September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಲ್ಮಂಜ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

ಕಲ್ಮಂಜ : ಇತರ ಪ್ರಾಣಿಗಳಿಗೆ ಹೋಲಿಸಿದಲ್ಲಿ ಮಾನವರಲ್ಲಿ ಬಾಲ್ಯವು ದೀರ್ಘಕಾಲದ್ದಾಗಿದ್ದು ಬಾಲ್ಯದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ತಂದೆ ತಾಯಿಯರನ್ನು ಹಿರಿಯರನ್ನು ಗೌರವಿಸುವುದನ್ನು ಮಕ್ಕಳು ಕಲಿಯಬೇಕು ಎಂದು ಕಲ್ಮಂಜ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅವರು ಕಲ್ಮಂಜ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯಂದು ನೆಹರೂ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ದೀಪ ಪ್ರಜ್ವಲಿಸಿ ಮಾತನಾಡಿದರು.

ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಯಿತು. ಬಿ ಎಡ್ ಪ್ರಶಿಕ್ಷಣಾರ್ಥಿ ರಕ್ಷಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಹರಿಣಾಕ್ಷಿ ಸ್ವಾಗತಿಸಿ ಶಶಿಕಲಾ ಧನ್ಯವಾದವಿತ್ತರು. ಸಂತೋಷ್ ವಿಜೇತರ ಪಟ್ಟಿ ವಾಚಿಸಿದರು. ಶಾಲಾ ಶಿಕ್ಷಕಿಯರಾದ ಮಾಲಿನಿ ಹೆಗಡೆˌ ಹೇಮಲತಾˌ ಪ್ರೇಮಲತಾˌ ಸವಿತಾˌ ಸಾವಿತ್ರಿ ಸಿ ಡಿ ˌವಸಂತಿ ಎಂ ಸುಧೀಂದ್ರ ಪ್ರೇಮಾ ಯಚ್ ವಿ ಸಹಕರಿಸಿದರು.

Related posts

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಉಜಿರೆ ವಲಯ ಹಾಗೂ ಕೇಸರಿ ಗೆಳೆಯರ ಬಳಗ ಕುಂಜರ್ಪಇದರ ಆಶ್ರಯದಲ್ಲಿ ನಡೆಯುವ ” ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು” ಸೌಜನ್ಯ ಟ್ರೋಫಿ -2024 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಾ.22: ಬೆಳ್ತಂಗಡಿಯಲ್ಲಿ ಐ ಕೇರ್ ಒಪ್ಟಿಕಲ್ಸ್ ಶುಭಾರಂಭ

Suddi Udaya

ನಡ ಆಯುಷ್ಮಾನ್ ಆರೋಗ್ಯ ಸೇವಾ ಕೇಂದ್ರಕ್ಕೆ ಚಯರ್ ಕೊಡುಗೆ

Suddi Udaya

ಮಾಲಾಡಿ : ಸಂಪತ್ ರಾಜ್ ಭಟ್ ನಿಧನ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿ 9ನೇ ಸಹಾಯಧನ ಹಸ್ತಾಂತರ

Suddi Udaya

ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ: ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿಗಳ ಸಾಧನೆ

Suddi Udaya
error: Content is protected !!