September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಳಂಜ ಬೊಂಟ್ರೋಟ್ಟುಗುತ್ತು ದೈವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ವರ್ಧಂತಿ ನೇಮೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ

ಬಳಂಜ: ಬೋಂಟ್ರೊಟ್ಟುಗುತ್ತು ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್ ವತಿಯಿಂದ ಡಿ.31 ರಂದು ಬಳಂಜ ಬೋಂಟ್ರೊಟ್ಟುಗುತ್ತು ಧರ್ಮದೈವಗಳ ಮೂಲಸ್ಥಾನದಲ್ಲಿ ಪ್ರಧಾನ ಕಲಶಾಭಿಷೇಕ ನಡೆಯಲಿದ್ದು ಆ ಪ್ರಯುಕ್ತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಳಂಜ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಆರ್ಚಕ ಮಂಜುನಾಥ್ ಭಟ್ ಬಿಡುಗಡೆಗೊಳಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಬೋಂಟ್ರೊಟ್ಟುಗುತ್ತು ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್‌ನ ಅಧ್ಯಕ್ಷ ಹರೀಶ್ ಕೆ. ಪೂಜಾರಿ ಬೈಲಬರಿ, ಪ್ರ. ಕಾರ್ಯದರ್ಶಿ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಬೋಂಟ್ರೊಟ್ಟುಗುತ್ತು ವ್ಯವಸ್ಥಾಪಕ ಗಣೇಶ್ ಪೂಜಾರಿ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಹೆಚ್.ಎಸ್, ಟ್ರಸ್ಟ್ ಸದಸ್ಯರಾದ ರಮಾನಾಥ ಶೆಟ್ಟಿ ಪಂಬಾಜೆ, ಮಹಾಬಲ ಪೂಜಾರಿ, ಕೃಷ್ಣಪ್ಪ ಪೂಜಾರಿ, ಸದಾನಂದ ಪೂಜಾರಿ, ಆನಂದ ದೇವಾಡಿಗ, ಬಳಂಜ ಗ್ರಾ.ಪಂ. ಉಪಾಧ್ಯಕ್ಷ ಯಶೋಧರ ಶೆಟ್ಟಿ, ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ಎಚ್. ದೇಜಪ್ಪ ಪೂಜಾರಿ, ಸಂದೇಶ್ ಪೂಜಾರಿ ಪೆರಾಜೆ, ಪ್ರವೀಣ್ ಗಾಂದೋಟ್ಟು, ಸದಾಶಿವ ಶೆಟ್ಟಿ ಬಳಂಜ ಹಾಗೂ ಇತರರು ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಂ ರತ್ನಮಾನಸ : ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ ಸಮಾರಂಭ

Suddi Udaya

ಕೊಕ್ಕಡದ ಅಂಗಡಿಯಿಂದ ರೂ.2 ಲಕ್ಷ ಹಣ ಕಳ್ಳತನ ಪ್ರಕರಣ: ಆರೋಪಿಗಳಿಬ್ಬರ ಬಂಧನ

Suddi Udaya

ಮಾಲಾಡಿ: ಕೊಲ್ಪದಬೈಲು ನಿವಾಸಿ ಚಂದ್ರಾವತಿ ನಿಧನ

Suddi Udaya

ಮುಂಡಾಜೆ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ನಂದಿನಿ ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಪೋಕ್ಸೋ ಕಾಯಿದೆಯ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ದಿವಿತ್ ದೇವಾಡಿಗ ಆಯ್ಕೆ

Suddi Udaya
error: Content is protected !!