25.7 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ವಿಧ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ

ಬೆಳ್ತಂಗಡಿ; ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ವಿಧ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನವಂಬರ್ 2 ರಂದು ಬೆಳ್ತಂಗಡಿಯಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ಬಿ ಶೇಕುಂಞಿ ವಹಿಸಿದ್ದರು. 2024-25 ನೇ ಸಾಲಿನಲ್ಲಿ ಒಟ್ಟು
ಎಂಬತ್ತು ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತ ನೀಡಲಾಯಿತು.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಅತಿ ಹೆಚ್ಚು ಅಂಕ ಗಳಿಸಿದ ಒಟ್ಟು ಐವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಮೀಯತುಲ್ ಫಲಾಹ್ ದ.ಕ.ಉಡುಪಿ ಅವಿಭಜಿತ ಜಿಲ್ಲಾ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಅವರು ಮಾತನಾಡಿ, ಜಮೀಯತುಲ್ ಫಲಾಹ್ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಡಾ ನಿಯಾಝ್ ಅವರು ವಿಧ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಅಬ್ದುಲ್‌ ಲತೀಫ್ ಸಾಹೇಬ್, ಕಾರುಣ್ಯ ಇಂಗ್ಲಿಷ್‌ ಮೀಡಿಯಂ ಶಾಲಾ ಸಮಿತಿ ಚೇರ್ಮನ್ ಮುಹಮ್ಮದ್ ಕೆ., ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾದ್ಯಮ ಶಾಲೆಯ ಚೇರ್ಮನ್ ನಾಸಿರ್ ಖಾನ್ ಪಿಲ್ಯ,
ಸ್ಟಾರ್ ಲೈನ್ ಅಂಗ್ಲ ಮಾಧ್ಯಮ ಶಾಲೆಯ ಚೇರ್ಮನ್ ಸಯ್ಯದ್ ಹಬೀಬ್ ಸಾಹೇಬ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮೂರು ವಿದ್ಯಾ ಸಂಸ್ಥೆಯ ವ್ಯವಸ್ಥಾಪಕರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಆಲಿಯಬ್ಬ ಪುಲಾಬೆ ಸ್ವಾಗತಿಸಿ, ಖಾಲಿದ್ ಪುಲಾಬೆ ವಂದಿಸಿದರು. ಉಮರ್ ಕುಂಞ ನಾಡ್ಜೆ ಕಾರ್ಯಕ್ರಮ ನಿರೂಪಿಸಿದರು.

Related posts

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ಅಂಗನವಾಡಿ ಹಾಗೂ ಶಾಲೆಯ 207 ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ

Suddi Udaya

ಉಜಿರೆ ಗ್ರಾಮ ಪಂಚಾಯತ್ ಗೆ ಲಕ್ಷ ದ್ವೀಪದ ಅಧಿಕಾರಿಗಳು ಭೇಟಿ

Suddi Udaya

ಬೆಳ್ತಂಗಡಿ ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ನಿಂದ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ

Suddi Udaya

ಸರ್ಕಾರಿ ನೌಕರರಿಗೆ ಆರ್‌ಎಸ್‌ಎಸ್‌ ಗೆ ಸೇರುವ ಅವಕಾಶ, ನಿಷೇಧವನ್ನು ಕೊನೆಗೊಳಿಸಿದ ಮೋದಿ ಸರ್ಕಾರ

Suddi Udaya

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭ

Suddi Udaya

ವಿಧಾನ ಪರಿಷತ್ ಉಪಚುನಾವಣೆ : ಬೆಳ್ತಂಗಡಿ ಮಂಡಲದ ಬಿಜೆಪಿ ಚುನಾವಣಾ ಸಂಚಾಲಕರಾಗಿ ಪ್ರಭಾಕರ ಆಚಾರ್ಯ, ಸಹ ಸಂಚಾಲಕರಾಗಿ ಅರವಿಂದ ಲಾಯಿಲ

Suddi Udaya
error: Content is protected !!