25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆ ವಿಶಾಲ್ ಸೇವಾ ಟ್ರಸ್ಟ್ ನಿಂದ ಬದನಾಜೆ ಶಾಲೆಗೆ ಕೊಡುಗೆ ಹಸ್ತಾಂತರ

ಉಜಿರೆ : ಇಲ್ಲಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬದನಾಜೆಯ ಸ್ಮಾರ್ಟ್ ಕ್ಲಾಸ್ ನಿರ್ವಹಿಸುತ್ತಿರುವ ಶಿಕ್ಷಕಿಯ ಒಂದು ವರ್ಷದ ವೇತನಕ್ಕೆ ಅನುಕೂಲವಾಗುವಂತೆ ರೂ. 50,000 ಮೊತ್ತದ ಚೆಕ್ಕನ್ನು ಶಾಲಾ ಮುಖ್ಯಶಿಕ್ಷಕಿ ಲಲಿತಾ ಕುಮಾರಿಯವರಿಗೆ ವಿಶಾಲ್ ಸೇವಾ ಟ್ರಸ್ಟ್ ಉಜಿರೆ (ರಿ) ಇದರ ಮ್ಯಾನೇಜಿಂಗ್ ಟ್ರಸ್ಟಿ, ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವಲೇರಿಯನ್ ಡಿಸೋಜಾ ಹಸ್ತಾಂತರ ಮಾಡಿದರು.

ದೇಣಿಗೆ ನೀಡಿ ಮಾತನಾಡಿದ ವಲೇರಿಯನ್ ಡಿಸೋಜ ರವರು,’ ಬದನಾಜೆ ಶಾಲೆಯ ಹಳೆ ವಿದ್ಯಾರ್ಥಿಯಾಗಿ ಶಾಲೆಗೆ ಕೊಡುಗೆ ನೀಡಲು ಬಹಳ ಸಂತೋಷವಾಗುತ್ತಿದೆ. ಈ ದೇಣಿಗೆ ಹಣವು ನನ್ನ ಪತ್ನಿಯ ಪಿಂಚಣಿಯ ಭಾಗವಾಗಿದ್ದು, ಈ ಶಾಲೆಯ ಶೈಕ್ಷಣಿಕ ಚಟುವಟಿಕೆಗಳನ್ನು ಗಮನಿಸಿ ಇಲ್ಲಿಗೆ ಈ ಕೊಡುಗೆ ನೀಡುತ್ತಿದ್ದೇವೆ’ ಎಂದರು.


ವಿಶಾಲ್ ಸೇವಾ ಟ್ರಸ್ಟ್ ಉಜಿರೆಯ ಶಿಕ್ಷಕ ದಂಪತಿಗಳಾದ ವಲೇರಿಯನ್ ಡಿಸೋಜ ಮತ್ತು ಫ್ಲೋರಿನ್ ಡಿಸೋಜ ರವರು ತಮ್ಮ ಮಗನ ಹೆಸರಿನಲ್ಲಿ ಸ್ಥಾಪನೆ ಮಾಡಿದ್ದು, ಹಲವು ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಮಾಡುತ್ತಿದೆ.
ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಯಂ.ಸಿ. ಅಧ್ಯಕ್ಷ ಅನಿಲ್ ಡಿಸೋಜಾ, ಪೋಷಕರು, ಮಾಚಾರಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ವಾಟ್ಸಾಪ್ನಲ್ಲಿ ಸ್ಟೇಟಸ್ ಹಾಕಿದ ವಿಚಾರದಲ್ಲಿ ಜಾತಿ ನಿಂದನೆ ಆರೋಪ: ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರಿಗೆ ಜಾಮೀನು

Suddi Udaya

ಮೇ 18: ವಿದ್ಯುತ್ ನಿಲುಗಡೆ

Suddi Udaya

ಕುಕ್ಕೇಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ

Suddi Udaya

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: 6ನೇ ಆರೋಪಿ ಮಹಮ್ಮದ್ ಶರೀಫ್ ನ್ನು ಬಂಧಿಸಿದ ಎನ್.ಐ.ಎ ಅಧಿಕಾರಿಗಳ ತಂಡ

Suddi Udaya

ಅರಸಿನಮಕ್ಕಿ ಗ್ರಾ.ಪಂ.ನಲ್ಲಿ ಗಾಂಧೀ ಜಯಂತಿ ಆಚರಣೆ

Suddi Udaya
error: Content is protected !!