ಕೊಕ್ಕಡ: ಇಲ್ಲಿಯ ಸೌತಡ್ಕ ಪಾರ್ಕಿಂಗ್ ಸ್ಥಳದಲ್ಲಿ ನೆಟ್ಟ ಗಿಡಗಳಿಗೆ ಬೇಲಿಯನ್ನು ಅಳವಡಿಸಿದ್ದು, ಏಕಾಏಕಿ ಆ ಬೇಲಿಯನ್ನು ಯಾರೋ ಕಿತ್ತೆಸೆದ ಘಟನೆ ಜ.11 ರಂದು ನಡೆದಿದೆ.
ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ಕ್ಷೇತ್ರ ಸೌತಡ್ಕದಲ್ಲಿ ಸುಮಾರು 250ಕ್ಕೂ ಹೆಚ್ಚಿನ ನೆಟ್ಟ ಗಿಡಗಳಿಗೆ ಬೇಲಿ ಹಾಕಿ ಸಂರಕ್ಷಿಸಲಾಗಿತ್ತು ಆದರೆ ಯಾರೋ ಬೇಲಿಯನ್ನು ಕಿತ್ತೆಸೆದಿದ್ದು, ಸಂರಕ್ಷಿಸಲಾಗಿದ್ದ ಗಿಡಗಳನ್ನು ಆಡು, ದನಗಳು ಹಾಗೂ ಇತರ ಸಾಕು ಪ್ರಾಣಿಗಳು ತಿಂದು ನಾಶ ಮಾಡಿದೆ.
ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಪ್ರಶಾಂತ್ ಪೂವಾಜೆ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಿರಿಯ ಗುಮಾಸ್ತ ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ ಇತರನ್ನು ಸಂಪರ್ಕಿಸಿದಾಗ ಇದರ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.