September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನೆರಿಯ: ಗಂಡಿಬಾಗಿಲು ನಿವಾಸಿ ಜೋಸೆಫ್ ವಿಷ ಸೇವಿಸಿ ಆತ್ಮಹತ್ಯೆ

ಬೆಳ್ತಂಗಡಿ: ನೆರಿಯ ಗ್ರಾಮದ ಗಂಡಿಬಾಗಿಲು ನಿವಾಸಿ ಜೋಸೆಫ್ (40 ವರ್ಷ) ರವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ನಡೆದಿದೆ.

ಇವರು ಆ 31ರಂದು ಮನೆಯಲ್ಲಿ ಹುಲ್ಲಿಗೆ ಸಿಂಪಡಿಸಲು ತಂದಿರಿಸಿದ್ದ ವಿಷವನ್ನು ತೆಗೆದು ಕುಡಿದ್ದು ಕೂಡಲೇ ಮನೆಯವರು ಆತನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ, ಸೆ.4 ರಂದು ಮೃತಪಟ್ಟಿದ್ದಾರೆ. ಮೃತ ಜೋಸೆಫ್ ಪತ್ನಿಯೊಂದಿಗೆ ಸದಾ ಜಗಳಾಡುತ್ತಿದ್ದ ಎನ್ನಲಾಗಿದ್ದು ಇದೇ ಕಾರಣಕ್ಕೆ ಆತನ ಪತ್ನಿ ಮಕ್ಕಳೊಂದಿಗೆ ಆ 28ರಂದು ಮನೆಯಿಂದ ತಾಯಿ ಮನೆಗೆ ಹೋಗಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿರಬಹುದು ಎಂದು ಅಂದಾಜಿಸಲಾಗಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related posts

ಮಿತ್ತಬಾಗಿಲು: ಪ್ರಗತಿಪರ ಕೃಷಿಕ ಕೃಷ್ಣಪ್ಪ ಗೌಡ ನಿಧನ

Suddi Udaya

ಬೀಳುವ ಸ್ಥಿತಿಯಲ್ಲಿದ್ದ ಬೋರ್ಡನ್ನು ತೆರವುಗೊಳಿಸಿದ ನ.ಪಂ.

Suddi Udaya

ಜೆಸಿಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷ ಪೃಥ್ವಿರಂಜನ್ ರಾವ್ ರವರಿಗೆ ನುಡಿ ನಮನ

Suddi Udaya

ರೆಂಕೆದ ಗುತ್ತಿನಲ್ಲಿ ಗೆಜ್ಜೆಗಿರಿಯ ಆಮಂತ್ರಣ ಪತ್ರಿಕೆ ವಿತರಣೆ

Suddi Udaya

ಪಡಿತರ ಅಂಗಡಿಗಳ ಮೂಲಕ ಕುಚ್ಚಲು ಅಕ್ಕಿ ವಿತರಿಸುವಂತೆ ಎಸ್‌ಡಿಪಿಐ ವತಿಯಿಂದ ಸಾಂಕೇತಿಕ ಪ್ರತಿಭಟನೆ

Suddi Udaya

ಡ್ರಾಯಿಂಗ್ ಗ್ರೇಡ್ ಪರೀಕ್ಷೆ: ಸಮೃದ್ಧ್ ಬಿ.ಎಸ್. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya
error: Content is protected !!