ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಶಿಕ್ಷಣವತಂರಿಂದ ಕೆಲವೊಂದು ದೇಶ ದ್ರೋಹದಂತ ಚಟುವಟಿಕೆ ನಡೆಯುತ್ತಿದ್ದು ಇದಕ್ಕೆ ಸಂಸ್ಕಾರಯುತ ಶಿಕ್ಷಣ ಸಿಗದೆ ಇರುವುದು ಕಾರಣ.ಶಿಕ್ಷಕರಾಗಲಿ,ಪೋಷಕರಾಗಲಿ ಮಕ್ಕಳನ್ನು ಬರೇ ಅಂಕಗಲಿಕೆಗೆ ಒತ್ತಡ ಹೇರಬೇಡಿ, ಜೊತೆಗೆ ಸಂಸ್ಕಾರಯುತ ಭವಿಷ್ಯ ರೂಪಿಸುವ ಶಿಕ್ಷಣ ಸಿಗುವಂತೆ ನೋಡಿಕೊಳ್ಳಿ. ಬಳಂಜ ಶಾಲಾ 75 ರ ಸಂಭ್ರಮ ಈ ದ್ಯೇಯ ವಾಕ್ಯದೊಂದಿಗೆ ನಡೆಯಲಿ ಎಂದು ಸಾಹಿತಿ ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ಹೇಳಿದರು.
ಅವರು ಅ.1 ರಂದು ಸ.ಉ ಪ್ರಾ, ಪ್ರೌ ಶಾಲೆ ಬಳಂಜ, ಶಾಲಾಬಿವೃದ್ದಿ ಸಮಿತಿ ಬಳಂಜ , ಅಮೃತಮಹೋತ್ಸವ ಸಮಿತಿ, ಯುವಕ ಮಂಡಲ ಬಳಂಜ, ಬಳಂಜ ಶಿಕ್ಷಣ ಟ್ರಸ್ಟ್ ಬಳಂಜ ಇವರ ಸಹಕಾರದಲ್ಲಿ ಜ್ಯೋತಿ ಮಹಿಳಾ ಮಂಡಲದ ವತಿಯಿಂದ ನಡೆದ ಸರಕಾರಿ ಶಾಲೆಯಲ್ಲಿ ಊರಿನವರ ಪಾತ್ರ ವಿಷಯದ ಬಗ್ಗೆ ನಡೆದ ಕಾರ್ಯಾಗಾರದಲ್ಲಿ ಸಂಪನ್ನನೂಲ ವ್ಯಕ್ತಿಯಾಗಿ ಮಾತನಾಡಿದರು.ಉತ್ತಮ ಶಿಕ್ಷಣ ಬೇಕು ಎನ್ನುವವರಿಗೆ ಉತ್ತಮ ಶಿಕ್ಷಣ ಅಂದರೇನು ಎಂದು ತಿಳಿದಿರುವುದಿಲ್ಲ. ಮೊದಲು ಅದನ್ನು ತಿಳಿಯಬೇಕಾಗಿದೆ. ಮಕ್ಕಳು ಹೆಚ್ಚು ಕಲಿಯಬೇಕು ಮತ್ತು ವಿದೇಶಗಳಲ್ಲಿ ಹೆಚ್ಚು ವೇತನ ಪಡೆಯಬೇಕು ಎನ್ನುವ ಪೋಷಕರ ಅಂತಿಮ ಬದುಕು ವೃದ್ದಾಶ್ರಮಗಳಲ್ಲಿ ಕಳೆಯುವ ಸ್ಥಿತಿ ಬಂದಿದೆ. ಇಂತಹ ಬದುಕು ಬೇಕೆ ಎನ್ನುವ ಬಗ್ಗೆ ಪೋಷಕರು ಅಲೋಚಿಸಿ ಮಕ್ಕಳ ಶಿಕ್ಷಣದ ಕಡೆ ಗಮನ ಕೊಡಿ ಎಂದರು. ಇಂದು ಬಳಂಜ ಶಾಲೆಯು 75 ರ ಸಂಭ್ರಮ ಎದುರು ನೋಡುತ್ತಿದೆ. ವಿವಿಧ ಕನಸುಗಳೊಂದಿಗೆ ಈ ಸಂಭ್ರಮವನ್ನು ಎದರು ನೋಡುತ್ತಿರುವ ಹಲವಾರು ಸಂಘ ಸಂಸ್ಥೆಗಳ ಚಿಂತನೆ ಈಗಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಇಂತಹ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕಾದರೆ ಊರಿನ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಅರ್ಥಪೂರ್ಣವಾಗಲು ಸಾದ್ಯ ಎಂದರು.
