ಇಂದಬೆಟ್ಟು; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದಬೆಟ್ಟು ವಲಯದ ಗುರಿಪಳ್ಳ ಕಾರ್ಯಕ್ಷೇತ್ರದಲ್ಲಿ ಬೆಳಕು ಎಂಬ ನಾಮಕರಣದೊಂದಿಗೆ ಹೊಸ ಜ್ಞಾನವಿಕಾಸ ಕೇಂದ್ರವನ್ನು ತಾಲೂಕು ಪಂಚಾಯತ್ ಮಾಜಿ ಸದಸ್ಯರು ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ಸೌಮ್ಯಲತರವರು ಉದ್ಘಾಟನೆ ಮಾಡಿ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳಲ್ಲಿ ಜ್ಞಾನ ವಿಕಾಸ ಉತ್ತಮ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ಉತ್ತಮ ಮಾಹಿತಿಗಳು ದೊರೆಯುತ್ತಿದ್ದು ಸದುಪಯೋಗ ಪಡೆಯಿರಿ ಎಂದರು.
ತಾಲೂಕಿನ ಯೋಜನಾಧಿಕಾರಿಯಾಗಿ ಸುರೇಂದ್ರ ರವರು ಜ್ಞಾನ ವಿಕಾಸ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾತನಾಡುತ್ತಾ ಜ್ಞಾನ ವಿಕಾಸ ಕೇಂದ್ರದಲ್ಲಿ ಸದಸ್ಯರಿಗೆ ವಿವಿಧ ಸಂಪನ್ಮೂಲ ವ್ಯಕ್ತಿಯಿಂದ ಮಾಹಿತಿ ನೀಡುವುದಲ್ಲದೆ ಸದಸ್ಯರ ಪ್ರತಿಭೆಗಳನ್ನು ಹೊರ ಹಾಕಲು ಅವಕಾಶವಿದೆ ಎಂದರು. ಕಾರ್ಯಕ್ರಮದಲ್ಲಿ ಒಕ್ಕೂಟ ಅಧ್ಯಕ್ಷ ಗುರುರಾಜ್ , ವಲಯ ಮೇಲ್ವಿಚಾರಕಿ ಉಷಾ, ಪ್ರಬುದ್ಧ ಕೇಂದ್ರದ ಸದಸ್ಯರಾದ ಕಲಾವತಿ ಉಪಸ್ಥಿತರಿದ್ದರು.
ಸಮನ್ವಯಧಿಕಾರಿ ಮಧುರಾವಸಂತ್ ನಿರೂಪಿಸಿ, ಸೇವಾಪ್ರತಿನಿಧಿ ಪುಷ್ಪರವರು ಸ್ವಾಗತಿಸಿ, ಶಶಿಕಲಾರವರು ಧನ್ಯವಾದವಿತ್ತರು.