ಬೆಳ್ತಂಗಡಿ: ಸೇವೆ ಸಂಘಟನೆ ಸಾಮರಸ್ಯದ ಧ್ಯೇಯದೊಂದಿಗೆ ಕಳೆದ ಅನೇಕ ವರ್ಷಗಳಿಂದ ಸಮಾಜಮುಖಿಯಾಗಿ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಟೀಂ ಅಭಯಹಸ್ತ ಬೆಳ್ತಂಗಡಿ ಇದರ 8ನೇ ವರ್ಷದ ಕಾರ್ಯಕ್ರಮ ಜ.25 ಹಾಗೂ 26 ರಂದು ಅಳದಂಗಡಿಯಲ್ಲಿ ಜರುಗಲಿದೆ.
ಬೆಳ್ತಂಗಡಿ ತಾಲೂಕು ಮಟ್ಟದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ,ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ಮಹಿಳೆಯರ ಖೋಖೋ,ಅಳದಂಗಡಿ ವಲಯ ಮಟ್ಟದ ಪುರುಷರ ಖೋಖೋ,ಸೇವಾ ಯೋಜನೆಗಳ ಹಸ್ತಾಂತರದ ಚಾಲನೆ,ಪ್ರತಿಭಾ ಪುರಸ್ಕಾರ,ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಘಟನೆಗಳಿಗೆ,ಮಹನೀಯರಿಗೆ ಗೌರವ ಸನ್ಮಾನ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಿತ ಕಲ್ಲಡ್ಕ ವಿಠ್ಠಲ ನಾಯಕ್ ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ ನಿತ್ಯನೂತನ ಕಾರ್ಯಕ್ರಮ ಜರುಗಲಿದೆ ಎಂದು ಸಂಘಟನೆಯ ಪ್ರಧಾನ ಸಂಚಾಲಕ ಸಂದೀಪ್ ಎಸ್ ನೀರಲ್ಕೆ ತಿಳಿಸಿದರು.