26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ವರ್ತಕರ ಸಂಘದಿಂದ ರಸ್ತೆ ನಿರ್ಮಾಣದ ಬಗ್ಗೆ ಚರ್ಚಿಸಲು ಡಾ. ಡಿ ವೀರೇಂದ್ರ ಹೆಗ್ಗಡೆಯವರ ಭೇಟಿ

ಬೆಳ್ತಂಗಡಿ : ವರ್ತಕರ ಸಂಘದ ಪರವಾಗಿ ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ಇದರಿಂದ ವ್ಯಾಪಾರಿ ಸಮುದಾಯ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ ತಮ್ಮ ಮನವಿಯನ್ನು ಸಲ್ಲಿಸಿದರು.

ಡಾ. ಡಿ ವೀರೇಂದ್ರ ಹೆಗ್ಗಡೆಯವರು ಕೂಡ ಈ ರಸ್ತೆ ನಿರ್ಮಾಣದಿಂದ ಎಲ್ಲರಿಗೂ ಆಗುವ ಸಮಸ್ಯೆಯಿಂದ ಅಸಮಾಧಾನವನ್ನು ವ್ಯಕ್ತಪಡಿಸಿದರು. ಕೂಡಲೇ ನಮ್ಮ ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವರಿಗೆ ಪತ್ರ ಬರೆಯಲು ತಮ್ಮ ಆಪ್ತ ಕಾರ್ಯದರ್ಶಿಗೆ ಆದೇಶಿಸಿದ್ದಾರೆ. ಸಂಘದ ಮನವಿಯಲ್ಲಿ ಸರ್ವಿಸ್ ರಸ್ತೆಯನ್ನು ರದ್ದು ಪಡಿಸಿ ಉಜಿರೆಯಿಂದ ಧರ್ಮಸ್ಥಳಕ್ಕೆ 4 ಪಥದ ರಸ್ತೆ ಮಾದರಿಯಂತೆ ರಸ್ತೆ ಅಗಲ ಮಾಡಿ ಚರಂಡಿಯನ್ನು ರಸ್ತೆಯ 2 ಬದಿಯಲ್ಲಿ ಸ್ಥಳಂತರಿಸಲು ಮನವಿ ಮಾಡಿದರು.


ವರ್ತಕರ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೊ, ಉಪಾಧ್ಯಕ್ಷ ಶಶಿಧರ ಪೈ, ಕಾರ್ಯದರ್ಶಿ ಲಾನ್ಸಿ ಪಿರೇರ, ಕಾರ್ಯಕಾರಿ ಸಮಿತಿ ಸದಸ್ಯರಾದ ಶೀತಲ್ ಜೈನ್, ವೀನ್ಸo ಟ್ ಡಿಸೋಜಾ, ಶರ್ಮಿಳಾ ಮೋರಸ್ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ : ಅಕ್ರಮವಾಗಿ ಕಬ್ಬಿಣದ ಗುಜರಿ ವಸ್ತು ಸಾಗಾಟ: ಚಾಲಕ ಪರಾರಿ; ವಾಣಿಜ್ಯ ತೆರಿಗೆ ಇಲಾಖೆಯಿಂದ ಲಾರಿ ವಶಕ್ಕೆ

Suddi Udaya

ತೋಟತ್ತಾಡಿ : ಡಿ. ಮಜಲು ನಿವಾಸಿ ಪುರಂದರ ಕೋಟ್ಯಾನ್ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ : ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಉಜಿರೆ ಎಸ್.ಡಿ.ಎಮ್ ಕಾಲೇಜಿನ ವಿದ್ಯಾರ್ಥಿನಿ ಚಂದ್ರಿಕಾ ಆಯ್ಕೆ

Suddi Udaya

ವಕೀಲರ ಸಂಘ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಕ್ಲಾಸಿಕಲ್ ಟೈಗರ್ಸ್ ಧರ್ಮಸ್ಥಳ ಇವರಿಂದ “ಪಿಲಿಗೊಬ್ಬು” ಕಾರ್ಯಕ್ರಮ

Suddi Udaya

ಶಿಬಾಜೆ ಭಂಡಿಹೊಳೆಯಲ್ಲಿ ಪ್ರಕೃತಿ ಪ್ರಿಯರಿಂದ ರಸ್ತೆ ಸ್ವಚ್ಛತಾ ಅಭಿಯಾನ

Suddi Udaya

ಸ್ಟಾರ್ ಲೈನ್ ಶಾಲೆ ಮಂಜೊಟ್ಟಿ : ಶಾಲೆಯ ಸಲಹಾ ಸಮಿತಿ ಪ್ರಧಾನ ಸಲಹೆಗಾರರಾಗಿ ಡಾ. ಸಯ್ಯದ್ ಅಮೀನ್ ಅಹಮದ್ ಅಧಿಕಾರ ಸ್ವೀಕಾರ

Suddi Udaya
error: Content is protected !!