March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ಕೊಯ್ಯೂರು ಮಲೆಬೆಟ್ಟು ನಿವಾಸಿ ಅಮೃತೇಶ್‌ ರಿಗೆ ರೂ.19.90 ಲಕ್ಷ ವಂಚನೆ

ಕೊಯ್ಯೂರು : ಟೆಲಿಗ್ರಾಂ ಆ್ಯಪ್ ಮೂಲಕ ಪರಿಚಯವಾದ ಯಾರೋ ಅಪರಿಚಿತರು ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಸುಮಾರು ರೂ.19.90 ಲಕ್ಷ ವಂಚಿಸಿದ ಘಟನೆ ಅ.5 ರಂದು ವರದಿಯಾಗಿದೆ.

ಸೆ.29 ರಂದು ಮಲೆಬೆಟ್ಟು ಕೋಡಿಮಾರು ನಿವಾಸಿ ಅಮೃತೇಶ್‌ ಕುಮಾರ್‌ ಎ ರವರು ಟೆಲಿಗ್ರಾಂ ಆ್ಯಪ್ ಮೂಲಕ ಪರಿಚಯವಾದ ಯಾರೋ ಅಪರಿಚಿತರು ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗ ನೀಡುವುದಾಗಿ ಅವರ ಬಾಬ್ತು ಮೊಬೈಲ್‌ ನಲ್ಲಿದ್ದ ಟೆಲಿಗ್ರಾಂ ಅಪ್ಲಿಕೇಶನ್‌ ಗೆ ಯಾರೋ ಅಪಚಿರಿತರು https://ecommerecboostbranding.Com ವೆಬ್‌ ಸೈಟ್‌ ನ ಲಿಂಕ್‌ ನ್ನು ಕಳುಹಿಸಿ ನೊಂದಾಯಿಸಿಕೊಂಡು ಆನ್‌ ಲೈನ್‌ ವಸ್ತುಗಳನ್ನು ಉತ್ತೇಜಿಸಿದಲ್ಲಿ ಸಂಬಳದ ರೂಪದಲ್ಲಿ ಖಾತೆಗೆ ಹಣ ಜಮಾ ಮಾಡಲಾಗುವುದೆಂದು ತಿಳಿಸಿದಂತೆ, ಅಮೃತೇಶ್‌ ಕುಮಾರ್‌ ರವರು ವಂಚಕರ ಮಾರ್ಗದರ್ಶನದಂತೆ ಸದ್ರಿ ಲಿಂಕ್‌ ನ್ನು ಓಪನ್‌ ಮಾಡಿ ನೊಂದಾಯಿಸಿ ಕೊಂಡು ಅವರು ನೀಡಿರುವ ಟಾಸ್ಕನ್ನು ಮುಂದುವರಿಸುತ್ತಾ ಹೋದಂತೆ, ಟಾಸ್ಕನ್ನು ಮುಕ್ತಾಯಗೊಳಿಸಲು ಠೇವಣಿ ರೂಪದಲ್ಲಿ ಹಣ ಸಂದಾಯ ಮಾಡಬೇಕಾಗಿ ಮತ್ತು ವಿಶೇಷ ಬೋನಸ್‌ ಲಭಿಸಿದಲ್ಲಿ ದೊರೆಯುವ ಬೋನಸ್‌ ಪಡೆಯಲು ಠೇವಣಿ ಹಣವನ್ನು ಮತ್ತೆ ಮತ್ತೆ ಪಾವತಿಸಲು ತಿಳಿಸಿದಂತೆ ಅಮೃತೇಶ್‌ ಕುಮಾರ್‌ ಅವರ ವಿವಿಧ ಬ್ಯಾಂಕ್‌ ಖಾತೆಯಿಂದ ಅಪರಿಚಿತ ವ್ಯಕ್ತಿಯ ವಿವಿಧ ಬ್ಯಾಂಕ್‌ ಖಾತೆಗೆ ಒಟ್ಟು 19,90,442/- ರೂ ಹಣವನ್ನು ಹಂತ-ಹಂತವಾಗಿ ವರ್ಗಾಯಿಸಿದ್ದು, ಜಮಾ ಮಾಡಿದ ಹಣವನ್ನು ವಾಪಾಸ್ಸು ನೀಡದೇ ನಂಬಿಸಿ ಮೋಸ ಮಾಡಿ ವಂಚಿಸಿದ್ದು ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಅಪರಿಚಿತರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ : 85/2024 ಕಲಂ: 318(2) 318(4) BNS – 2023 & 66(D) IT ACT 2008 ದೂರು ದಾಖಲಾಗಿ ತನಿಖೆಯಲ್ಲಿರುತ್ತದೆ.

Related posts

ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ, ಶೌರ್ಯ ವಿಪತ್ತು ನಿರ್ವಹಣಾ ತಂಡ, ಧರ್ಮಸ್ಥಳ ಸಿಬ್ಬಂದಿಗಳು, ಗ್ರಾಮಸ್ಥರಿಂದ ನೇತ್ರಾವತಿ ನದಿ ಸ್ವಚ್ಛತಾ ಕಾರ್ಯ

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪ್ರೌಢ ವಿಭಾಗದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕ ನಂದಕುಮಾರ್ ಅವರಿಗೆ ಸಂತಾಪ ಸೂಚಕ ಸಭೆ

Suddi Udaya

ಬಡಗಕಾರಂದೂರು ಸ.ಉ.ಹಿ.ಪ್ರಾ. ಶಾಲೆಯಲ್ಲಿ “ಹದಿಹರೆಯ ಮತ್ತು ಆರೋಗ್ಯ” ಕಾರ್ಯಕ್ರಮ

Suddi Udaya

ಕಂಬಳ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅನುಮತಿ

Suddi Udaya

ಕುಸಿಯುವ ಹಂತದಲ್ಲಿರುವ ವೇಣೂರು ಸರಕಾರಿ ಪ್ರೌಢಶಾಲೆಗೆ ಶಾಸಕ ಹರೀಶ್ ಪೂಂಜ ಭೇಟಿ, ತಕ್ಷಣ ಸ್ಪಂದನೆ

Suddi Udaya
error: Content is protected !!