32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಜೇನು ಕೃಷಿ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ : ಇತ್ತೀಚಿನ ದಿನಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಯುವಕರು ಜೇನುಕೃಷಿ ತರಬೇತಿಯಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಜೇನು ಹೇಗಿದೆ ಎಂದು ನೋಡಬೇಕಾದರೆ ಅದರ ಸಿಹಿಯನ್ನು ಸವಿಯಬೇಕು, ಬಿಸಿ ಅರ್ಥವಾಗಬೇಕಾದರೆ ಬೆಂಕಿ ಮುಟ್ಟು ಬೇಕು ಹಾಗೇಯೇ ರುಡ್ ಸೆಟ್ ಸಂಸ್ಥೆಗೆ ಬಂದರೆ ಮಾತ್ರ ಇಲ್ಲಿನ ವಿಶೇಷತೆ ತಿಳಿಯಲು ಸಾಧ್ಯ. ಒಂದು ದೇಶ ಸುಭಿಕ್ಷೆ ಆಗಬೇಕಾದರೆ ಅಲ್ಲಿನ ಜನ ವಿದ್ಯಾವಂತರಾದರೆ ಸಾಲದು ಜನ ಪ್ರಜ್ಞಾವಂತರಗಾಬೇಕು. ನಾವು ಏನು ಕಲಿಯುತ್ತೇವೆ ಅದರಲ್ಲಿ ಶಿಸ್ತು, ಬದ್ಧತೆ ನಿರ್ಧರಿಸುವ ಸಾಮರ್ಥ್ಯ ಇದ್ದರೆ ಜೇನು ಕೃಷಿ ಮಾಡಲು ಸಾದ್ಯ. ಜೊತೆಗೆ ಆಧುನಿಕತೆಯ ಹೊಸ ಆವಿಷ್ಕಾರಗಳನ್ನು ಆಳವಡಿಸಿಕೊಂಡು ಸುಧಾರಣೆಗಳನ್ನು ಮಾಡಿಕೊಂಡು ಮುಂದರೆಯಬೇಕು. ಜೇನ ಅನ್ನು ಋರ್ತುಮಾನ ಮತ್ತು ಪ್ರಾದೇಶಿಕತೆಗೆ ಹಾಗೂ ಪರಿಸರದ ಬೆಳೆಗಳು ಇದೆ ಅವುಗಳಿಗೆ ಅನುಗುಣವಾಗಿ ಜೇನು ಕೃಷಿ ಮಾಡಬೇಕು. ಜೇನು ಬುದ್ದಿವಂತಹ ಹುಳು ಅದರ ಜೊತೆಗೆ ನಾವು ಮಾತನಾಡಲು ಕಲಿಯಬೇಕು. ಅಲ್ಲದೇ ಜೇನಿನ ಉಪ ಉತ್ಪನ್ನಗಳನ್ನು ತಯಾರಿಸುವ ಯೋಜನೆಗಳನ್ನು ಸಹ ಯೋಚನೆ ಮಾಡಿಕೊಳ್ಳಿ. ಜೇನು ಕೃಷಿ ಮಾಡುವಾಗ ಅತೀ ಕಡಿಮೆ ರಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುವ ಸ್ಥಳದಲ್ಲಿ ಮಾಡಿ. ಮಾರುಕಟ್ಟೆಯಲ್ಲಿ ಇರುವ ಶುದ್ಧ ಜೇನು ತುಪ್ಪ ಮತ್ತು ನಕಲಿ ಜೇನು ತುಪ್ಪದ ವ್ಯತ್ಯಾಸವನ್ನು ಸಹ ತಿಳಿದುಕೊಳ್ಳಬೇಕು. ಜೇನಿನ ಪ್ರತಿದಿನದ ದಿನಚರಿಯನ್ನು ಅಧ್ಯಯನ ಮಾಡಿ ಅದರ ಕಾರ್ಯನಿರ್ವಾಣೆಯ ವಿಧಾನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಪಡೆಯಬಹುದು ಎಂದು ಉಜಿರೆಯ ಪ್ರಗತಿ ಪರ ಕೃಷಿಕ ಜಗದೀಶ್ ಪ್ರಸಾದ್ ಅಭಿಪ್ರಾಯ ಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 10 ದಿನಗಳ ಕಾಲ ನಡೆದೆ ಜೇನು ಕೃಷಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ತಮ್ಮ ಅನುಭವದ ಹಂಚಿಕೊಂಡು ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿದರು ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕ ಕೆ.ಕರುಣಾಕರ ಜೈನ್ ವಂದಿಸಿದರು. ದಿನೇಶ್ ವಿಟ್ಲ ಪ್ರಾರ್ಥನೆ ಮಾಡಿದರು. ಶಿಬಿರಾರ್ಥೀಗಳಾದ ಸುದೀರ್ ಸಾಲ್ಯಾನ್, ರೋಹಿತ್, ಖಲೀಲ್, ಸುಬ್ರಮಣ್ಯ ತನ್ನ ತರಬೇತಿಯ ಅನುಭವ ಹಂಚಿಕೊಂಡರು.

Related posts

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾಗಿ ಜಯಾನಂದ ಕಲ್ಲಾಪು, ಉಪಾಧ್ಯಕ್ಷರಾಗಿ ಸುನಿಲ್ ಅಣವು

Suddi Udaya

ಧರ್ಮಸ್ಥಳ: ಬಂಟರ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನಿಧನ

Suddi Udaya

ಚಾರ್ಮಾಡಿ: ಕುಡಿಯುವ ನೀರಿಗಾಗಿ ಪಂಚಾಯತ್ ಎದುರು ಜನರ ಪ್ರತಿಭಟನೆ: ತಕ್ಷಣ ಗ್ರಾ.ಪಂ. ನಿಂದ ಸ್ಪಂದನೆ

Suddi Udaya

ತೆಕ್ಕಾರು ಗ್ರಾಮದ ಕುಟ್ಟಿಕಲ ಶಾಲೆಯ ಬಳಿ ರಸ್ತೆಗೆ ಉರುಳಿ ಬಿದ್ದ ಮರ

Suddi Udaya

ಬಿಜೆಪಿ ನಾವೂರು ಶಕ್ತಿಕೇಂದ್ರದ ಅಧ್ಯಕ್ಷರಾಗಿ ಪ್ರದೀಪ್ ನಾಗಜೆ ಆಯ್ಕೆ

Suddi Udaya
error: Content is protected !!