ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಹಾಗೂ ರೋಟರಿ ಕ್ಲಬ್‌ ಬೆಳ್ತಂಗಡಿ ವತಿಯಿಂದ ಯಶೋ’ ಯಕ್ಷನಮನ-ಗಾನ-ನೃತ್ಯ-ಚಿತ್ರ

Suddi Udaya

ಬೆಳ್ತಂಗಡಿ : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ, ರೋಟರಿ ಕ್ಲಬ್‌ ಬೆಳ್ತಂಗಡಿ ವತಿಯಿಂದ ‘ಯಶೋ’ ಯಕ್ಷನಮನ – ಗಾನ-ನೃತ್ಯ-ಚಿತ್ರ ಕಾರ್ಯಕ್ರಮವು ಸೆ.30ರಂದು ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದಲ್ಲಿ ನಡೆಯಿತು.

ಹಿರಿಯ ವಕೀಲರು ರೊ| ಬಿ. ಕೆ. ಧನಂಜಯ ರಾವ್, ಯಶೋ ನುಡಿ ನಮನ ಕಾರ್ಯಕ್ರಮ ನಿರ್ವಹಿಸಿ ಮಾತನಾಡಿ ಸಸ್ಯಗಳನ್ನು ಪ್ರೀತಿಸುವುದೇ ಯಶೋವರ್ಮ ರವರ ಉಸಿರಾಗಿತ್ತು. ರೋಟರಿಗೆ ಹೊಸ ಚೈತನ್ಯ ನೀಡುವುದರ ಜೊತೆಗೆ ಅವರ ನಡೆ ನುಡಿಗಳು ನಮಗೆ ಆದರ್ಶ ಎಂದರು.

ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿ ‘ಡ್ರಾಮಾ ಜ್ಯೂನಿಯರ್ಸ್’ – 5 ವಿನ್ನರ್ ಕು. ರಿಷಿಕಾ ಕುಂದೇಶ್ವರ್ ರವರನ್ನು ಪುರಸ್ಕರಿಸಲಾಯಿತು. ಹಾಗೂ ಅತ್ಯುತ್ತಮ ಶಿಕ್ಷಕ ಪುರಸ್ಕೃತ ವಿ.ಕೆ. ವಿಟ್ಲ, ಸದಾನಂದ ಮುಂಡಾಜೆ, ದಿನೇಶ್ ಕೋಟ್ಯಾನ್ ರವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಉಜಿರೆ ಶ್ರೀ ಧ.ಮಂ. ಕಾಲೇಜು ಪ್ರಾಂಶುಪಾಲರಾದ ಡಾ. ಬಿ.ಎ. ಕುಮಾರ ಹೆಗ್ಡೆ, ಉಪನ್ಯಾಸಕರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್, ಬೆಳ್ತಂಗಡಿ ರೋಟರಿ ಕ್ಲಬ್‌ ಇದರ ಅಧ್ಯಕ್ಷ ರೊ| ಪೂರನ್ ವರ್ಮ, ಕೆಯ್ಯೂರು ವರ್ಮ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ಅಧ್ಯಕ್ಷ ಶಿವಾನಂದ ರಾವ್ ಕಕ್ಕೆನೇಜಿ, ಜೀ ಕನ್ನಡ ವಾಹಿನಿ ‘ಡ್ರಾಮಾ ಜ್ಯೂನಿಯರ್ಸ್’ – 5 ವಿನ್ನರ್ ಕು. ರಿಷಿಕಾ ಕುಂದೇಶ್ವರ್ ಉಪಸ್ಥಿತರಿದ್ದರು.

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇದರ ಸಂಚಾಲಕ ಅಶೋಕ್ ಭಟ್ ನಿರೂಪಿಸಿದರು. ರೋಟರಿ ಕ್ಲಬ್ ಬೆಳ್ತಂಗಡಿ ಇದರ ಕಾರ್ಯದರ್ಶಿ ರೊ। ಸಂದೇಶ್ ರಾವ್ ಧರ್ಮಸ್ಥಳ ವಂದಿಸಿದರು.

Leave a Comment

error: Content is protected !!