25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಜೆಸಿ ಭವನದಲ್ಲಿ ಟೀಮ್ ಬಿಲ್ಡಿಂಗ್ ಮತ್ತು ಮಾನವೀಯ ಸಂಬಂಧಗಳು ಎಂಬ ವಿಷಯದ ಬಗ್ಗೆ ಸದಸ್ಯರಿಗೆ ತರಬೇತಿಯನ್ನು ನಡೆಸಲಾಯಿತು.

ಜೆಸಿಐ ಪ್ರಾವಿಷನಲ್ ವಲಯ ತರಬೇತುದಾರರಾದ ಜೆಸಿಐ ಸುರತ್ಕಲ್ ಘಟಕದ ಸ್ಮಿತಾ ಐತಾಳ್ ಹಾಗೂ ಜೆಸಿಐ ಬಂಟ್ವಾಳ ಘಟಕದ ಆಶಾಮಣಿ ಯವರು ತರಬೇತಿಯನ್ನು ನಡೆಸಿಕೊಟ್ಟರು.

ಜೆಸಿಐ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ರಂಜಿತ್ ಎಚ್.ಡಿ ಸ್ವಾಗತಿಸಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಲೇಡಿ ಜೆಸಿ ಸಂಯೋಜಕರಾದ ಶ್ರುತಿರಂಜಿತ್ ಹಾಗೂ ಉಪಾಧ್ಯಕ್ಷರಾದ ಆಶಾ ಪ್ರಶಾಂತ್ ತರಬೇತುದಾರರನ್ನು ಘಟಕದ ಪರವಾಗಿ ಗೌರವಿಸಿದರು. ಉಪಾಧ್ಯಕ್ಷರಾದ ಚಂದ್ರಹಾಸ್ ಬಳಂಜ ತರಬೇತಿಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷರಾದ, ರಾಷ್ಟ್ರೀಯ ತರಬೇತುದಾರರಾಗಿರುವ ರಾಕೇಶ್ ಹೊಸಬೆಟ್ಟು, ಜೆಸಿಐ ಬಂಟ್ವಾಳದ ಪೂರ್ವ ಅಧ್ಯಕ್ಷರಾದ ಅಡ್ವಾಕೇಟ್ ದಯಾನಂದ ರೈ, ಬೆಳ್ತಂಗಡಿ ಘಟಕದ ಪೂರ್ವ ಅಧ್ಯಕ್ಷರುಗಳಾದ ಚಿದಾನಂದ ಇಡ್ಯಾ, ಪ್ರಶಾಂತ್ ಲಾಯಿಲ, ಹಾಗೂ ಸದಸ್ಯರಾದ ವಿನಾಯಕ್ ಉಪಸ್ಥಿತರಿದ್ದರು.


ವೇದಿಕೆ ಆಹ್ವಾನವನ್ನು ಉಪಾಧ್ಯಕ್ಷರಾದ ಶೈಲೇಶ್, ತರಬೇತುದಾರರ ಪರಿಚಯವನ್ನು ಕಾರ್ಯದರ್ಶಿಗಳಾದ ಅನುದೀಪ್ ಜೈನ್ ಹಾಗೂ ಜೊತೆ ಕಾರ್ಯದರ್ಶಿಗಳಾದ ಪ್ರಮೋದ್ ಕುಮಾರ್ ಕೆ ಯವರು ವಾಚಿಸಿದರು. ಕಾರ್ಯದರ್ಶಿಗಳ ಧನ್ಯವಾದವಿತ್ತರು.

Related posts

ಬೆಳ್ತಂಗಡಿಯ ಎಂಆರ್ ಎಫ್ ಶೋ ರೂಂನ ಆವರಣ ಗೋಡೆಗೆ ಡಿಕ್ಕಿ ಹೊಡೆದ ಕಾರು: ಅಪಾಯದಿಂದ ಪಾರಾದ ಪ್ರಯಾಣಿಕರು

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಆಟಿಡೊಂಜಿ ದಿನ

Suddi Udaya

ಬೆಳ್ತಂಗಡಿ ಕ.ಸಾ.ಪ. ಕ್ಕೆ ಸಂಘಟನ ಕಾರ್ಯದರ್ಶಿಗಳ ನೇಮಕ

Suddi Udaya

ಕಾಯರ್ತ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಶ್ರೀಮತಿ ಚೈತನ್ಯ ಮತ್ತು ನಿರಂಜನ ಗೌಡ ರವರಿಂದ ವಿದ್ಯುತ್ ಚಾಲಿತ ಗಂಟೆ ಕೊಡುಗೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಮಹಿಳಾ ಮಂಡಳಿಯಿಂದ ಮಹಿಳಾ ದಿನಾಚರಣೆ

Suddi Udaya

ಕಡಿರುದ್ಯಾವರ ಗ್ರಾ.ಪಂ. ಪಿಡಿಒ ಆಗಿದ್ದ ಶ್ರೀಧರ್ ಹೆಗಡೆ ಆತ್ಮಹತ್ಯೆಗೆ ಯತ್ನ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