ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ: ವೈಭವದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

ಬಂದಾರು: ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವವು ಜ.7ರಿಂದ ಜ.12ರ ವರೆಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವುದು.


ಇಂದು (ಜ.7) ಪೆರ್ಲ-ಬೈಪಾಡಿ ದೇವಸ್ಥಾನದ ಪರಿಸರದವರಿಂದ ಹಸಿರುವಾಣಿ ಸಮರ್ಪಣೆಯು ವಿಜೃಂಭಣೆಯಿಂದ ಜರುಗಿತು. ನಂತರ ತಂತ್ರಿಗಳ ಮತ್ತು ಪರಿವಾರದವರ ಆಗಮನ, ಸ್ವಾಗತ, ತೋರಣ ಮುಹೂರ್ತವು ಜರುಗಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಪ್ರಧಾನ ಸಂಚಾಲಕರಾದ ಬಾಲಕೃಷ್ಣ ಪೂಜಾರಿ ಬಜಗುತ್ತು, ಅಧ್ಯಕ್ಷರಾದ ಮಹಾಬಲ ಗೌಡ, ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾಜೆ ,ಕೋಶಾಧಿಕಾರಿ ಕೇಶವ ಗೌಡ ಕೊಂಗುಜೆ, ಬ್ರಹ್ಮಕಲಶೋತ್ಸವ ಜೊತೆ ಕಾರ್ಯದರ್ಶಿ ಸತೀಶ್ ಬಾಲಂಪಾಡಿ, ಹಸಿರು ವಾಣಿ ಸಂಚಾಲಕ ಶ್ರೀನಿವಾಸ ಗೌಡ, ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು ,ಕಾರ್ಯದರ್ಶಿ ಉಮೇಶ್ ಗೌಡ, ಅಂಗಡಿಮಜಲು, ಉದ್ಯಮಿಗಳಾದ ಜಯಣ್ಣ ಗೌಡ ಮೀನಂದೆಲು, ಬಂದಾರು ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಸದಸ್ಯರಾದ ಅನಿತಾ ಉದಯ ಕುರುಡಂಗೆ,ಅನುವಂಶೀಯ ಆಡಳಿತ ಮೊಕ್ತೇಸರರಾದ ಕುಕ್ಕಪ್ಪ ಗೌಡ, ಜೀರ್ಣೋದ್ದಾರ ಸಮಿತಿ ಮಾಜಿ ಅಧ್ಯಕ್ಷರಾದ ಆದಪ್ಪ ಗೌಡ, ಆಡಳಿತ ಮಂಡಳಿ ಮಾಜಿ ಅಧ್ಯಕ್ಷರಾದ ಹೊನ್ನಪ್ಪ ಗೌಡ ಸೋನಕುಮೇರು, ಡೀಕಯ್ಯ ಕoಚರೊಟ್ಟು ಹಾಗೂ ಆಡಳಿತ ಮಂಡಳಿ, ಬ್ರಹ್ಮಕಲಶೋತ್ಸವ ಸಮಿತಿಯ, ಎಲ್ಲಾ ಉಪಸಮಿತಿಯ ಸಂಚಾಲಕರು, ಸಹಸಂಚಾಲಕರು, ಸದಸ್ಯರು, ಭಕ್ತ ವೃಂದ ಉಪಸ್ಥಿತರಿದ್ದರು.

ಸಂಜೆ ವೈದಿಕ ಕಾರ್ಯಕ್ರಮಗಳು, ರಾತ್ರಿ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ, ಬೈಪಾಡಿ ಇವರಿಂದ ಭಜನಾ ಕಾರ್ಯಕ್ರಮ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಸಂಗೀತ ಗಾನ ಸಂಭ್ರಮ ನಡೆಯಲಿರುವುದು.

Related posts

ಬೆಳ್ತಂಗಡಿ:ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ ಸಾವು

Suddi Udaya

ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಜಯದಶಮಿಯ ವಿಶೇಷ ಪೂಜೆ ಹಾಗೂ ಆಡಳಿತ ಟ್ರಸ್ಟ್ ವತಿಯಿಂದ ಊರವರ ಭಕ್ತರ ಸಭೆ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಶ್ರೀ ಗುರುದೇವ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯಲ್ಲಿ ಅರ್ಹತೆ ಪಡೆದ ಉಜಿರೆಯ ಎಸ್.ಡಿ.ಎಂ. ಆಂ.ಮಾ. ಶಾಲೆ ಸ್ಕೌಟ್ ಮಾಸ್ಟರ್ ಕಿರಣ್‌ರಾಜ್ ಕೆ. ಆರ್.

Suddi Udaya

ಕುತ್ಲೂರು ಮನೆ ಕಳ್ಳತನ ಪ್ರಕರಣ: ಕುಖ್ಯಾತ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ ಬಂಧನ

Suddi Udaya
error: Content is protected !!