33 C
ಪುತ್ತೂರು, ಬೆಳ್ತಂಗಡಿ
December 19, 2024
Uncategorized

ಕನ್ಯಾಡಿ: ಬೈಕ್ – ಬಸ್ಸು ನಡುವೆ ಅಪಘಾತ: ಬೈಕ್ ಸವಾರ ಗಂಭೀರ ಗಾಯ

ಕನ್ಯಾಡಿ: ಧರ್ಮಸ್ಥಳ ಸಮೀಪದ ಕನ್ಯಾಡಿಯಲ್ಲಿ ಬೈಕಿಗೆ ಬಸ್ ಡಿಕ್ಕಿ ಹೊಡೆದು ಸವಾರ ಗಂಭೀರ ಗಾಯಗೊಂಡ ಘಟನೆ ಡಿ.18 ರಂದು ತಡ ರಾತ್ರಿ ನಡೆದಿದೆ.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾಡಿ ಸಮೀಪ ಬೆಂಗಳೂರಿಗೆ ತೆರಳುತಿದ್ದ ಖಾಸಗಿ ಬಸ್ ಧರ್ಮಸ್ಥಳದಿಂದ ಉಜಿರೆ ಕಡೆ ಬರುತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ಬೈಕ್ ಸವಾರ ಉಜಿರೆ ನಿವಾಸಿ ಸುರೇಂದ್ರ ಗೌಡ ಗಂಭೀರ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Related posts

ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷರಾಗಿ ಹೇಮಾವತಿ, ಉಪಾಧ್ಯಕ್ಷರಾಗಿ ಪ್ರಿಯಾ ಆಯ್ಕೆ

Suddi Udaya

ವೇಣೂರು ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದಿಂದ ರಕ್ಷಿತ್ ಶಿವರಾಂರವರಿಗೆ ಅಭಿನಂದನೆ

Suddi Udaya

ಅರಣ್ಯ ಇಲಾಖೆಯಿಂದ ಪ್ರಗತಿ ಬಂಧು ತಂಡಗಳಿಗೆ ಗಿಡ ವಿತರಣೆ

Suddi Udaya

ಗುಂಡೂರಿ ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನದ ಸೇವಾಶ್ರಮದಲ್ಲಿ ಶುಶ್ರೂಷೆಯ ಪಡೆಯುತ್ತಿದ್ದ ವ್ಯಕ್ತಿ ನಾಪತ್ತೆ

Suddi Udaya

ತಣ್ಣೀರುಪಂತ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಸಿನ ಮನೆ ಶಿಶು ಪಾಲನಾ ಕೇಂದ್ರ ಉದ್ಘಾಟನೆ

Suddi Udaya

ಸುಬ್ರಹ್ಮಣ್ಯದಲ್ಲಿದ್ದ ನಿರ್ಗತಿಕ ಬೆಂಗಳೂರಿನ ಜನ ಸ್ನೇಹಿ ಕೇಂದ್ರಕ್ಕೆ

Suddi Udaya
error: Content is protected !!