September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳಿಯ: ಮನೆಗೆ ನುಗ್ಗಿದ್ದ ಕಳ್ಳರು : ಸುಮಾರು ರೂ.46450 ಮೌಲ್ಯದ ಸೊತ್ತುಗಳು ಕಳವು

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಸುಬರ್ನಿ ರವರ ಮನೆಯಲ್ಲಿ ಬಚ್ಚಲು ಕೋಣೆಯ ಮೇಲೆ ಹಂಚು ತುಂಡರಿಸಿ ಯಾರೋ ಕಳ್ಳರು ಒಳಗೆ ನುಗ್ಗಿ ಸುಮಾರು ರೂ.46450 ಮೌಲ್ಯ ದ ಸೊತ್ತುಗಳನ್ನು ಕಳವುಗೈದ ಘಟನೆ ನಡೆದಿದೆ.

ಕಳಿಯ ಗ್ರಾಮದ ಸುಬರ್ನಿ ಬಿರಾ ರವರು, ಜ.11. ರಿಂದ ಮಾ. 01ರವರೆಗೆ ಮನೆಯಿಂದ ಹೋಗಿದ್ದು ಇದರ ಮಧ್ಯೆ ಪತಿ ಉಮ್ಮರ್ ಫಾರೂಕ್ ಎಂಬಾತನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಫೆ.29 ರಂದು ವಶಕ್ಕೆ ಪಡೆದಿದ್ದು ಈ ಮಾಹಿತಿಯನ್ನು ಪಿರ್ಯಾದಿದಾರರ ನೆರೆಕರೆಯವರು ದೂರವಾಣಿ ಮೂಲಕ ತಿಳಿಸಿದ್ದರು.
‌‌ಇದನ್ನು‌ ತಿಳಿದ ಸುಬರ್ನಿರವರು ಮಾ.02 ರಂದು ಮನೆಗೆ ಬಂದು ನೋಡಿದಾಗ ಬಚ್ಚಲು ಕೋಣೆಯ ಮೇಲೆ ಹಂಚು ತುಂಡರಿಸಿದ್ದು ಅಲ್ಲದೇ ಮನೆಯಲ್ಲಿರುವ ಸೊತ್ತುಗಳಾದ, ಹೆಚ್ .ಪಿ ಕಂಪನಿಯ ಖಾಲಿ ಸಿಲೆಂಡರ್ -01 ಅಂದಾಜು ಮೌಲ್ಯ 4500/-, ಡಾ| ವಾಶ್ ಸೋಪ್-15 ಅಂದಾಜು ಮೌಲ್ಯ 600/-, ಲಿರ್ಲಾ ಸೊಪ್ -10 ಅಂದಾಜು ಮೌಲ್ಯ 550/-, 3 ಪವರ್ ಬ್ಯಾಂಕ್ ಅಂದಾಜು ಮೌಲ್ಯ ರೂ 4500/-, ಐ ಪೋನ್ ಏರ್ಪೋಡ್ -01 ಅಂದಾಜು ಮೌಲ್ಯ 26000/-, ಟೇಕ್ನೊ ಸ್ಮಾರ್ಟ್ ವಾಚ್ -01 ಅಂದಾಜು ಮೌಲ್ಯ 4500/-, ಡಕ್ -01 ಅಂದಾಜು ಮೌಲ್ಯ -450, ಕೋಳಿ 3-ಅಂದಾಜು ಮೌಲ್ಯ 1200/-, 2 ಟೀ ಶರ್ಟ್ ಅಂದಾಜು ಮೌಲ್ಯ ರೂ 800/-, ಮೊಬೈಲ್ ಚಾರ್ಚ್ ರ್ 03 ಅಂದಾಜು ಮೌಲ್ಯ ರೂ 950/, ಪರಪ್ಪು ದರ್ಗಾ ಬಾಕ್ಸ್ -1 ಅಂದಾಜು ಮೌಲ್ಯ 1200 ರೂ ಗುರುವಾಯನಕೆರೆ ದರ್ಗಾ ಬಾಕ್ಸ್ 01 ಅಂದಾಜು ಮೌಲ್ಯ 1200 ರೂ, ಆಗಿದ್ದು ಕಳವಾಗಿರುವ ಸೊತ್ತಿನ ಒಟ್ಟು ಮೌಲ್ಯ 46,450/- ಆಗಬಹುದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆ ಅ.ಕ್ರ ನಂ 34/2024 ಕಲಂ: 454,457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಕೊಕ್ಕಡ ಜೇಸಿ ಸಾಮಾನ್ಯ ಸಭೆ: ವಲಯ ಕಾರ್ಯಕ್ರಮಕ್ಕೆ ನಿರ್ಧಾರ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಕಿರು ಧೀಕ್ಷೆ ಸ್ವೀಕಾರ

Suddi Udaya

ಸಾಧನೆಯ ಶಿಖರದಲ್ಲಿ ಗುರುವಾಯನಕೆರೆ ಎಕ್ಸೆಲ್ ಕಾಲೇಜು : ಶಿಕ್ಷಣ ಕ್ಷೇತ್ರದಲ್ಲೇ ಹೊಸ ಭಾಷ್ಯ , ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ಸಂಸ್ಥೆ

Suddi Udaya

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ ಕಾರುಣ್ಯ ಸ್ಪರ್ಶ ಯೋಜನೆಯಡಿಯಲ್ಲಿ ಸಹಾಯಧನ ಹಸ್ತಾಂತರ

Suddi Udaya

ಶಾಸಕ ಹರೀಶ್ ಪೂಂಜಾರ ಮುತುವರ್ಜಿಯಿಂದ ಇಲಂತಿಲ ಪಿದಮಲೆಯಲ್ಲಿ ರಸ್ತೆ ಮಧ್ಯಭಾಗದಲ್ಲಿ ನಿರ್ಮಾಣವಾಗಿದ್ದ ಬೃಹತ್ ಗುಂಡಿಗೆ ತಾತ್ಕಾಲಿಕ ಮುಕ್ತಿ

Suddi Udaya

ಅಂತರ್ ಪಾಲಿಟೆಕ್ನಿಕ್ ತಾಂತ್ರಿಕ ಪ್ರದರ್ಶನ: ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya
error: Content is protected !!