25.4 C
ಪುತ್ತೂರು, ಬೆಳ್ತಂಗಡಿ
April 9, 2025
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಜನೋಪಯೋಗಿ ಪ್ರಾಜೆಕ್ಟ್‌ಗಳಿಗೆ ಪ್ರಶಸ್ತಿ: ಪ್ರಾಂಶುಪಾಲ ಸಂತೋಷ್ ರವರಿಂದ ಪತ್ರಿಕಾಗೋಷ್ಠಿ

ಉಜಿರೆ: ಎಸ್‌ಡಿಎಂ ಪಾಲಿಟೆಕ್ನಿಕ್ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಂದ 2008ರಲ್ಲಿ ಸ್ಥಾಪನೆಗೊಂಡಿದ್ದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಸೊಸೈಟಿಯ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತದೆ. ಈ ಕಾಲೇಜುAICTE, New Delhi ಯ ಮಾನ್ಯತೆ ಹಾಗೂ DTE-ಬೆಂಗಳೂರು ಇವರಿಂದ ಅನುಮೋದನೆಗೆ ಒಳಪಟ್ಟಿದ್ದು ಪಠ್ಯದ ಜೊತೆಗೆ ಪಠ್ಯೇತರ ಹಾಗೂ ಪೂರಕ ಚಟುವಟಿಕೆಗಳಲ್ಲಿಯೂ ಸಾಧನೆಯನ್ನು ಮಾಡುತ್ತಾ ಬಂದಿದೆ. ಹಿಂದಿನ ವರ್ಷಗಳಲ್ಲಿ ಅನೇಕ ರಾಜ್ಯಮಟ್ಟದ ಪ್ರಶಸ್ತಿಗಳು ಪ್ರಾಜೆಕ್ಟ್ ಸ್ಪರ್ಧೆಗಳಲ್ಲಿ ಲಭಿಸಿದ್ದು ಈ ವರ್ಷವೂ ಸೆ.13ರಂದು ಮೂಡಬಿದ್ರೆಯ ಎಸ್.ಎನ್.ಎಂ. ಪಾಲಿಟೆಕ್ನಿಕ್‌ನಲ್ಲಿ ನಡೆದ “ನವತ್ವಂ-2024” ಎಂಬ ಅಂತರ್ ಕಾಲೇಜು ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿಗಳು ಪೇಪರ್ ಪ್ಲೈವುಡ್ ಪ್ರಾಜೆಕ್ಟ್ ಪ್ರದರ್ಶನ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಮಲ್ಟಿ ಪರ್ಪಸ್ ಅಗ್ರಿಟಾಲಿಯ ವಿನ್ಯಾಸ ಮತ್ತು ತಯಾರಿಕೆಗೆ ಪ್ರತ್ಯೇಕವಾಗಿ ಪ್ರಥಮ ಸ್ಥಾನ ಲಭಿಸಿರುತ್ತದೆ.


ಈ ಪ್ರಾಜೆಕ್ಟ್‌ಗಳನ್ನು ವಿದ್ಯಾರ್ಥಿಗಳು ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಿದ್ದು ಸಮಾಜಮುಖಿಯಾಗಿವೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಮತ್ತು ತಾಂತ್ರಿಕ ಕೌಶಲ್ಯವನ್ನು ಪ್ರದರ್ಶಿಸಲು ಹಾಗೂ ಹೆಚ್ಚಿಸಲು ಕಾಲೇಜು ಅನೇಕ ಅವಕಾಶಗಳನ್ನು ಒದಗಿಸುತ್ತಿದ್ದು ಈ ಪ್ರಶಸ್ತಿಗಳು ನಮಗೆ ಇನ್ನಷ್ಟು ಹುರುಪನ್ನು ತಂದಿವೆ ಎಂದು ಕಾಲೇಜಿನ ಪ್ರಾಂಶುಪಾಲ ಸಂತೋಷ್ ರವರು ಸೆ.21 ರಂದು ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಪತ್ರಿಕಾಗೋಷ್ಠಿಯಲ್ಲಿ ಹೆಚ್‌ಓಡಿ ಆಫ್ ಸಿವಿಲ್ ಡಿಪಾರ್ಟ್‌ಮೆಂಟ್ ತೃಪ್ತಿ ಬಿ.ಎಂ., ವ್ಯವಸ್ಥಾಪಕ ಚಂದ್ರನಾಥ್ ಜೈನ್, ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕರಾದ ಶಿವರಾಜ್ ಹಾಗೂ ಸಾಯಿಚರಣ್ ಉಪಸ್ಥಿತರಿದ್ದರು.

Related posts

ಜಿಲ್ಲಾ ಮಟ್ಟದ ಸೀನಿಯರ್ ವಿಭಾಗದ ರಸಪ್ರಶ್ನೆ ಸ್ಪರ್ಧೆ: ಮೈರೋಳ್ತಡ್ಕ ಶಾಲೆಯ ವಿದ್ಯಾರ್ಥಿ ಧೃತಿ ಎನ್.ಡಿ ಪ್ರಥಮ ಸ್ಥಾನ

Suddi Udaya

ಉಜಿರೆ ಕು| ಸೌಜನ್ಯಳ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya

ಉಜಿರೆ: ನಿಲ್ಲಿಸಿ ಹೋಗಿದ್ದ ಟಿಟಿ ವಾಹನ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗಾಹುತಿ

Suddi Udaya

ಮಾ.30: ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ಕುಣಿತ ಭಜನಾ ಮಂಡಳಿಯಿಂದ ಬರಾಯ ಭಜನಾ ಕಮ್ಮಟ ಉತ್ಸವ

Suddi Udaya

ಮೇ 25: ಧರ್ಮಸ್ಥಳದಲ್ಲಿ “ಹತ್ತನಾವಧಿ” ಉತ್ಸವ

Suddi Udaya

ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಹೋಮ, ದುರ್ಗಾಪೂಜೆ

Suddi Udaya
error: Content is protected !!