March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ದ.ಕ. ಜಿಲ್ಲೆಯ 7 ಮಸೀದಿಗಳಿಗೆ ಮೃತದೇಹ ಸಂರಕ್ಷಣಾ ಫ್ರೀಝರ್ ಹಸ್ತಾಂತರ

ಮಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ದ.ಕ. ಜಿಲ್ಲೆಯ ವಿವಿಧ ಮಸೀದಿಗಳಿಗೆ ಮಂಜೂರಾದ ಮೃತದೇಹ ಸಂರಕ್ಷಣಾ ಫ್ರೀಝರ್ ಬಾಕ್ಸ್‌ಗಳನ್ನು ಇತ್ತೀಚೆಗೆ ಆಯಾ ಜಮಾಅತ್ ಗಳಿಗೆ ಹಸ್ತಾಂತರಿಸಲಾಯಿತು.

ದ.ಕ. ಜಿಲ್ಲಾ ವಕ್ಫ್ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಡಾ. ಎ.ಕೆ ಜಮಾಲ್ ಅಧ್ಯಕ್ಷತೆ ವಹಿಸಿದ್ದರು.

ಬಳಿಕ ಮಾತನಾಡಿದ ಅವರು, ಅಲ್ಪಸಂಖ್ಯಾತ ಇಲಾಖೆ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಮತ್ತು ರಾಜ್ಯ ವಕ್ಫ್ ಸಮಿತಿ ಅಧ್ಯಕ್ಷ ಅನ್ವರ್ ಬಾಷಾ ಅವರ ಮುತುವರ್ಜಿಯಿಂದಾಗಿ ಈ ಮೃತದೇಹಗಳ ಸಂರಕ್ಷಣೆಗೆ ಅಗತ್ಯದ ಫ್ರೀಜರ್ ಬಾಕ್ಸ್‌ಗಳು ನಮ್ಮ ಜಿಲ್ಲೆಯ ಮಸೀದಿಗಳಿಗೂ ಸಿಗುವಂತಾಗಿದೆ. ಅಂತೆಯೇ ಜಮಾಅತ್ ಗಳಿಗೆ ಮೂಲಭೂತವಾದ ಇನ್ನಷ್ಟು ಸೌಕರ್ಯಗಳನ್ನು ಒದಗಿಸಿಕೊಡುವುದು ವಕ್ಫ್ ಮಂಡಳಿಯ ಜವಾಬ್ದಾರಿಯೂ ಆಗಿದೆ. ಸರಕಾರದಿಂದ ಪಡೆದ ಸೌಲಭ್ಯಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಅರ್ಹರಿಗೆ ಇದರ ಪ್ರಯೋಜನ ಲಭಿಸುವಂತಾಗಬೇಕು ಎಂದರು.

ಮಂಗಳೂರು ಝೀನತ್ ಬಕ್ಸ್ ಜುಮಾ ಮಸೀದಿ ಬಂದರ್, ಜುಮಾ ಮಸ್ಜಿದ್ ಮತ್ತು ಹಝ್ರತ್ ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಉಳ್ಳಾಲ, ಬದ್ರಿಯಾ ಜುಮಾ ಮಸ್ಜಿದ್ 7ನೇ ಬ್ಲಾಕ್ ಕೃಷ್ಣಾಪುರ, ಮೊಹಿದ್ದೀನ್ ಜುಮಾ ಮಸ್ಜಿದ್ ಗಾಂಧಿನಗರ, ರಹ್ಮಾನಿಯಾ ಮಸ್ಜಿದ್ ಮತ್ತು ದರ್ಗಾ ಸಮಿತಿ ಕಾಜೂರು, ಬದ್ರಿಯಾ ಜುಮಾ ಮಸ್ಜಿದ್ ಮೂಡಬಿದಿರೆ ಮತ್ತು ಮೊಹಿಯುದ್ದೀನ್ ಜುಮಾ ಮಸ್ಜಿದ್ ಮಿತ್ತಬೈಲ್‌ ಇವಿಷ್ಟು ಜಮಾಅತ್ ಗಳಿಗೆ ಮೊದಲ ಹಂತದಲ್ಲಿ ಫ್ರೀಜರ್‌ಗಳನ್ನು ವಿತರಿಸಲಾಯಿತು.

ಈ ಸಮಾರಂಭದಲ್ಲಿ ವಕ್ಫ್ ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಜೆ.ಹೆಚ್ ಅಬೂಬಕರ್ ಸಿದ್ದೀಕ್ ಕಾಜೂರು, ಸಿರಾಜುದ್ದೀನ್, ಹನೀಫ್ ಮಲ್ಲೂರು, ಸುಳ್ಯ ಜಮಾಅತ್ ಅಧ್ಯಕ್ಷ ಕೆ ಎಮ್ ಮುಸ್ತಫಾ , ಮಿತ್ತಬೈಲ್ ಜಮಾಅತ್‌ನ ಅಧ್ಯಕ್ಷ ಮುಹಮ್ಮದ್, ಕಿಲ್ಲೂರು ಜಮಾಅತ್ ಅಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಮಾತನಾಡಿದರು.

ಅಭಿನಂದನೆ; ಕರ್ನಾಟಕ ಮಾಧ್ಯಮ ಅಕಾಡೆಮಿಯ 2023 ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಅಯ್ಕೆಯಾಗಿರುವ ವಾರ್ತಾಭಾರತಿ ಮಂಗಳೂರು ಬ್ಯುರೋದ ಹಿರಿಯ ವರದಿಗಾರ ಇಬ್ರಾಹಿಂ ಅಡ್ಕಸ್ಥಳ ಇವರನ್ನು ಜಿಲ್ಲಾ ವಕ್ಪ್ ಸಲಹಾ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.

ಸುಳ್ಯ ಪಟ್ಟಣ ಪಂಚಾಯತ್ ಸದಸ್ಯ ಉಮರ್, ಮೂಡಬಿದಿರೆ ಜಮಾಅತ್ ಅಧ್ಯಕ್ಷ ಅಬೂಬಕರ್, ಅಝೀಝ್ ಬೈಕಂಪಾಡಿ ಉಪಸ್ಥಿತರಿದ್ದರು.

ಜಿಲ್ಲಾ ವಕ್ಫ್ ಅಧಿಕಾರಿ ಎಂ. ಅಬೂಬಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಲಹಾ ಸಮಿತಿ ಸದಸ್ಯ ಸೈದುದ್ದೀನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

ಮಡಂತ್ಯಾರು: ಪಾರೆಂಕಿ ನಿವಾಸಿ ರೋಬರ್ಟ್ ಡಿಸೋಜಾ ನಿಧನ

Suddi Udaya

ಕಳೆಂಜ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಜ.7: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂತ್ರರೋಗ ತಪಾಸಣಾ ಶಿಬಿರ

Suddi Udaya

ಮದ್ದಡ್ಕ ಶ್ರೀರಾಮ ಸೇವಾ ಸಮಿತಿ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಮದ್ದಡ್ಕ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯಕ್ತ ಮೊಸರು ಕುಡಿಕೆ ಉತ್ಸವ

Suddi Udaya

ಪುಂಜಾಲಕಟ್ಟೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ 17.40 ಅಡಿ ಎತ್ತರದ ಶ್ರೀರಾಮ ಮಂದಿರದ ವರ್ಣ ರಂಜಿತ ಕಟ್ಟೌಟ್ ನಿರ್ಮಾಣ

Suddi Udaya

ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ – ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಇದರ ಆಶ್ರಯದಲ್ಲಿ : ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಉದ್ಘಾಟನೆ

Suddi Udaya
error: Content is protected !!