ಬಳಂಜ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಮನೋಹರ್ ಬಳಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 75 ವರ್ಷಗಳ ಹಿಂದೆ ಈ ಊರಿನ ಮಕ್ಕಳಿಗೆ ಶಿಕ್ಷಣ ಬೇಕು, ಅವರು ತಮ್ಮ ಭವಿಷ್ಯ ರೂಪಿಸಬೇಕೆಂದು ಚಿಂತಿಸಿ ಶಾಲೆ ಪ್ರಾರಂಬಿಸಿದ ಅನೇಕ ಮಹನಿಯರಿದ್ದಾರಲ್ಲ ಅವರಿಗೆ ಗೌರವ ಕೊಡಬೇಕು, ಏನೂ ಮೂಲಭೂತ ಸೌಕರ್ಯ ಇಲ್ಲದ ಸಂದರ್ಭದಲ್ಲಿ ಕಳೆದ 75 ವರ್ಷಗಳ ಹಿಂದಿನಿಂದ ಅದೆಷ್ಟೋ ಶಿಕ್ಷಕರು ಜ್ಞಾನಾರ್ಜನೆ ಮಾಡಿದ್ದಾರಲ್ಲಿ ಅವರಿಗೆ ಗೌರವ ಕೊಡುವ ಮೂಲಕ ಶಾಶ್ವತ ಯೋಜನೆಗಳ ಮೂಲಕ ಅರ್ಥಪೂರ್ಣವಾಗಿ ಅಮೃಮಹೋತ್ಸವ ಆಚರಿಸಲು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಪ್ರಾಥಮಿಕ ಶಾಲಾ ಕಟ್ಟಡ, ಪ್ರೌಢ ಶಾಲಾ ಕಟ್ಟಡ, ಉತ್ತಮ ಕ್ರೀಡಾಂಗಣ ರಚನೆ,ಶಾಲಾ ತೋಟದ ಅಬಿವೃದ್ದಿ ಮಾಡುವ ಮೂಲಕ 75 ರ ಸಂಭ್ರಮ ಆಚರಿಸಲಿದೆ.
ಇದೀಗ ನಮ್ಮೂರ ಪುಟಾಣಿಗಳಿಗೆ ಗುಣಮಟ್ಟದ ಸಂಸ್ಕಾರಯುತ ಆಂಗ್ಲ ಮತ್ತು ಕನ್ನಡ ಶಿಕ್ಷಣ ಸಿಗಬೇಕೆಂದು ಎಲ್ ಕೆ ಜಿ ತರಗತಿ ಪ್ರಾರಂಭಿಸಿದ್ದು, ಇಲ್ಲಿನ ಮಕ್ಕಳು ಪಡೆಯುತ್ತಿರುವ ಶಿಕ್ಷಣ ನೋಡಿದಾಗ ನಮ್ಮ ಮೊದಲ ಯಶಸ್ಸು ಸಾರ್ಥಕವಾಗಿದೆ.ಎಲ್ಲರೂ ನಮ್ಮೊಂದಿಗೆ ಕೈಜೋಡಿಸಬೇಕು ಎಂದರು. ಮಹಿಳಾ ಮಂಡಲದ ಅಧ್ಯಕ್ಷೆ ಚೇತನಾ ಜೈನ್ ಅದ್ಯಕ್ಷತೆ ವಹಿಸಿದ್ದರು.
ಯುವಕ ಮಂಡಲದ ಅದ್ಯಕ್ಷ ಸುಖೇಶ್ ಎಸ್ ಪೂಜಾರಿ, ಜ್ಯೋತಿ ಮಹಿಳಾ ಮಂಡಲದ ಸ್ಥಾಪಕಾದ್ಯಕ್ಷೆ ಚಂದನಾ ಯು ಪಡಿವಾಳ್,ಪ್ರೌಡಶಾಲಾ ಮುಖ್ಯೋಪಾದ್ಯಾಯಿನಿ ಸುಲೋಚನಾ ಕೆ, ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯ ರಂಗಸ್ವಾಮಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಹಿಳಾ ಮಂಡಲದ ವತಿಯಿಂದ ಸಾಹಿತಿ ಮುನಿರಾಜ ರೆಂಜಾಳರವರನ್ನು ಅಬಿನಂದಿಸಲಾಯಿತು. ಸಾಹಿತಿ ಚಂದ್ರಹಾಸ ಬಳಂಜ ಸ್ವಾಗತಿಸಿ ನಿರೂಪಿಸಿದರು. ಮಹಿಳಾ ಮಂಡಲದ ಕಾರ್ಯದರ್ಶಿ ಯಕ್ಷಿತಾ ವಂದಿಸಿದರು.