ಬೆಳ್ತಂಗಡಿ: ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಬೆಳ್ತಂಗಡಿ ಲೋಬೊ ಮೋಟಾರ್ಸ್‌ನ ಟಿವಿಎಸ್ ಶೋರೂಮ್‌ನ ಎಲ್ಲಾ ಸಿಬ್ಬಂದಿಗಳೊಂದಿಗೆ ಆಚರಣೆ ಮಾಡಲಾಯಿತು.
ಲೋಬೋ ಮೋಟಾರ್ಸ್ ಸಂಸ್ಥೆಯ ಮಾಲಕರಾದ ರೊನಾಲ್ಡ್ ಲೋಬೊ ಸ್ವಾಗತಿಸಿ ಹಬ್ಬದ ಪ್ರಾಮುಖ್ಯತೆಯನ್ನು ವಿವರಿಸಿದರು.
ಹಬ್ಬದ ಸಂದೇಶವನ್ನು ಪ್ರಿಯ ಮೆಂಡೊನ್ಸರವರು ನೀಡಿದರು. ಸಂಸ್ಥೆಯ ಮ್ಯಾನೇಜರ್ ಅಶೋಕ್ ಮೋನಿಸ್, ವರ್ಕ್ ಶಾಪ್ ಮ್ಯಾನೇಜರ್ ಗಣೇಶ್ ಕುಲಾಲ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಸಂಭ್ರಮಿಸಿದರು.