ವೇಣೂರು : ಇಲ್ಲಿಯ ಶ್ರೀ ಕುಂಭಶ್ರೀ ಕಟ್ಟಡದಲ್ಲಿ ಪ್ರವೀಣ್ ಭಂಡಾರಿ ಮಾಲಕತ್ವದ ಶ್ರೀ ಸಾಯಿ ಗಿಫ್ಟ್ &ಟಾಯ್ಸ್ ಸೆಂಟರ್ ಮಳಿಗೆಯನ್ನು ಡೆಂಜೋಳಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕರು ಉದಯ ಮಂಜಿತ್ತಾಯ ರವರು ಪೂಜೆಯ ಮೂಲಕ ನಡೆಯಿತು.
ನಮನ ಕ್ಲಿನಿಕ್ ಡಾಕ್ಟರ್ ಶ್ರೀ ಶಾಂತಿ ಪ್ರಸಾದ್ ದೀಪ ಬೆಳಗಿಸಿ ಮಾತನಾಡಿ ಈ ರೀತಿಯ ಮಳಿಗೆಗಳ ಅಗತ್ಯತೆ ವೇಣೂರಿಗೆ ತುಂಬಾ ಇದೆ. ಪ್ರವೀಣ್ ಒಬ್ಬ ಹಠವಾದಿ, ಸಾಧನೆ ಎಂಬುದು ಅವರ ದ್ಯೇಯ. ಮುಂದಕ್ಕೆ ಉತ್ತಮ ವ್ಯಾಪಾರ ವಹಿವಾಟು ಸಾಗಲು ಶ್ರೀ ದೇವರ ಅನುಗ್ರಹ ಇರಲಿ ಎಂದು ಶುಭ ಹಾರೈಸಿದರು.
ವಿಧಾನ ಪರಿಷತ್ ಅಭ್ಯರ್ಥಿ ಕಿಶೋರ್ ಭಂಡಾರಿ ಬೋಟ್ಯಾಡಿ ಪುತ್ತೂರು ರಿಬ್ಬನ್ ಕಟ್ ಮಾಡುವುದರ ಮೂಲಕ ಮಳಿಗೆಯನ್ನು ಶುಭಾರಂಭಗೊಳಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಜೈನ್ ಶುಭ ನುಡಿದರು. ವೇಣೂರಿನ ಉದ್ಯಮ ಭಾಸ್ಕರ ಪೈ, ಗಣೇಶ್ ಟ್ರೇಡರ್ಸ್ ಮಾಲಕ ಗಣಪತಿ ಭಟ್, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ ಇ, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಕಾಶೀನಾಥ್, ವೇಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ್ ಯನ್, ಯಚ್ ಗಿರೀಶ್ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ನಿಟ್ಟಡೆ ಕುಂಡದಬೆಟ್ಟು, ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್, ಕುಂಭಶ್ರೀ ಶಾಲೆಯ ಸಂಚಾಲಕರು ಅಶ್ವಿತ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಮಿಡಿ ಟಿವಿ ಶೋ ಕಾರ್ಯಕ್ರಮದ ಮೂಲಕ ಪ್ರಸಿದ್ದಿ ಪಡೆದ ಅನಿಶ್ ಪೂಜಾರಿ ವೇಣೂರು ಹಾಗೂ ಪುಷ್ಪಕ್ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ವಿಡಿಯೋ ಭಕ್ತಿಗೀತೆಯ ಸತೀಶ್ ಭಂಡಾರಿ ನಾಳ ಇವರನ್ನು ಸನ್ಮಾನಿಸಲಾಯಿತು…
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಭಂಡಾರಿ ಸಮಾಜದ ಅಧ್ಯಕ್ಷ ಉಮೇಶ್ ಭಂಡಾರಿ ಉಜಿರೆ, ಬೆಳ್ತಂಗಡಿ ಭಂಡಾರಿ ಯುವ ವೇದಿಕೆ ಅಧ್ಯಕ್ಷ ವಿಶ್ವನಾಥ ಭಂಡಾರಿ ಉಜಿರೆ, ಕಾರ್ಯದರ್ಶಿ ಪ್ರಶಾಂತ್ ಭಂಡಾರಿ ವೇಣೂರು, ಪೂವಪ್ಪ ಭಂಡಾರಿ ಮದ್ದಡ್ಕ, ವೇಣೂರು ಪುಷ್ಪಕ್ ಸಲೂನ್ ಮಾಲಕ ಸದಾಶಿವ ಭಂಡಾರಿ, ಗೋಳಿಯಂಗಡಿ ನಂದಿಕೇಶ್ವರ ಸೆಲೂನ್ ಮಾಲಕ ದಿನಕರ ಭಂಡಾರಿ, ಕೇಶವ ಭಂಡಾರಿ ಮೂಡಬಿದ್ರೆ, ಸುಮಿತ್ರ, ಸುರೇಖಾ, ಅನುಪಮಾ, ರಾಜೇಶ, ನಾರಾಯಣ, ರಾಜೇಶ್ ಕುಲಾಲ್ ಪಡ್ತ್ರೆ,ರಾಧಾ ಕೃಷ್ಣ ದೇವಾಡಿಗ, ಭೋಜ ಪೂಜಾರಿ, ರುಕ್ಮಯ್ಯ ಪೂಜಾರಿ ಹಾಗೂ ಪ್ರವೀಣ್ ಭಂಡಾರಿಯವರ ಹಿತೈಷಿಗಳು ಉಪಸ್ಥಿತರಿದ್ದು ಶುಭ ಕೋರಿದರು.
ರಮ್ಯಾ, ಹರ್ಷಿತ್,ಪ್ರಣಮ್ಯ, ಪೃಥ್ವಿನ್ ,ನಾರಾಯಣ ಕುಲಾಲ್, ಸವಿತಾ, ಸುಶ್ಮಿತಾ ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಸತ್ಕರಿಸಿದರು…ಜಗದೀಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.
ದೀಪಾವಳಿ ಹಬ್ಬದ ವಿಶೇಷ ಉಡುಗೊರೆ: ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 23ರಿಂದ ದೀಪಾವಳಿ ಮುಗಿಯುವ ತನಕ ವಿಶೇಷ ದರ ಕಡಿತ ಮಾರಾಟ ನಡೆಯಲಿದೆ.
ಗಿಫ್ಟ್ ಕೂಪನ್: 500ರೂಪಾಯಿ ಖರೀದಿಯ ಜೊತೆಗೆ ಒಂದು ಗಿಫ್ಟ್ ಕೂಪನ್ ಅಂತೆಯೇ 1000ಖರೀದಿಗೆ 2ಗಿಫ್ಟ್ ಕೂಪನ್ ಮುಂದಕ್ಕೆ ಎಷ್ಟು ಸಾವಿರ ರೂಪಾಯಿಯ ವಸ್ತುಗಳನ್ನು ಖರೀದಿ ಮಾಡುವಾಗಲೂ 500ಗೆ ಒಂದರಂತೆ ಗಿಫ್ಟ್ ಕೂಪನ್ ದೊರೆಯಲಿದೆ. ಅದರ ಡ್ರಾವನ್ನು ದೀಪಾವಳಿ ಕಳೆದ ತಕ್ಷಣ ಅದೇ ಮಳಿಗೆಯಲ್ಲಿ ನಡೆಯಲಿದೆ ಎಂದು ಮಾಲಕ ಪ್ರವೀಣ್ ಭಂಡಾರಿ ತಿಳಿಸಿದ್ದಾರೆ.