September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಧ.ಮಂ. ಪ.ಪೂ. ಕಾಲೇಜಿನ ಸಂಸ್ಕೃತ ಸಂಘದ ವತಿಯಿಂದ ಪರಿಸರ ಪಾಠ ಹಾಗೂ ಸಾಲುಮರದ ತಿಮ್ಮಕ್ಕ ರವರಿಗೆ ನುಡಿನಮನ

ಉಜಿರೆ: ಭಾರತದಲ್ಲಿ ನಾಲ್ಕು ಜೈವಿಕ ವೈವಿಧ್ಯ ತಾಣಗಳಿವೆ. ಹಿಮಾಲಯ, ಪೂರ್ವ ಹಿಮಾಲಯ, ಇಂಡೋ-ಬರ್ಮಾ ಮತ್ತು ಪಶ್ಚಿಮ ಘಟ್ಟ. ಈ ತಾಣಗಳು ಹೆಚ್ಚಿನ ಸಂಖ್ಯೆಯ ವಿಶಿಷ್ಟ ಪ್ರಭೇದಗಳನ್ನು ಹೊಂದಿವೆ ಮತ್ತು ವಿಪರೀತ ಮಾನವ ಚಟುವಟಿಕೆ ಮತ್ತು ಆವಾಸಸ್ಥಾನ ನಷ್ಟದಿಂದಾಗಿ ಸಂರಕ್ಷಣೆಗೆ ಆದ್ಯತೆ ನೀಡಬೇಕಾದ ಪ್ರದೇಶಗಳಾಗಿವೆ. ಪಶ್ಚಿಮ ಘಟ್ಟ ಜೀವ ವೈವಿಧ್ಯಗಳ ಆಗರವಾಗಿದೆ. ಉಜಿರೆಯ ಯಶೋವನ ಕೂಡ ವಿಶಿಷ್ಟವಾದ ವೃಕ್ಷಾಲಯವಾಗಿದೆ. ಪ್ರತಿಯೊಬ್ಬರಿಗೂ ಪರಿಸರದ ಕಾಳಜಿ ಬೇಕು. ಪರಿಸರ ಹಾಗೂ ಜೀವ ವೈವಿಧ್ಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮೇಘಾ ಶಿವರಾಜ್ ಹೇಳಿದರು

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗ ಹಾಗೂ ಸಂಸ್ಕೃತ ಸಂಘದ ವತಿಯಿಂದ ನಡೆದ ಪರಿಸರ ಪಾಠ ಹಾಗೂ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಾಲು ಮರದ ತಿಮ್ಮಕ್ಕ ಅವರ ಪ್ರಕೃತಿ ಪ್ರೇಮ ಹಾಗೂ ಅವರ ಪರಿಸರ ಕಾಳಜಿಯ ಕೊಡುಗೆಗಳನ್ನು ಸ್ಮರಿಸಿದರು. ಇದರೊಂದಿಗೆ ಆಯುಷ್ ಸಚಿವಾಲಯ ಪ್ರಾಯೋಜಕತ್ವದ ಜನಜ್ಞಾನಾಧಾರಿತ ಔಷಧೀಯ ಸಸ್ಯಗಳ ಆಧಾರದ ಮೇಲೆ ನಿರ್ಮಿಸಿದ ಸಸ್ಯೋದ್ಯಾನ , ನವಗ್ರಹ ವನ , ರಾಶಿ ವನ , ಹಸಿರು ಮನೆ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಕಲಾ ವಿದ್ಯಾರ್ಥಿನಿ ಶ್ರೀಪೂರ್ಣಾ ಅವರು ವಿದ್ಯಾರ್ಥಿಗಳ ಪರವಾಗಿ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿ ನಮನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರಾಚೀನ ಸಂಸ್ಕೃತಜ್ಞರ ಪರಿಸರ ಪ್ರೇಮ ಹಾಗೂ ಪ್ರಕೃತಿಪ್ರೀತಿ ವಿಚಾರಗಳ ಬಗ್ಗೆ ವಿವರಿಸಿದರು.

ಸೌಪರ್ಣಿಕಾ ರಾವ್ ಸ್ಮರಣಿಕೆ ನೀಡಿ ಗೌರವಿಸಿದರು. ಸಮೃದ್ಧಿ ಸ್ವಾಗತಿಸಿ ಪರಿಚಯಿಸಿದರು. ಪ್ರಸನ್ನಾ .ಪಿ. ನಿರೂಪಿಸಿ , ಧರೇಶ .ಹೆಚ್. ವಂದಿಸಿದರು.

Related posts

ಬಂದಾರು ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪ್ರಶಸ್ತಿ ಸ್ವೀಕಾರ

Suddi Udaya

ಮದ್ದಡ್ಕ ನೆಲ್ಲಿಫಲ್ಕೆ ನಿವಾಸಿ ಬಾಬು ಮೊಗೇರ ನಿಧನ

Suddi Udaya

ಉಜಿರೆ ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಕೊಕ್ಕಡ ಶಾಖೆಯು ಸ್ಥಳಾಂತರಗೊಂಡು ಉದ್ಘಾಟನೆ

Suddi Udaya

ಸಾರ್ವಜನಿಕ ಪ್ರದೇಶದಲ್ಲಿ ತ್ಯಾಜ್ಯ ಎಸೆದವರಿಂದಲೇ ತೆರವುಗೊಳಿಸಿ ದಂಡ ವಿಧಿಸಿದ ಪಡಂಗಡಿ ಗ್ರಾ.ಪಂ.

Suddi Udaya

ಮಾ.14-15: ನಿಡ್ಲೆ ಬೂಡುಜಾಲು ನಾಡ ದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ ದೊಂಪದ ಬಲಿ ಜಾತ್ರಾ ಮಹೋತ್ಸವ

Suddi Udaya

ಬಳಂಜ: ಇತಿಹಾಸ ಪ್ರಸಿದ್ಧ ದೇವಸ್ಥಾನಕ್ಕೆ ಪ್ರಭಾವಳಿ ಸಮರ್ಪಣೆ

Suddi Udaya
error: Content is protected !!