March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ತಾಲೂಕು, 27ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವ: ಧಾರ್ಮಿಕ ಸಭೆ

ಬೆಳ್ತಂಗಡಿ : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಬೆಳ್ತಂಗಡಿ ತಾಲೂಕು ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ, ಬ್ರಹ್ಮಶ್ರೀ ಶಿರೋಮಣಿ ಶ್ರೀ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ಸೆ.6 ರಿಂದ 8ರ ವರೆಗೆ 27ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವು ಶ್ರೀ ಕ್ಷೇತ್ರ ತಿಮರೋಡಿ’ ಕುಂಜರ್ಪ ವಠಾರ ಉಜಿರೆಯಲ್ಲಿ ಜರಗಿತು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಸಭೆಯನ್ನು ಮಾಡುವುದೇ, ಧರ್ಮದ ಮೇಲೆ ನಡೆಯುವ ಅನ್ಯಾಯದ ವಿರುದ್ಧ, ಜನರಿಗೆ ಸತ್ಯದ ದಾರಿಯನ್ನು ತೋರಿಸುವ ಮುಖಾಂತರ ಸನಾತನ ಹಿಂದೂ ಧರ್ಮದ ಪರಿಕಲ್ಪನೆಯನ್ನು ಜನರಿಗೆ ತಿಳಿಸುವುದೇ ಧಾರ್ಮಿಕ ಸಭೆಯ ಉದ್ದೇಶ ಎಂದರು.

ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣವರ್ ಮಾತನಾಡಿ ರಾಜಕೀಯ ವ್ಯಕ್ತಿಗಳು ಹಿಂದುತ್ವವನ್ನು ಅಕ್ಷರಶಃ ವ್ಯಾಪಾರೀಕರಣ ಮಾಡಿಕೊಂಡಿದ್ದಾರೆ. ಶ್ರೀಕೃಷ್ಣ ಪರಮಾತ್ಮ ಜನ ಸಾಮಾನ್ಯರ ಸಂಘಟನೆಯ ರೂಪದಲ್ಲಿ ನ್ಯಾಯ ಕೊಡಿಸುವುದಕ್ಕೆ ಬರುತ್ತಾನೆ ಎಂದು ಸಂಘಟನೆಯ ಶಕ್ತಿಯನ್ನು ವಿವರಿಸಿದರು.

ಮುಖ್ಯ ಅತಿಥಿಯಾಗಿ ಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಸುಮಾ ಎಲ್. ಎನ್. ಶಾಸ್ತ್ರಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಮೇಶ್ ನಾಯ್ಕ ನಡಿಬೆಟ್ಟು ಉಪಸ್ಥಿತರಿದ್ದರು.

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಅಂತರ ಪ್ರಾಸ್ತವಿಕವಾಗಿ ಮಾತನಾಡಿ, ನಿರೂಪಿಸಿ, ಧನ್ಯವಾದವಿತ್ತರು. ಜಗದೀಶ್ ನಿಡ್ಲೆ ಸ್ವಾಗತಿಸಿದರು.

Related posts

ಬೆಳ್ತಂಗಡಿ ತಾಲೂಕು ಶಾಮಿಯಾನ ಮಾಲಕರ ಸಂಘ (ರಿ.) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ) ಇದರ ಜಂಟಿ ಆಶ್ರಯದಲ್ಲಿ ಗದ್ದೆ ಮನೆ ಪಿಲಿಚಾಮುಂಡಿ ಕಲ್ಲು, ಗುರುವಾಯನಕೆರೆ ಗದ್ದೆಯಲ್ಲಿ ಸಂಘದ ಮಾಲಕರು ಮತ್ತು ಕಾರ್ಮಿಕರಿಗೆ ನಡೆದ ಕೆಸರ್ ದ ಕೂಟ-2025

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಜು. 24 ರಿಂದ ಮುಳಿಯ ಮಾನ್ಸೂನ್ ಧಮಾಕ: ಮುಂಗಾರಿನ ಸಂಭ್ರಮವನ್ನು ಇಮ್ಮಡಿಗೊಳಿಸಲು ಗ್ರಾಹಕರಿಗೆ ಆಕರ್ಷಕ ರಿಯಾಯಿತಿ: ಆ. 5 ಮುಳಿಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ,ಗ್ರಾಹಕರ ಸಮಾಗಮ,

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಬೆಂದ್ರಾಳ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ರಾಷ್ಟ್ರೀಯ ಯೋಗಾಸನ ಕ್ರೀಡಾ ಒಕ್ಕೂಟದ ಉಪಾಧ್ಯಕ್ಷರಾಗಿ ಡಾ. ಐ. ಶಶಿಕಾಂತ ಜೈನ್

Suddi Udaya

ನಿಡ್ಲೆ ಪ್ರಾ. ಕೃ.ಪ. ಸ. ಸಂಘದ ಸಾಧನೆಗೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಜನಸ್ಪಂದನ ಸಭೆಯ ಫಲಶ್ರುತಿ 108 ಹಕ್ಕು ಪತ್ರ, 54 ಮಂದಿಗೆ ನಡಾವಳಿ ವಿತರಣೆ

Suddi Udaya
error: Content is protected !!