March 7, 2026
ಗ್ರಾಮಾಂತರ ಸುದ್ದಿ

ಡಾ.ಸುಬ್ರಹ್ಮಣ್ಯ ಭಟ್ಟರ ದಕ್ಷಿಣ ಕನ್ನಡ ಭಾಷಾ ಸೊಗಡಿನ  ಮೂರನೇ ಕಾದಂಬರಿ “ಅಚ್ಚಣ್ಣ ಭಟ್ರು” ವನ್ನು  ಇಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

ಉಜಿರೆ :ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಭಟ್ಟರ ದಕ್ಷಿಣ ಕನ್ನಡ ಭಾಷಾ ಸೊಗಡಿನ  ಮೂರನೇ ಕಾದಂಬರಿ “ಅಚ್ಚಣ್ಣ ಭಟ್ರು” ವನ್ನು  ಇಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾದಂಬರಿ ಕೃತಿಕಾರ ಡಾ.ಸುಬ್ರಹ್ಮಣ್ಯ ಭಟ್ಟರು , ಅವರ ಮಕ್ಕಳಾದ ಅಭಿಗಮ್ಯ ರಾಮ್ , ಆಶ್ಮನ್ ಕೃಷ್ಣ, ಹಿರಿಯ ವಕೀಲರೂ, ಜ್ಯೋತಿಷಿಗಳಾದ ಗಟ್ಟಿಗಾರು ಗೋಪಾಲಕೃಷ್ಣ ಭಟ್ ಮತ್ತು ನಿವೃತ್ತ ಮುಖ್ಯೋಪಾಧ್ಯಾಯಿನಿ ಬಿ.ಕೆ. ಶೈಲಾರವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ.ಎಸ್. ಸತೀಶ್ಚಂದ್ರರವರು ಶುಭಾಶಯ ತಿಳಿಸಿದರು.

ಕಾದಂಬರಿಗೆ ಬೆಳ್ತಂಗಡಿ ತಾಲೂಕಿನ ಹಿರಿಯ ಸಾಹಿತಿ ಶ್ರೀ ಪ.ರಾಮಕೃಷ್ಣ ಶಾಸ್ತ್ರಿಯವರು ಮುನ್ನುಡಿ ಬರೆದಿರುತ್ತಾರೆ.

ಪ್ರಸ್ತುತ ಕಾದಂಬರಿಯನ್ನು ಮೈಸೂರಿನ ಅಂಬಾರಿ ಪ್ರಕಾಶನದವರು ಪ್ರಕಟಿಸಿದ್ದು ಪ್ರತಿಗಳಿಗಾಗಿ ಲೇಖಕರನ್ನು (9448951856) ಸಂಪರ್ಕಿಸಬಹುದಾಗಿದೆ.

Related posts

ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಜ್ಞಾಪನಾ ಶಕ್ತಿ ಪರೀಕ್ಷೆ ಸ್ಪರ್ಧೆ

Suddi Udaya

ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರಕ್ಕೆ ದ.ಕ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಭೇಟಿ

Suddi Udaya

ಜು.17: ಧರ್ಮಸ್ಥಳದಲ್ಲಿ ಪುರಾಣ ಕಾವ್ಯ ವಾಚನ-ಪ್ರವಚನ

Suddi Udaya

ಡಿ.5: ವಿದ್ಯುತ್ ನಿಲುಗಡೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಸರ್ಕಾರಿ ಬಸ್ಸುಗಳ ಮುಖಾಮುಖಿ ಡಿಕ್ಕಿ: ಪ್ರಯಾಣಿಕರು ಸಣ್ಣಪುಟ್ಟ ಗಾಯಾಗಳಿಂದ ಪಾರು

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ

Suddi Udaya
error: Content is protected !!