March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಇಂಡೋ ನೇಪಾಳ ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್ ತ್ರೋಬಾಲ್ ಪಂದ್ಯಾಟ: ಕಣಿಯೂರಿನ ಯೂನಿತ್ ಕೆ. ನಾಯಕತ್ವದ ತಂಡ ಪ್ರಥಮ ಸ್ಥಾನ

ಬೆಳ್ತಂಗಡಿ: ಇಂಡೋ ನೇಪಾಳ ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್ ತ್ರೋಬಾಲ್ ಪಂದ್ಯಾಟಕ್ಕೆ ಆಹ್ವಾನಿತ ಪುರುಷ ಮತ್ತು ಮಹಿಳಾ ಕ್ರೀಡಾ ಚಾಂಪಿಯನ್ ಶಿಪ್-2024ಕ್ಕೆ ಖೇಲೋ ಭಾರತ್ ಯೂತ್ ಗೇಮ್ಸ್ ಫೆಡರೇಶನ್ ಇಂಡಿಯಾ ತಂಡವನ್ನು ಪ್ರತಿನಿಧಿಸಿದ ಕಣಿಯೂರಿನ ಯೂನಿತ್ ಕೆ. ನಾಯಕತ್ವದ ತಂಡ ಪ್ರಥಮ ಸ್ಥಾನಗಳಿಸಿ ಹೊರ ಹೊಮ್ಮಿದೆ.

ನೇಪಾಳದ ಪೋಖರ ರಂಗಶಾಲಾದಲ್ಲಿ ಆ.31, ಸೆ.1,2ರಂದು ನಡೆದ ಪಂದ್ಯಾಟದಲ್ಲಿ ಭಾಗವಹಿಸಿದ ಪುರುಷ ಮತ್ತು ಮಹಿಳೆಯರ ಖೇಲೋ ಭಾರತ್ ಯೂತ್ ಗೇಮ್ಸ್ ಫೆಡರೇಶನ್ ಇಂಡಿಯಾ ತಂಡ ಪ್ರಥಮ ಸ್ಥಾನಗಳಿಸಿ ಜಯಶಾಲಿಯಾಗಿದೆ.

ಪುರುಷರ ತಂಡದಲ್ಲಿ ವೈಯಕ್ತಿಕ ನೆಲೆಯಲ್ಲಿ ತಂಡದ ನಾಯಕ ಕಣಿಯೂರು ಗ್ರಾಮದ ಕದ್ರಿ ನಿವಾಸಿ ರತ್ನ ಕೆ. ಮತ್ತು ಮಂಜುನಾಥ್ ಗೌಡ ದಂಪತಿಯ ಪುತ್ರ ಯೂನಿತ್ ಕೆ. ಉತ್ತಮ ಅಲ್ ರೌಂಡರ್ ಪ್ರಶಸ್ತಿ ಪಡೆದರು. ಇಳಂತಿಲ ಗ್ರಾಮದ ನೆಲ್ಲಿಪಲ್ಲಿಕೆ ನಿವಾಸಿ ಧನಂಜಯ ಗೌಡ ಮತ್ತು ಭಾರತಿ ದಂಪತಿಯ ಪುತ್ರ ರೋಹಿತ್ ಉತ್ತಮ ಎಸೆತಗಾರ ಪ್ರಶಸ್ತಿ ಮುಡಿಗೇರಿಸಿಕೊಂಡರು. ಮಡಂತ್ಯಾರಿನ ಸೇಬಾಸ್ಟಿನ್ ವೇಗಸ್ ಹಾಗೂ ಲೀನಾ ವೇಗಸ್ ದಂಪತಿಯ ಪುತ್ರ ಶಾನ್ ವೇಗಸ್ ಹಾಗೂ ಅಚ್ಚುತ ಮತ್ತು ಗಿರಿಜಾ ರವರ ಪುತ್ರ ಅವಿನಾಶ್ ಉತ್ತಮ ಪ್ರದರ್ಶನ ನೀಡಿದರು. ಪ್ರಜ್ವಲ್, ಕರಿಯಪ್ಪ, ದಿಕ್ಷೀತ್, ರವಿ ವರ್ಧನ್, ರಕ್ಷಿತ್, ಪೆಮ್ಮೆಯ್ಯ ಹಾಗೂ ದರ್ಶನ್ ತಂಡದಲ್ಲಿದ್ದರು.

ಮಿಂಚಿದ ಮಡಂತ್ಯಾರಿನ ಡಾಫ್ನಿ ವೆರೋನಿಕ: ಮಹಿಳೆಯರ ತಂಡವನ್ನು ಪ್ರತಿನಿಧಿಸಿದ ಮಡಂತ್ಯಾರಿನ ಕ್ಲೋಡ್ ಫ್ರಾನ್ಸಿಸ್ ಮಿಸ್ಕ್ಯುತ್ ಹಾಗೂ ಡಯಾನ ಮಿಸ್ಕ್ಯುತ್ ದಂಪತಿ ಪುತ್ರಿ ಡಾಫಿ ವೆರೋನಿಕ ಉತ್ತಮ ಅಲ್ ರೌಂಡ‌ರ್ ಪ್ರಶಸ್ತಿಗೆ ಭಾಜನರಾದರು. ತಂಡದ ನಾಯಕಿ ಸುಪ್ರಿಯಾ ಎಸ್.ಪಿ. ಉತ್ತಮ ಎಸೆತಗಾರ ಪ್ರಶಸ್ತಿ ಪಡೆದರು. ಇವರು ಬಂಟ್ವಾಳ ತಾಲೂಕಿನ ಕಸಬಾ ಕೆತ್ತಿಮಾರಿನ ನಿವಾಸಿ ಶೀನಾಥ್ ಸಿ. ಹಾಗೂ ಪೂರ್ಣಿಮಾ ದಂಪತಿಯ ಪುತ್ರಿ. ಸಿಂಚನ, ಭೂಮಿಕಾ, ಉಷಾ, ಭವನಾ ಹಾಗೂ ಗಾನಾವಿ ಉತ್ತಮ ಪ್ರದರ್ಶನ ನೀಡಿದರು. ಎರಡು ತಂಡಗಳಿಗೆ ಕೊಡಗಿನ ವೀರಾಜಪೇಟೆಯ ರೈಶಿಂಗ್ ಸ್ಟಾರ್ ಕೋಚಿಂಗ್ ಸೆಂಟರ್‌ನ ಶಿಬಿರದಲ್ಲಿ ತರಬೇತಿ ಪಡೆದಿದ್ದರು.

Related posts

ಮಚ್ಚಿನ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಹಾಯ ಧನ ಹಸ್ತಾಂತರ

Suddi Udaya

ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭೆ

Suddi Udaya

ಎಸ್.ಡಿ.ಎಂ. ರಸಾಯಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣ: ಅನ್ವಯಿಕ ಪ್ರಯೋಗಗಳಿಂದ ಸುಸ್ಥಿರ ಬೆಳವಣಿಗೆ: ಡಾ. ಸತೀಶ್ಚಂದ್ರ ಎಸ್.

Suddi Udaya

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ವೇಣೂರು ಪೊಲೀಸರು

Suddi Udaya

ಧರ್ಮಸ್ಥಳ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಸಾರಿಗೆ ಸಚಿವರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya

ಗಾಳಿ ಮಳೆಗೆ ಚಲಿಸುತ್ತಿದ್ದವಾಹನ ಮೇಲೆ ಬಿದ್ದ ಮರದ ಗೆಲ್ಲು

Suddi Udaya
error: Content is protected !!