ಪುಂಜಾಲಕಟ್ಟೆ- ಚಾರ್ಮಾಡಿ ರಸ್ತೆ ಅಗಲೀಕರಣ ಪ್ರಯುಕ್ತ, ವಿದ್ಯುತ್ ಕಂಬಗಳ ಸ್ಥಳಂತರ ಮಾಡುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, ಡಿ.12 ಗುರುವಾರದಂದು ಬೆಳಿಗ್ಗೆ 9:30ರಿಂದ ಸಂಜೆ 6 ಗಂಟೆ ವರೆಗೆ ಬೆಳ್ತಂಗಡಿ 33ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11ಕೆವಿ ಉಜಿರೆ, ಬೆಳಾಲು, ಬಂಗಾಡಿ, ಕೊಲ್ಲಿ ಹಾಗೂ ಕೊಯ್ಯೂರು ಫೀಡರ್ ಗಳಲ್ಲಿ ಹಾಗೂ ಟಿಬಿ ಕ್ರಾಸ್, ಕಾಶಿಬೆಟ್ಟು, ಪಿಲಿಚಂಡಿಕಲ್ಲು, ಮದ್ದಡ್ಕ ಪರಿಸರದಲ್ಲಿ ವಿದ್ಯುತ್ ನಿಲುಗಡೆ ಆಗುವುದಾಗಿ ಮೆಸ್ಕಾಂ ಇಲಾಖೆ ತಿಳಿಸಿದೆ.