26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಕಾಶಿಪಟ್ಣ ಗ್ರಾಮ ಪಂಚಾಯತ್ ಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಡಾ.ಶಿವರಾಮ ಕಾರಂತರ ಜನ್ಮದಿನಾಚರಣೆಯ ಅಂಗವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯತುಗಳಿಗೆ ಶಿವರಾಮ ಕಾರಂತ ಪ್ರಶಸ್ತಿಯನ್ನು ನೀಡುತ್ತಿದ್ದು ಈ ಪ್ರಶಸ್ತಿ ಕಾಶಿಪಟ್ಣ ಗ್ರಾಮ ಪಂಚಾಯತ್ ಗೆ ಲಭಿಸಿದೆ.

ಕೋಟತಟ್ಟು ಕಾರಂತ ಥೀಂ ಪಾರ್ಕ್ ನಲ್ಲಿ ನ. 10 ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೇಘಾಲಯದ ರಾಜ್ಯಪಾಲ ವಿಜಯ ಶಂಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಕಾಶಿಪಟ್ಣ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ ಬಂಗೇರ ಕಾಶಿಪಟ್ಣ, ಉಪಾಧ್ಯಕ್ಷೆ ಸುಭವಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಅವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿ ಗೌರವಿಸಿದರು.

ಕಾಶಿಪಟ್ಣ ಗ್ರಾಮ ಪಂಚಾಯತ್ ಹಲವಾರು ಜನಪರ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡು ಊರಿನ ಅಭಿವೃದ್ಧಿಯಲ್ಲಿ ತೊಡಗಿಸುತ್ತಿದೆ. ಪ್ರತಿಷ್ಠಿತ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿ ಮುಂದೆ ಸ್ವೀಕರಿಸಲಿದ್ದಾರೆ.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಸುಶೀಲ, ಶಿಲ್ಪ, ಸವಿತಾ, ರವೀಂದ್ರ,ಅಶೋಕ್ ಕುಮಾರ್, ಕಾರ್ಯದರ್ಶಿ ಲೀನಾ, ಸಿಬ್ಬಂದಿಗಳಾದ ಶ್ವೇತಾ, ರೇಷ್ಮಾ, ಸುರೇಖಾ, ಮುಖೇಶ್ ,ಪ್ರದೀಪ್, ಸುಶಾಂತ್ ಉಪಸ್ಥಿತರಿದ್ದರು.

Related posts

ವಲಯ ಮಟ್ಟದ ಕ್ರೀಡಾಕೂಟ: ನಯನಾಡು ಸರಕಾರಿ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಕರಾಯ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಭಜನಾ ತರಬೇತಿ ಕಾರ್ಯಾಗಾರ

Suddi Udaya

ಗುರುವಾಯನಕೆರೆ: ಮಹಿಳೆಗೆ ಜೀವಬೆದರಿಕೆ, ಹಲ್ಲೆ ಆರೋಪ: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಬಲ್ಯೋಟ್ಟು ಶ್ರೀ ಗುರುಕೃಪಾ ಸೇವಾ ಆಶ್ರಮಕ್ಕೆ ಆರ್ಥಿಕ ಸಹಾಯಧನ ವಿತರಣೆ

Suddi Udaya

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಬಗ್ಗೆ ಆರೋಪ, ಅಪಪ್ರಚಾರ ಮಾಡಿದ ಹಿನ್ನೆಲೆ: ಸುದ್ದಿ ಬಿಡುಗಡೆ ಪತ್ರಿಕೆಯ ಇಬ್ಬರ ಸದಸ್ಯತನ ಅಮಾನತು

Suddi Udaya

ನಯನಾಡು: ಅರೆಪ್ರಜ್ಞಾ ಸ್ಥಿತಿಯಲ್ಲಿ ಒಂದುವರೆ ವರ್ಷದ ಚಿರತೆ ಪತ್ತೆ

Suddi Udaya
error: Content is protected !!