April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಅರಸಿನಮಕ್ಕಿ: ಹೊಸ್ತೋಟ ಶಾಲೆಗೆ ಕ್ರೀಡಾ ಉಪಕರಣಗಳ ಹಸ್ತಾಂತರ

ಅರಸಿನಮಕ್ಕಿ : ಇಲ್ಲಿನ ಹೊಸ್ತೋಟದ ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆಗೆ ಅರಸಿನಮಕ್ಕಿ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ಉನ್ನತ ಉದ್ಯೋಗದಲ್ಲಿರುವ ಮಿಥುನ್ ಕಾರಂತ್ರವರು ಸುಮಾರು 15 ಸಾವಿರ ರೂ. ವೆಚ್ಚದಲ್ಲಿ ಒದಗಿಸಿದ ಕ್ರೀಡಾ ಸಲಕರಣೆಗಳನ್ನು ಸೆ.6ರಂದು ಶಾಲೆಗೆ ಹಸ್ತಾಂತರಿಸಲಾಯಿತು.


ಮಿಥುನ್ ಕಾರಂತ್ರವರ ಹೆತ್ತವರಾದ ತಾ.ಪಂ. ಮಾಜಿ ಸದಸ್ಯರಾದ ಮಂಜುಳಾ ಕಾರಂತ್ – ರಾಜರಾಮ ಕಾರಂತ್ ದಂಪತಿ ಶಾಲೆಯ ಮುಖ್ಯೋಪಾಧ್ಯಾಯರಾದ ಮಾಲತಿಯವರಿಗೆ ಹಸ್ತಾಂತರಿಸಿದರು.


ನಂತರ ಮಾತನಾಡಿದ ಮಂಜುಳಾ ಕಾರಂತ್ರವರು ಗ್ರಾಮೀಣ ಶಾಲೆಯಾದರೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಿ ಸರ್ವಾಂಗೀಣ ಬೆಳವಣಿಗೆಗೆ ಒತ್ತು ನೀಡಿರುವ ಹೊಸ್ತೋಟ ಶಾಲೆಗೆ ಕ್ರೀಡಾ ಸಾಮಾಗ್ರಿ ಒದಗಿಸಲು ಹರ್ಷವಾಗುತ್ತಿದೆ. ಮಕ್ಕಳು ಇದರ ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಕಲಿತು ಶಾಲೆಗೆ ಕೀರ್ತಿ ತರಬೇಕೆಂದರು.


ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮುರಳೀಧರ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿ ಊರಿನ, ಶಾಲೆಯ ಬಗ್ಗೆ ಅಭಿಮಾನ ಹೊಂದಿ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಮಿಥುನ್ರವರು ಮಾದರಿಯಾಗಿದ್ದಾರೆ ಎಂದರು. ಸಮಾರಂಭದಲ್ಲಿ ಹಳೆ ವಿದ್ಯಾಥರ್ಿ ಸಂಘದ ಅಧ್ಯಕ್ಷ ಶ್ರೀಕರ ಭಿಡೆ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾಥರ್ಿ ಸಂಘದ ಗಣೇಶ್ ಹೊಸ್ತೋಟ, ಎಸ್ಡಿಎಂಸಿ ಸದಸ್ಯರಾದ ಗಣೇಶ್ ಪಲಸ್ತಡ್ಕ, ನೀತಾ ರಾಧೇಶ್, ವೃಷಾಂಕ್ ಖಾಡಿಲ್ಕರ್, ಅಂಗನವಾಡಿ ಕಾರ್ಯಕತರ್ೆ ಭಾರತಿ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯರಾದ ಮಾಲತಿಯವರು ಸ್ವಾಗತಿಸಿ ಪ್ರಸ್ತಾವನೆಗೈದರು. ಸಹಶಿಕ್ಷಕಿ ಜಯಂತಿ ವಂದಿಸಿದರು.

Related posts

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮಕಲಶೋತ್ಸವಗಣಪತಿ ಹೋಮ, ಮಕರ ಲಗ್ನದಲ್ಲಿ ಶ್ರೀ ಉಳ್ಳಾಲ್ತಿ ದೇವಿಯ ಪ್ರತಿಷ್ಠೆ ಜಿವ ಕಲಶಾಭಿಷೇಕ,ಗ್ರಾಮ ಸುಭೀಕ್ಷೇಗಾಗಿ ಶ್ರೀಚಕ್ರ ಪೂಜೆ

Suddi Udaya

ಬೆಳ್ತಂಗಡಿ ನಡಿಗುತ್ತು ನಿವಾಸಿ ಶ್ರೀಮತಿ ಪುಷ್ಪಾವತಿ ನಿಧನ

Suddi Udaya

ಮಲವಂತಿಗೆ: ಚಾರಣಕ್ಕೆ ತೆರಳಿದ್ದ ಎಂಬಿಬಿಎಸ್ ಪದವೀಧರ ಯುವಕ ಹೃದಯಾಘಾತದಿಂದ ಸಾವು

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ತರಬೇತಿ ಕಾರ್ಯಕ್ರಮ

Suddi Udaya

ಎಸ್.ಡಿ.ಎಂ. ನೆನಪಿನಂಗಳ ವಾರ್ಷಿಕ ಪುನರ್ಮಿಲನ: ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಬ್ಬರಿಗೆ ಸನ್ಮಾನ

Suddi Udaya

ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ಕಾಜೂರು ಹಯಾತುಲ್ ಔಲಿಯಾ ದರ್ಗಾ ಶರೀಫ್ ನಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ

Suddi Udaya
error: Content is protected !!