ಹೊಸಂಗಡಿ: ಹೊಸಂಗಡಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕಿನ್ನರ ಮೇಳ ತುಮರಿ ಕಲಾತಂಡದ ನೂತನ ಮಕ್ಕಳ ನಾಟಕ ‘ ‘ಇರುವೆ ಪುರಾಣ’ವು ಹೊಸಂಗಡಿ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಧರ್ ಶೆಟ್ಟಿ ಇವರ ಸಹಕಾರ ಹಾಗೂ ಮಾರ್ಗದರ್ಶನದಿಂದ ಪ್ರದರ್ಶನಗೊಂಡಿತು.
ಕಿನ್ನರ ಮೇಳ ರಂಗ ತಂಡವು ಪ್ರತಿ ವರ್ಷ ವಿನೂತನ ಕಥಾವಸ್ತುವನ್ನು ಒಳಗೊಂಡ ನಾಟಕಗಳನ್ನು ರಚಿಸಿ ಪ್ರದರ್ಶಿಸುತ್ತಿದೆ. ಮಾತ್ರವಲ್ಲದೆ ಸಮಾಜಕ್ಕೆ ಉತ್ತಮ ಮೌಲ್ಯಯುತ ಸಂದೇಶವನ್ನು ನೀಡುತ್ತಿದೆ. ‘ ಇರುವೆ ಪುರಾಣ ‘ ನಾಟಕವು ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ ಎಂಬ ಸಂದೇಶವನ್ನು ನೀಡುವ ನೂತನ ಕಲಾಕುಸುಮವಾಗಿದೆ.
ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಮನರಂಜನೆ ಹಾಗೂ ಒಳ್ಳೆಯ ಸಂದೇಶವು ಈ ನಾಟಕದ ಮೂಲಕ ದೊರೆಯಿತು. ಶಾಲೆಯ ಚಿತ್ರಕಲಾ ಶಿಕ್ಷಕ ಸುಧೀರ್ ಬಾಳೆಪುಣಿ ನಾಟಕ ಪ್ರದರ್ಶನಕ್ಕೆ ಬೇಕಾದ ಸರ್ವ ರೀತಿಯ ಸಹಕಾರವನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.