March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕದಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕದಲ್ಲಿ ನ.18ರಂದು ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯನ್ನು ಆಸ್ಪತ್ರೆಯ ಕ್ಷೇಮ ಹಾಲ್‌ನಲ್ಲಿ ಶುಭಾರಂಭಗೊಂಡಿತು.

ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ ಸೀತಾರಾಮ ತೋಳ್ಪಾಡಿತ್ತಾಯ ಇವರ ನೇತೃತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ, ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯಾದ ಡಾ| ಕೆ. ವಿದ್ಯಾಕುಮಾರಿ, ಐ.ಎ.ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪ ಪ್ರಜ್ವಲನೆ ಮಾಡಿದ ನಂತರ ತಮ್ಮ ಶುಭನುಡಿಗಳಲ್ಲಿ ಪ್ರಕೃತಿ ಮೂಲದಿಂದ ನಮ್ಮನ್ನು ಉಪಚರಿಸುವ ಹಾಗೂ ಜೀವನ ಶೈಲಿಗೆ ಒತ್ತು ಕೊಡುವ ಔಷಧಿರಹಿತ ವೈದ್ಯಕೀಯ ಪದ್ಧತಿಯಾದ ಪ್ರಕೃತಿ ಚಿಕಿತ್ಸೆಗೆ ಮನ್ನಣೆ ನೀಡೋಣ ಎಂದು ಹೇಳಿದರು. ತಪಸ್ಯ ಮಿತ್ರ ಫೌಂಡೇಶನ್ ಇದರ ಸಹ ಸಂಸ್ಥಾಪಕ ಡಾ.ದ್ವಾರಕನಾಥ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ತಮ್ಮ ನುಡಿಗಳಲ್ಲಿ ತಮ್ಮದೇ ಜೀವನದ ಅನುಭವಗಳನ್ನು ಹಂಚಿಕೊಂಡು, ಪ್ರಕೃತಿದತ್ತವಾದ ಪಥ್ಯಾಹಾರ ಸೇವನೆಯ ವಿಶೇಷ ಮಾಹಿತಿಯನ್ನು ನೀಡಿದರು. ಜಿಲ್ಲಾಧಿಕಾರಿಯವರನ್ನು ಸಂಸ್ಥೆಯ ವತಿಯಿಂದ ಕಾರ್ಯದರ್ಶಿಯವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ.ದ್ವಾರಕನಾಥ್ ರವರನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿದ ಆಸ್ಪತ್ರೆಯ ಮುಖ್ಯವೈದ್ಯಾಧಿಕಾಗಳಾಗಿರುವ ಡಾ.ಗೋಪಾಲ ಪೂಜಾರಿಯವರು ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಹಿನ್ನಲೆ ಮತ್ತು ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಯವರು 2024ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ ಸೀತಾರಾಮ ತೋಳ್ಪಾಡಿತ್ತಾಯರವರನ್ನು ಗೌರವಿಸಿದರು. ಡಾ.ಅಜಿತ್ ನೇತೃತ್ವದಲ್ಲಿ ಕಿರಿಯ ವೈದ್ಯರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯೋಗ ಪ್ರಾತ್ಯಕ್ಷಿತೆ ನಡೆಯಿತು. ಆಡಳಿತ ವಿಭಾಗದ ಸಿಬ್ಬಂದಿಗಳು ಪ್ರಾರ್ಥನೆ ಹಾಡುವ ಮುಖೇನ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಸ್ಥಾನಿಕ ವೈದ್ಯಾಧಿಕಾರಿಯಾದ ಡಾ.ಶೋಭಿತ್ ಶೆಟ್ಟಿಯವರು ಸ್ವಾಗತಿಸಿ ಪ್ರಸ್ತಾವನೆಯನ್ನು ಸಲ್ಲಿಸಿದರು. ಡಾ. ಪೂಜಾ ಜಿ ಎಸ್ ಕಾರ್ಯಕ್ರಮವನ್ನು ನಿರೂಪಿಸಿ ಡಾ. ಅನ್ವಿತ ಯು ಧನ್ಯವಾದವನ್ನಿತ್ತರು.

Related posts

ಪದ್ಮುಂಜ: ವಾಹನ ತಡೆದು ಅವಾಚ್ಯವಾಗಿ ನಿಂದಿಸಿ ಹಲ್ಲೆ : ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಧರ್ಮಸ್ಥಳದಲ್ಲಿ ಡಾ. ಹೆಗ್ಗಡೆಯವರ ಪಟ್ಟಾಭಿಷೇಕದ 56ನೇ ವರ್ಧಂತ್ಯುತ್ಸವದ ಅಂಗವಾಗಿ ಛದ್ಮವೇಷ ಸ್ಪರ್ಧೆ

Suddi Udaya

ಸೌಜನ್ಯ ಸಾವಿನ ಪ್ರಕರಣದ ತನಿಖೆ ನಡೆಸುವಂತೆ ಎಸ್‌.ಐ.ಟಿ ಅಧಿಕಾರಿಗಳಿಗೆ ದೂರು ನೀಡಿದ ಸೌಜನ್ಯ ತಾಯಿ ಕುಸುಮಾವತಿ

Suddi Udaya

ಉಜಿರೆಯಲ್ಲಿ ವಿಶ್ವಕರ್ಮ ಬ್ಯಾಂಕ್‌ನಿಂದ ಸ್ವಚ್ಛತಾ ಅಭಿಯಾನ

Suddi Udaya

ನಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya
error: Content is protected !!