23.7 C
ಪುತ್ತೂರು, ಬೆಳ್ತಂಗಡಿ
May 19, 2025
Uncategorized

ಬೆಳ್ತಂಗಡಿ ಪವರ್ ಆನ್ ಸಂಸ್ಥೆಯಲ್ಲಿ ಶ್ರೀ ಲಕ್ಷ್ಮಿ ಪೂಜೆ ಕೂಪನ್ ಬಿಡುಗಡೆ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ

ಬೆಳ್ತಂಗಡಿ: ಕಳೆದ ಹಲವಾರು ವರ್ಷಗಳಿಂದ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಶೀತಲ್ ಜೈನ್ ಅವರ ಮಾಲಕತ್ವದ ಪವರ್ ಆನ್ ಬ್ಯಾಟರಿ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದ್ದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬರುತ್ತಿದೆ.

ನವರಾತ್ರಿಯ ವಿಜಯ ದಶಮಿ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಶ್ರೀ ಲಕ್ಷ್ಮಿ ಪೂಜೆ ,ಆಯುಧ ಪೂಜೆ,ವಾಹನ ಪೂಜೆ ನಡೆಸಲಾಯಿತು.

ಈ ಸಂದರ್ಭದಲ್ಲಿ ವಿಜಯವಾಣಿ ಪತ್ರಿಕೆಯ ವಿಜಯೋತ್ಸವ-2024 ಇದರ ಕೂಪನ್ ಬಿಡುಗಡೆಯನ್ನು ಪವರ್ ಆನ್ ಸಂಸ್ಥೆಯ ಮಾಲಕ ಶೀತಲ್ ಜೈನ್ ಅವರ ತಂದೆಯವರಾದ ಪಾರ್ಶ್ವನಾಥ ಜೈನ್ ಶಿರ್ಲಾಲು ಕೂಪನ್ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ವಿಜಯವಾಣಿ ಪತ್ರಿಕೆಯ ವರದಿಗಾರರಾದ ಮನೋಹರ್ ಬಳಂಜ,ಕೆಡಿಪಿ ಸದಸ್ಯ ಸುನಿಲ್ ಕುಮಾರ್ ಜೈನ್ ಶಿರ್ಲಾಲು, ಸುದ್ದಿ ಉದಯ ಪತ್ರಿಕೆಯ ಉಪ ಸಂಪಾದಕ ಸಂತೋಷ್ ಪಿ ಕೋಟ್ಯಾನ್ ಬಳಂಜ,ಶಿಕ್ಷಕರಾದ ನಾರಾಯಣ,ಪವರ್ ಆನ್ ಸಂಸ್ಥೆಯ ಮಾಲಕ ಶೀತಲ್ ಜೈನ್,ನ್ಯೂ ಆಯಾನ್ಸ್ ಮೊಬೈಲ್ ಸಂಸ್ಥೆಯ ಮಾಲಕ ಅರಿಹಂತ್ ಜೈನ್,ಸುಧೀರ್ ಕುಮಾರ್ ಜೈನ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಮ್ಮಲ್ಲಿ ದ್ವಿಚಕ್ರ ವಾಹನ ಮತ್ತು ಎಲ್ಲಾ ವಾಹನಗಳ ಬ್ಯಾಟರಿಗಳು,ಎಲ್ಲಾ ಕಂಪನಿಯ ಇನ್ವರ್ಟರ್ ಬ್ಯಾಟರಿಗಳು ದೊರೆಯುತ್ತದೆ. ಜೊತೆಗೆ ಹಳೆಯ ಬ್ಯಾಟರಿಗಳನ್ನು ಬದಲಾಯಿಸಿ ಹೊಸ ಬ್ಯಾಟರಿ ಇನ್ವರ್ಟರ್ ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಗ್ರಾಹಕರಿಗೆ ಅವಕಾಶವಿದೆ.ಸೋಲಾರ್, ಫ್ರಿಜ್, ವಾಷಿಂಗ್ ಮಷೀನ್, ಟಿವಿ ಮತ್ತು ಎಲ್ಲಾ ತರದ ಫರ್ನಿಚರ್ ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ಹೋಂ ಅಪ್ಲಾಯನ್ಸ್ಗಳು ನಮ್ಮಲ್ಲಿ ಲಭ್ಯವಿದೆ.ಫೈನಾನ್ಸ್ ಸೌಲಭ್ಯಗಳಿದ್ದು ಬಜಾಜ್, ಎಚ್.ಡಿ.ಎಫ್.ಸಿ, ಐಡಿಎಫ್ ಸಿ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ ಎಂದು ಸಂಸ್ಥೆಯ ಮಾಲಕ ಶೀತಲ್ ಜೈನ್ ತಿಳಿಸಿದರು.

ಖರೀದಿಯ ಮೇಲೆ ವಿಶೇಷ ರಿಯಾಯಿತಿ:ಶೀತಲ್ ಜೈನ್

ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ನಮ್ಮ ಪವರ್ ಆನ್ ಸಂಸ್ಥೆಯಲ್ಲಿ ಖರೀದಿಸುವ ಪ್ರತಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುವುದು.ಒಂದು ಮನೆಗೆ ಬೇಕಾಗುವ ಎಲ್ಲಾ ಗೃಹೋಪಯೋಗಿ ವಸ್ತುಗಳು ಒಂದೇ ಸೂರಿನಡಿ ದೊರೆಯುತ್ತಿದೆ.ಇಗಾಗಲೇ ಹಬ್ಬದ ಪ್ರಯುಕ್ತ ಬ್ರಹತ್ ಸಂಗ್ರಹ ಮಾಡಲಾಗಿದ್ದು ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

Related posts

ಕನ್ಯಾಡಿ ಬ್ರಹ್ಮಾನಂದ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

Suddi Udaya

ತೋಟತ್ತಾಡಿ ಪೆರ್ನಾಳೆ ಕೆರೆ ತುಂಬಿದ್ದು ಕೆರೆಯ ಗೇಟು ತೆರೆಯಲು ಆಗದೆ ತಂದೊಡ್ಡಿದೆ ಸಮಸ್ಯೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರ ತಂಡ ಸ್ಥಳಕ್ಕೆ: ಗೇಟ್ ತೆರೆಯಲು ಯಶಸ್ವಿ

Suddi Udaya

ಮೇ 25: ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕ ಕೆ.ವಸಂತ ಬಂಗೇರರಿಗೆ ನುಡಿ ನಮನ : ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಭಾಗಿ

Suddi Udaya

ಸೋಣಂದೂರು: ಕೊಲ್ಪದಬೈಲು ಬಳಿ ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ: ಸ್ಥಳೀಯರಿಂದ ತೆರವು ಕಾರ್ಯ

Suddi Udaya

ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ

Suddi Udaya

ಕಲ್ಮಂಜ ನಿವಾಸಿ ಶಿವಾನಂದ ಪ್ರಭು ನಿಧನ

Suddi Udaya
error: Content is protected !!