ಮಲವಂತಿಗೆ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ) ಯುವ ಬಿಲ್ಲವ ವೇದಿಕೆ ಮತ್ತು ಯುವವಾಹಿನಿ ಸಂಚಲನಾ ಸಮಿತಿ ಮಿತ್ತಬಾಗಿಲು- ಮಲವಂತಿಗೆ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾಭಿಷೇಕ ಬ್ರಹ್ಮಶ್ರೀ ಗುರು ಭವನ ಉದ್ಘಾಟನೆಯು ಜ.12ರಂದು ನಡೆಯಿತು.
ಉದ್ಘಾಟನೆಯನ್ನು ಕುದ್ರೋಳಿ ಗುರುಬೆಳದಿಂಗಳು ಫೌಂಡೇಶನ್ ನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ರಂಜನ್ ಜಿ ಗೌಡ, ವಾಸುದೇವ ರಾವ್ ಕಕ್ಕೆನೇಜಿ, ಶಿವಾನಂದ ರಾವ್, ಭಾ.ಜ.ಪ ಲಾಯಿಲ ಮಹಾಶಕ್ತಿ ಕೇಂದ್ರ ಪ್ರಭಾರಿ ಸದಾನಂದ ಪೂಜಾರಿ ಉಂಗಿಲಬೈಲು, ಬಂಗಾಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ, ನಾರಾಯಣ ಶೆಟ್ಟಿ, ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ವಿನಯಚಂದ್ರ, ಗುರುನಾರಾಯಣ ಸೇವಾ ಸಂಘ ಬಜ್ಪೆ ಘಟಕದ ಪದಾಧಿಕಾರಿಗಳು, ಮುಕುಂದ ಸುವರ್ಣ, ಭರತ್ ಎಪಿಎಂಸಿ, ಡಾ. ಪ್ರದೀಪ್ ಆರೋಗ್ಯ ಕ್ಲಿನಿಕ್ ನಾವೂರು, ಗಣೇಶ್ ಪೂಜಾರಿ, ನಾವೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಗಣೇಶ್ ಗೌಡ, ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದ ಮಾಜಿ ನಿರ್ದೇಶಕ ಗಂಗಾಧರ ಪರಾರಿ ಮನೆ ಇಂದಬೆಟ್ಟು, ಗಣೇಶ್ ಪ್ರಭು ನಾವೂರ, ಗ್ರಾಮಸ್ಥರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.