28.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪುತ್ತೂರುಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯ ವಾರ್ಷಿಕೋತ್ಸವ

ಪುತ್ತೂರು: ಹಲವು ವರುಷಗಳಿಂದ ನಿರಂತರವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ , ಗ್ರಾಮೀಣ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ದಾರಿದೀಪವಾಗಿರುವ ವಿದ್ಯಾಮಾತಾ ಅಕಾಡೆಮಿಯು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿ , ಸುಳ್ಯದಲ್ಲೂ ತನ್ನ ಶಾಖೆಯನ್ನು ಪ್ರಾರಂಭಿಸಿ , ಸೇವೆ ಆರಂಭಿಸಿ, ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ.

ಸುಳ್ಯ ಶಾಖೆಯಲ್ಲಿ ನಡೆದ ಸರಳ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ನಿವೃತ್ತ ಸೈನಿಕರ ಸಂಘದ ಕಾರ್ಯದರ್ಶಿ ಕರ್ನಲ್ ಶರತ್ ಭಂಡಾರಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹಾರೈಸಿ ,ಮಾತನಾಡಿ , “ಬದ್ಧತೆಯೆನ್ನುವ ಸೇವಾ ಮನೋಭಾವ, ಆದರ್ಶ ವಿಚಾರಧಾರೆಗಳು,ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ಇವೆಲ್ಲಾ ಯುವ ಜನತೆಗೆ ದಾರಿದೀಪವಾಗಿದ್ದು , ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ಯುವ ಪೀಳಿಗೆ ಇವನ್ನೆಲ್ಲಾ ಅರಿತುಕೊಂಡು ಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಅಕಾಡೆಮಿಯ ಸಾಧನೆಯನ್ನು ಸ್ಮರಿಸಿ , ಸಂಸ್ಥೆಯ ಕಾರ್ಯವೈಖರಿಗೆ ಹಾರೈಸಿದರು. TAPCMS ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ ದೇರಪ್ಪಜ್ಜನಮನೆ ಮಾತನಾಡಿ, ಯುವ ಜನತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿಶೇಷ ಅರಿವು ಮೂಡಿಸುತ್ತಿರುವಂತಹ ಕಾರ್ಯ ಪ್ರಶಂಸನೀಯ ಎಂದೇಳಿ , ಸಂಸ್ಥೆಯ ಏಳಿಗೆಗೆ ಹಾರೈಸಿದರು.

ಅಕಾಡೆಮಿಗೆ ಉತ್ತಮ ರೀತಿ ಸಹಕಾರ ನೀಡಿದ ಕರ್ನಲ್ ಶರತ್ ಭಂಡಾರಿ ಹಾಗೂ ವಿದ್ಯಾಮಾತಾ ಅಕಾಡೆಮಿ ಸುಳ್ಯ ಶಾಖೆಯ ಸಾರ್ವಜನಿಕ ಸಂಪರ್ಕಧಿಕಾರಿ ಹಾಗೂ ಅರೆಭಾಷೆ ಅಕಾಡೆಮಿಯ ಸದಸ್ಯರಾದ ಚಂದ್ರಾವತಿ ಬಡ್ಡಡ್ಕರವರನ್ನು ಗೌರವಿಸಲಾಯಿತು. ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಪ್ರಾಸ್ತವಿಕ ಮಾತನಾಡಿ , ಸಂಸ್ಥೆಯನ್ನು ಹುಟ್ಟುಹಾಕಿದ ಹಿನ್ನೆಲೆ ಮತ್ತು ಮುಂದಿನ ಹಲವಾರು ಯೋಜನೆಯ ಬಗ್ಗೆ ವಿವರಿಸಿದರು.

ಬಳಿಕ ಅಕಾಡೆಮಿಯ ತರಬೇತಿ ವರ್ಗ ಹಾಗೂ ಸಿಬ್ಬಂದಿ ವರ್ಗದವರನ್ನು ಗೌರವಿಸಲಾಯಿತು.

ಆಡಳಿತಾಧಿಕಾರಿ ಚಂದ್ರಕಾಂತ್, ತರಬೇತುದಾರರಾದ ಉಷಾ,ಯಶಸ್ವಿನಿ ಹಾಗೂ ಪ್ರಸ್ತುತ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಿಥುನ್ ರೈ ಸಹಕರಿಸಿದರು.

ಸಾರ್ವಜನಿಕ ಸಂಪರ್ಕಧಿಕಾರಿ ಚಂದ್ರಾವತಿ ಬಡ್ಡಡ್ಕ ನಿರ್ವಹಿಸಿ , ಧನ್ಯವಾದವಿತ್ತರು.

Related posts

ಬಳಂಜ: ಮುಡಾಯಿಬೆಟ್ಟು ನಿವಾಸಿ ಲಲಿತ ನಿಧನ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ದೃಢ ಕಲಶ

Suddi Udaya

ಕಕ್ಕಿಂಜೆ : ಕೃಷಿಕ ಗೋಕುಲ್ ದಾಸ್ ಭಟ್ ನಿಧನ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ :ಹದಿಮೂರನೇ ಸುತ್ತಿನಲ್ಲಿ 13162 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ಘಟಕದಿಂದ ಅನುಗ್ರಹ ವೃದ್ದಾಶ್ರಮದಲ್ಲಿ ಮಹಿಳಾ ದಿನಾಚರಣೆ

Suddi Udaya

ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣದ ಎಸ್ .ಐ.ಟಿ ತನಿಖೆಗೆ ಆಗ್ರಹ: ಬೆಳ್ತಂಗಡಿ ತಾಲೂಕು ಕಚೇರಿ ಎದುರು ಮಹಾಧರಣಿ ಆರಂಭ

Suddi Udaya
error: Content is protected !!