29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸೆ. 24 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಭವನದಲ್ಲಿ ನೆರವೇರಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಶ್ರೀಮತಿ ಶ್ವೇತಾ ಹೆಚ್ ಕೆ ವಹಿಸಿದ್ದರು.


ಸಂಘವು ಸದರಿ ಸಾಲಿನಲ್ಲಿ 2.2 ಲಕ್ಷ ಲೀಟರ್ ಹಾಲು ಸಂಗ್ರಹಿಸಿದ್ದು ಸಂಘವು ಒಟ್ಟು 129072 ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ. ದಕ್ಷಿಣ ಕನ್ನಡ ಹಾಲು ಒಕ್ಕೂಟ ಶಿಬಿರ ಕಛೇರಿ, ಬೆಳ್ತಂಗಡಿಯ ವಿಸ್ತರಣಾಧಿಕಾರಿ ರಾಜೇಶ್ ಪಿ ಕೆ ಮಾಹಿತಿ ನೀಡಿದರು. ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ವರದಿ ವಾಚಿಸಿದರು.

ಸಂಘದ ನಿರ್ದೇಶಕಿ ಶ್ರೀಮತಿ ಸುಂದರಿ ಸ್ವಾಗತಿಸಿದರು. ಉಪಾಧ್ಯಕ್ಷೆ ಶ್ರೀಮತಿ ಹೇಮಾವತಿ ವಂದಿಸಿದರು. ಶ್ರೀಮತಿ ದಿವ್ಯ ಪ್ರಾರ್ಥಿಸಿದರು. ಸಂಘದ ನಿರ್ದೇಶಕರು ಉಪಸ್ಥಿತರಿದ್ದು, ಹಾಲು ಪರೀಕ್ಷಕಿ ಶ್ರೀಮತಿ ವೇದಾವತಿ ಸಹಕರಿಸಿದರು.

Related posts

ಕೊಕ್ಕಡ ಕೇಸರಿ ಗೆಳೆಯರ ಬಳಗದ ವತಿಯಿಂದ ಅಯೋಧ್ಯ ಟ್ರೋಫಿ: ಅಯೋಧ್ಯ ಕರಸೇವಕರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಚಿತ್ರಾಕೂಟ ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ತಂಬಿಲ ಸೇವೆ

Suddi Udaya

ಮಾ.22-23: ಶ್ರೀ ಸತ್ಯಸಾರ ಮುಪ್ಪಣ್ಯ ದೈವಸ್ಥಾನದ ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ: ಶ್ರೀ ಮಂಜುನಾಥ ಸ್ವಾಮಿ ದಶ೯ನ

Suddi Udaya

ಮುಳಿಯ ಜ್ಯುವೆಲ್ಸ್ ನಿಂದ ನೀಟ್ ಸಾಧಕ ಎಕ್ಸೆಲ್ ವಿದ್ಯಾರ್ಥಿ ಪ್ರಜ್ವಲ್ ಹೆಚ್.ಎಂ ರಿಗೆ ಗೌರವಾರ್ಪಣೆ

Suddi Udaya

ಕಳಿಯ ಗ್ರಾಮ ಪಂಚಾಯತ್ ನ್ಯಾಯ ಸಮಿತಿ ಸಭೆ

Suddi Udaya
error: Content is protected !!