December 5, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಡಿ. ಕೆ.ಆರ್.ಡಿ.ಎಸ್ – ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ : ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ನ. 30 ರಂದು ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಮತ್ತು ಮಾಹಿತಿ ಕಾರ್ಯಕ್ರಮವು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಮೀಡಿಯ ಅಪೋಸ್ತಲೇಟ್ ನಿರ್ದೇಶಕರಾದ ವಂದನೀಯ ಫಾ. ಮ್ಯಾಥ್ಯೂ ತಾಯೆಕಾಟಿಲ್ ರವರು ಆಗಮಿಸಿ “ಜೀವನದಲ್ಲಿ ಯಾವುದೇ ಸುಖ ದುಃಖ, ನೋವುಗಳನ್ನು ಸಂತೋಷದಿಂದ ಸ್ವೀಕರಿಸಿಕೊಂಡು ಬದುಕೋಣ” ಎಂದು ಮಾತನಾಡಿ, ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು.

ಕಾಂಚಾಲ್ ಪೂಜಾ ಸ್ವ-ಸಹಾಯ ಸಂಘದ ಸದಸ್ಯರು ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮಕ್ಕೆ ಧನಸಹಾಯ ನೀಡಿದರು. ಪೂಜಾ ಸ್ವ-ಸಹಾಯ ಸಂಘ ಸದಸ್ಯೆ ಶ್ರೀಮತಿ ಶೃುತಿರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶ್ರೀಮತಿ ಪ್ರೇಮರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ಬಿನೋಯಿ ಎ.ಜೆ.ರವರು “ನಮ್ಮ ಪರಿಶ್ರಮ ಯಶಸ್ಸಿನ ಫಲದ ಕಡೆಗೆ ಜೀವನಕ್ಕೆ ಇನ್ನಷ್ಟು ಜೀವವನ್ನು ತುಂಬಬೇಕು” ಎಂದು ಪ್ರಾಸ್ತಾವಿಕ ನುಡಿಯನ್ನು ಆಡಿದರು.
ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಶ್ರೀಮತಿ ಶಾರದಾರವರು ಪ್ರಾರ್ಥನೆ ಹಾಡಿದರು. ಸಂಸ್ಥೆಯ ಕಾರ್ಯಕರ್ತರಾದ ಜೋನ್ಸನ್ ರವರು ಸ್ವಾಗತಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ವಿದ್ಯಾನಿಧಿ ಯೋಜನೆಯ ಸಂಯೋಜಕಿ ಶ್ರೀಮತಿ ಜಿನಿ ಪಿ.ಜೆ.ರವರು ಧನ್ಯವಾದವಿತ್ತರು. ಕಾರ್ಯಕರ್ತರಾದ ಮಾರ್ಕ್ ಡಿ ಸೋಜರವರು ಕಾರ್ಯಕ್ರಮ ನಿರೂಪಿಸಿದರು.

Related posts

ನಾಗೇಶ್ ಕುಮಾರ್ ಗೌಡ ರವರ ಅಭಿಮಾನಿ ಬಳಗದಿಂದ ಮಂಗಳೂರಿನ ಸಮಾಜ ಸೇವಕ ಪ್ರಮೋದ್ ಸಾಲಿಯಾನ್ ಬಲ್ಲಾಳ್ ಬಾಗ್ ಭೇಟಿ

Suddi Udaya

ಚಾರ್ಮಾಡಿ: ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ

Suddi Udaya

ಎಸ್‌ಡಿಎಂ ಪಿಯು ಕಾಲೇಜಿನಲ್ಲಿ ಸಂಸ್ಕೃತ ಭಾಷಾ ಉಪನ್ಯಾಸಕರ ಕಾರ್ಯಾಗಾರ

Suddi Udaya

ಮುಂಡಾಜೆ : ಶಿವಂ ಬೇಕರಿ ಮತ್ತು ಪ್ಲವರ್ ಡೆಕೋರೇಶನ್ ಶುಭಾರಂಭ

Suddi Udaya

ಇಂದಬೆಟ್ಟು ವಲಯದ ಗುರಿಪಳ್ಳ ಕಾರ್ಯಕ್ಷೇತ್ರದಲ್ಲಿ ‘ಬೆಳಕು’ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya
error: Content is protected !!