ಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಪಡೆದರು.

ಪ್ರಶಾಂತ್ ಮಂಜುಗಿರಿ ಸ್ವಾಗತಿಸಿ, ಅಶ್ವಿನ್ ಮುಂಡೇವು ವಂದಿಸಿದರು. ದಿವ್ಯ ಪ್ರಶಾಂತ್ ನಿರೂಪಿಸಿದರು.
ಪ್ರವೀಣ್ ನವಜ್ಯೋತಿ, ರಾಜೇಶ್ ಮುಂಡೆವು,ಮಿಥುನ್ ದುಗಣಬೆಟ್ಟು,ಶಶಿ ಹೆಗ್ಡೆ ಹಾಗೂ ಯುವಕ ಮಂಡಲದ ಸದಸ್ಯರು ಸಹಕರಿಸಿದರು.

Related posts

ನೆರಿಯ: ಕಡವೆ ಬೇಟೆ, ಬಂದೂಕು ಸಹಿತ ಆರೋಪಿ ವಶಕ್ಕೆ

Suddi Udaya

ಸೌತಡ್ಕದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮೂಡಪ್ಪ ಸೇವೆ ನಡೆಯುತ್ತಿದ್ದ ಸಂದರ್ಭದಲ್ಲಿ ನಾಗರ ಹಾವು ಪ್ರತ್ಯಕ್ಷ

Suddi Udaya

ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ರೂ. 20 ಸಾವಿರ ಹಸ್ತಾಂತರ

Suddi Udaya

ಧರ್ಮಸ್ಥಳಕ್ಕೆ ಬಂದಿದ್ದ ಮಹಿಳೆಯ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಯುವ ಕಾಂಗ್ರೆಸ್ ಸಮಿತಿ ರಾಜ್ಯ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ರವರಿಂದ ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಕ್ಕೆ ವೈದ್ಯಕೀಯ ನೆರವು ಹಸ್ತಾಂತರ

Suddi Udaya

ಶಿಶಿಲ:ಕಂದಾಯ ಇಲಾಖೆಯಿಂದ ಭೂ ಪರಿವರ್ತನೆ ವಿಳಂಬ ಆಗುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮನವಿ

Suddi Udaya
error: Content is protected !!