ಲಾಯಿಲ: ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿಯಿಂದ ಪಂದ್ಯಾಟದಲ್ಲಿ ತೊಡಗಿಸಿಕೊಳ್ಳಬೇಕೆಂದು ಜನಪದ ಕಲಾವಿದರಾದ ಉದಯಕುಮಾರ್ ಲಾಯಿಲ ಹೇಳಿದರು.
ಇವರು ಇತ್ತೀಚೆಗೆ ಎ ಎ ಅಕಾಡೆಮಿ ದಾವಣಗೆರೆ ಸಹಯೋಗಗೊಂಡಿರುವ ಪ್ರಸನ್ನ ಪದವಿ ಪೂರ್ವ ಕಾಲೇಜು ಲಾಯಿಲ ಬೆಳ್ತಂಗಡಿ ಇಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೆಳ್ತಂಗಡಿ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಎ ಎ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಅಣ್ಣೇಶ್ ಕೆ ಹೆಚ್ ವಹಿಸಿದ್ದರು. ಪ್ರಾಂಶುಪಾಲರಾದ ಕೃಪಾ ಆರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಪ್ರಸನ್ನ ಸಿಬಿಎಸ್ಸಿ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾದ ಎಸ್ಎನ್ ಭಟ್, ಕ್ರೀಡಾ ತಾಲೂಕು ಕ್ರೀಡಾಕೂಟದ ಸಂಯೋಜಕರಾದ ಡೆನ್ನೀಸ್, ಕ್ರೀಡಾ ತರಬೇತುದಾರರಾದ ಹಕೀಮ್, ಪ್ರಸನ್ನ ಕಾಲೇಜಿನ ಮುಖ್ಯನಿಲಯ ಮೇಲ್ವಿಚಾರಕರಾದ ರದೇಶ್, ಪ್ರಸನ್ನ ಸ್ಕೂಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ಶಿವರಾಂ, ಉಪನ್ಯಾಸಕರಾದ ಹರಿಪ್ರಸಾದ್ ಉಪಸ್ಥಿತರಿದರು.
ವಿದ್ಯಾರ್ಥಿ ನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಹೇಮಾವತಿ.ಕೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ ಉಪನ್ಯಾಸಕಿ ಗೀತಾ ಧನ್ಯವಾದವಿತ್ತರು. ಉಪನ್ಯಾಸಕಿ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಧನುಷ್ ಎಮ್ ಎನ್ ಸಂಯೋಜಿಸಿದ ಕಾರ್ಯಕ್ರಮದಲ್ಲಿ ನಿಲಯ ಮೇಲ್ವಿಚಾರಕರಾದ ಜಯರಾಮ್ ಉಪನ್ಯಾಸಕರಾದ ದೀಕ್ಷಿತ್, ಅಶ್ವಿನಿ, ಲಕ್ಷ್ಮಿ ,ವಿದ್ಯಾ , , ಲಕ್ಷ್ಮಣ್ ಆಕಾಶೆ, ಲತಾಶ್ರೀ, ಕಚೇರಿ ಸಿಬ್ಬಂದಿಗಳಾದ ಸ್ವಾತಿ, ದೀಕ್ಷಾ, ಚೈತ್ರ ಸಹಕರಿಸಿದರು.