25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ವಾರ್ಷಿಕೋತ್ಸವ ಸಮಾರಂಭ

ಮಡಂತ್ಯಾರು: ನಾವು ಯಾವ ಕುಟುಂಬದಲ್ಲಿ ಜನಿಸಿದೇವೆ, ಎಷ್ಟು ಬಡತನ ಇದೆ ಅದು ಮುಖ್ಯವಲ್ಲ, ಬರೀ ಹಣ ಮಾಡುವುದು ಮಾತ್ರ ಯಶಸ್ಸು ಅಲ್ಲ. ಸಂತೋಷದಿಂದ ಬದುಕಲು ಕಲಿಯುವುದೇ ನಿಜವಾದ ಯಶಸ್ಸು.ದೊಡ್ಡ ದೊಡ್ಡ ಪದವಿಗಳಿದ್ದರೂ ಗುರಿಯಿಲ್ಲದ ಜೀವನ ವ್ಯರ್ಥ.ನಮಗೆ ನಾವೇ ಆಸ್ತಿಗಳಾಗ ಬೇಕು. ಸಮಯಕ್ಕೆ ಸರಿಯಾಗಿ ಕೆಲಸ ಮಾಡಿದಾಗ ಸಮಯ ಯಾವತ್ತೂ ನಮ್ಮ ಜೊತೆಗೇ ಇರುತ್ತದೆ. ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಮೂಡುಬಿದಿರೆ ಲೆಕ್ಸಾ ಲೈಟಿಂಗ್ ಟೆಕ್ನಾಲಜಿ ಲಿಮಿಟೆಡ್ ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರೊನಾಲ್ಡ್ ಸಿಲ್ವನ್ ಡಿಸೋಜ ಹೇಳಿದರು.

ಅವರು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.


ವಿದ್ಯಾರ್ಥಿಗಳು ಚಿಕ್ಕ ಚಿಕ್ಕ ಕೆಲಸಗಳಲ್ಲಿ ಭಾಗಿಯಾಗ ಬೇಕು.ದುರಭ್ಯಾಸಗಳಿಗೆ ಬಲಿಯಾಗದೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು.ಸವಾಲನ್ನು ಮೆಟ್ಟಿ ನಿಂತು ಮುಂದೆ ಸಾಗುವನು ಜೀವನದಲ್ಲಿ ಸಫಲನಾಗುತ್ತಾನೆ ಎಂದು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.


ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಜೊತೆ ಕಾರ್ಯದರ್ಶಿ ವಂ|ಡಾ|ಸ್ಟ್ಯಾನಿ ಗೋವಿಯಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೋರಸ್ ಗೌರವ ಅತಿಥಿಗಳಾಗಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿರುವ ರೊನಾಲ್ಡ್ ಸಿಲ್ವನ್ ಡಿಸೋಜ ಅವರು ಲೈಟಿಂಗ್ ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಗಾಗಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು


ಸೇಕ್ರೆಡ್ ಹಾರ್ಟ್ ಪ್ರೌಢ ಶಾಲಾ ಹಾಗೂ ಕಾಲೇಜು ವಿಭಾಗದ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಐವನ್ ಸಿಕ್ವೇರಾ, ವಿಲಿಯಂ ಪಿಂಟೋ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ , ಕಾಲೇಜು ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗ್ಲೆನ್ ಪ್ರೀತಂ ರೊಡ್ರಿಗಸ್, ಪ್ರೌಢಶಾಲಾ ವಿಭಾಗದ ಮಹಮ್ಮದ್ ಸಫ್ವಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಸೂರಜ್ ಚಾರ್ಲ್ಸ್ ನ್ಯೂನೆಸ್ ವಾರ್ಷಿಕ ವರದಿ ವಾಚಿಸಿದರು. ಸೇಕ್ರೆಡ್ ಹಾರ್ಟ್ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶಾಂತಿ ಮೇರಿ ಡಿಸೋಜ ಸ್ವಾಗತಿಸಿದರು. ಉಪನ್ಯಾಸಕರುಗಳಾದ ವಿನ್ಸೆಂಟ್ ರೊಡ್ರಿಗಸ್ ಸಂಸ್ಥಾಪಕರಾದ ದಿ. ವಂ| ಲಿಗೋರಿ ಡಿಸೋಜ ರವರಿಗೆ ನುಡಿನಮನ ಸಲ್ಲಿಸಿದರು, ಹೇಮಲತಾ ಎಂ ವಂದಿಸಿದರು, ಸರಿತಾ ಶರಲ್ ಅಲ್ಮೇಡಾ ಹಾಗೂ ಜೊಯಿಲಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು.

Related posts

ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರು ಮಾಡಿ ಕೊಡುವುದಾಗಿ ನಂಬಿಸಿ, ರೂ. 4.95 ಲಕ್ಷ ವಂಚನೆ ಆರೋಪ : ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಪೆರಿಂಜೆಯಲ್ಲಿ ಶ್ರೀ ಧ.ಮಂ.ಪ್ರೌ.ಶಾಲೆಯ ಎನ್ನೆನ್ನೆಸ್ ವಾರ್ಷಿಕ ಶಿಬಿರದ ಶಿಬಿರಜ್ಯೋತಿ

Suddi Udaya

ಬೆಳ್ತಂಗಡಿ : ಹಳೇಕೋಟೆ ಬಳಿ ಪಿಕಪ್ ಗೆ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು ; ಮತ್ತೋರ್ವ ಗಂಭೀರ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಬೆಳ್ತಂಗಡಿ ಎಸ್.ಡಿ.ಎಂ. ಶಾಲಾ ವಿದ್ಯಾರ್ಥಿ ಅಭಿಷೇಕ್ ತಾಲೂಕಿಗೆ ಪ್ರಥಮ

Suddi Udaya

ಗುರುವಾಯನಕೆರೆ: ನಿಲ್ಲಿಸಿದ್ದ ಮೋಟಾರ್‌ ಸೈಕಲ್‌ ಕಳವು

Suddi Udaya

ಓಡಿಲ್ನಾಳ : ಭದ್ರಕಜೆ ಯುವಶಕ್ತಿ ಫ್ರೆಂಡ್ಸ್ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!