26.5 C
ಪುತ್ತೂರು, ಬೆಳ್ತಂಗಡಿ
September 20, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಎಸ್ ಡಿ ಎಮ್ ಸಂಸ್ಥೆಗಳ ಅಂತರ್ ಪ್ರೌಢಶಾಲಾ ಬಾಲಕ -ಬಾಲಕಿಯರ ಕ್ರೀಡಾಕೂಟ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ರೀಡಾ ವಿಭಾಗ ಆಯೋಜಿಸಿದ ಎಸ್ ಡಿ ಎಂ ಸಂಸ್ಥೆಗಳ ಅಂತರ್ ಪ್ರೌಢಶಾಲಾ ಬಾಲಕ – ಬಾಲಕಿಯರ ಕ್ರೀಡಾಕೂಟವು ಡಿ.31ರಂದು ಇಂದ್ರಪ್ರಸ್ಥ ಕ್ರೀಡಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ ಡಿ ಎಂ ಶಿಕ್ಷಣ ಸಂಸ್ಥೆ ಉಜಿರೆಯ ಕಾರ್ಯದರ್ಶಿಯಾದ ಡಾ. ಸತೀಶ್ ಚಂದ್ರ ಎಸ್ ಹಾಗೂ ಮುಖ್ಯ ಅತಿಥಿಯಾಗಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎ ಕುಮಾರ್ ಹೆಗ್ಡೆ ಇವರು ದೀಪ ಪ್ರಜ್ವಲಿಸಿ, ಕ್ರೀಡಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿತ ಮಾತುಗಳನ್ನು ಆಡಿದರು. ಎಸ್ ಡಿ. ಎಮ್ ಸಂಸ್ಥೆಯ ಕ್ಷೇಮಪಾಲನ ಅಧಿಕಾರಿಯಾದ ಧನ್ಯ ಕುಮಾರ್, ಕ್ರೀಡಾ ವಿಭಾಗದ ಕಾರ್ಯದರ್ಶಿಯಾದ ರಮೇಶ್ ಹೆಚ್ ಉಪಸ್ಥಿತರಿದ್ದರು.

ಪಂದ್ಯಾಟದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಎಸ್ ಡಿ ಎಂ ಶಿಕ್ಷಣ ಸಂಸ್ಥೆ ಉಜಿರೆಯ ಕಾರ್ಯದರ್ಶಿಯಾದ ಸತೀಶ್ಚಂದ್ರ ಎಸ್, ಹಾಗೂ ಎಸ್ ಡಿ ಎಮ್ ಮಲ್ಟಿ- ಸ್ಪೆಷಾಲಿಟಿ ಹಾಸ್ಪಿಟಲ್ ಉಜಿರೆ ಇದರ ಚೀಫ್ ಮೆಡಿಕಲ್ ಆಫೀಸರ್ ಆದ ಡಾ. ಸಾತ್ವಿಕ್ ಜೈನ್ ಇವರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರಶಂಸೆ ಪಟ್ಟರು.


ಈ ಸಂದರ್ಭದಲ್ಲಿ ಎಸ್ ಡಿ ಎಮ್ ಕ್ರೀಡಾ ವಿಭಾಗದ ಕಾರ್ಯದರ್ಶಿ ಹಾಗೂ ಎಸ್ ಡಿ ಎಂ ಕಾಲೇಜಿನ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಎಸ್ ಡಿ ಎಂ ಜನಾರ್ಧನ ಪ್ರೌಢಶಾಲಾ ದೈಹಿಕ ಶಿಕ್ಷಕ ಗಿರೀಶ್ ನೆರವೇರಿಸಿದರು.
ಕ್ರೀಡಾ ಕಾರ್ಯದರ್ಶಿ ರಮೇಶ್ ಹೆಚ್ ಸ್ವಾಗತಿಸಿ , ಎಸ್ ಡಿ ಎಂ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಸಂದೇಶ ಪೂಂಜ ಧನ್ಯವಾದವಿತ್ತರು.

Related posts

ಉಜಿರೆ : ಹಲಕ್ಕೆ ನಿವಾಸಿ ಫ್ಲೋರಿನ್ ರೆಬೆಲ್ಲೋ ನಿಧನ

Suddi Udaya

ಬೆಳ್ತಂಗಡಿ : ಧನು ಪೂಜೆಗೆ ಹೋದ ಬಾಲಕನ ಶವ ಕೆರೆಯಲ್ಲಿ ಪತ್ತೆ ಪ್ರಕರಣ: ಪೊಲೀಸರಿಂದ ತೀವ್ರಗೊಂಡ ಶೋಧ ಕಾರ್ಯ

Suddi Udaya

ರೆಖ್ಯ: ಸಾರ್ವಜನಿಕ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಣಾ ಸಮಿತಿ ರಚನೆ

Suddi Udaya

ಎ.18: ಮುಂಡಾಜೆಯಲ್ಲಿ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಮತ್ತು ಶಟಲ್ ಬ್ಯಾಡ್‌ಮಿಂಟನ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ಕ್ರೈಸ್ಟ್‌ ಟ್ರೋಫಿ 2026

Suddi Udaya

ಕಾನರ್ಪ ಕೋಡಿಯಾಲ್ ಬೈಲ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕಾನರ್ಪ ಪ್ರೀಮಿಯರ್ ಲೀಗ್ – 2024 ಕ್ರಿಕೇಟ್ ಪಂದ್ಯಾಟ

Suddi Udaya

ನಡ: ಪಣಿಕ್ಕಲ ನಿವಾಸಿ ಧರ್ಣಪ್ಪ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!