April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಚ್ಚಿನ: ಬಳ್ಳಮಂಜದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಚ್ಚಿನ ಏ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುಂಟಿಕಾನ ಮಂಗಳೂರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ ಮಚ್ಚಿನ ಮತ್ತು ಜ್ಞಾನವಿಕಾಸ ಕೇಂದ್ರ ಕುದ್ರಡ್ಕ, ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ (ರಿ ) ಬಳ್ಳಮಂಜ,
ಗುರುನಾರಾಯಣ ಸೇವಾ ಸಂಘ ಮಚ್ಚಿನ, ತುಳು ಶಿವಳ್ಳಿ ಸಭಾ ಮಚ್ಚಿನ ವಲಯ ಗ್ರಾಮ ಪಂಚಾಯತ್ ಮಚ್ಚಿನ ಇವರ
ಸಂಯುಕ್ತ ಆಶ್ರಯದಲ್ಲಿ ಸಮುದಾಯ ಭವನ ಬಳ್ಳಮಂಜದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೆ 15 ರಂದು ನಡೆಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ರುಕ್ಮಿಣಿರವರು ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ||ರಾಧಾಕೃಷ್ಣ ಶೆಟ್ಟಿ ಪ್ರಾಂಶುಪಾಲರು ಶ್ರೀ ಮಹಾವೀರ ಕಾಲೇಜು ಮೂಡಬಿದ್ರೆ ಇವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ, ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನಾರಾಯಣ ಪೂಜಾರಿ, ಮಚ್ಚಿನ ಶ್ರೀ ಗುರುನಾರಾಯಣ ಸೇವಾ ಸಂಘ ಅಧ್ಯಕ್ಷ ಗೋಪಾಲ ಪೂಜಾರಿ, ತುಳು ಶಿವಳ್ಳಿ ಸಭಾ ಮಚ್ಚಿನ ವಲಯ ಅಧ್ಯಕ್ಷ ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ, ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಮಡಂತ್ಯಾರು ವಲಯ ವಲಯಧ್ಯಕ್ಷ ಜಯ ಪೂಜಾರಿ, ಎ.ಜೆ.ಆಸ್ಪತ್ರೆ ಡಾ||ಪುನೀತ್ ಮತ್ತು ಸಂಶೋಧನಾ ಕೇಂದ್ರ ಕುಂಟಿಗಾನ ಮಂಗಳೂರು, ಶ್ರೀಮತಿ ಸುಧಾ ಒಕ್ಕೂಟದ ಅಧ್ಯಕ್ಷರು ಮಚ್ಚಿನ, ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಹರ್ಷ ಬಳ್ಳಮoಜ ,ಕುದ್ರಡ್ಕ ಸೇವಾಪ್ರತಿನಿಧಿ ಶ್ರೀಮತಿ ನಂದಿನಿ ,ಕುದ್ರಡ್ಕ ಜ್ಞಾನ ವಿಕಾಸ ಸದಸ್ಯರು ಮತ್ತು ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು..

ಮಡಂತ್ಯಾರು ವಲಯದ ಮೇಲ್ವಿಚಾರಕ ವಸಂತ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಶ್ರೀಮತಿ ಪೂರ್ಣಿಮಾ ಸ್ವಾಗತಿಸಿದರು. ಮಚ್ಚಿನ ಸೇವಾಪ್ರತಿನಿಧಿ ಪರಮೇಶ್ವರ್ ಧನ್ಯವಾದವಿತ್ತರು.

Related posts

ಬಳಂಜದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ತರಭೇತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಆಂತರಿಕ ಗುಣಮಟ್ಟದ ಭರವಸೆ ಕೋಶ ವಾಣಿಜ್ಯ ಮತ್ತು ಹೂಡಿಕೆದಾರರ ಜಾಗೃತಿ ಕಾರ್ಯಾಗಾರ

Suddi Udaya

ಬಳಂಜ: ಅಸೌಖ್ಯದಿಂದ ಮಹಿಳೆ ಸಾವು

Suddi Udaya

ಧರ್ಮಸ್ಥಳದಲ್ಲಿ ಗೋ ರಥ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಗೋ ರಥ ಯಾತ್ರೆಗೆ ಶುಭ ಹಾರೈಕೆ

Suddi Udaya

ದಯಾ ಶಾಲಾ ವಾರ್ಷಿಕೋತ್ಸವ

Suddi Udaya

ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಹೃದಯಾಘಾತ: ನ್ಯಾಯತರ್ಪು ಕೊಡಿಯಡ್ಕ ತಿಮ್ಮಪ್ಪ ಗೌಡ ನಿಧನ

Suddi Udaya
error: Content is protected !!